Kannada News Now

1.8M Followers

6ನೇ ದಿನಕ್ಕೆ ಕಾಲಿಟ್ಟ 'ಸಾರಿಗೆ ನೌಕರರ ಮುಷ್ಕರ' : ಇಂದು ರಾಜ್ಯಾಧ್ಯಂತ 8 ಗಂಟೆಗೆ ಸಂಚಾರ ಆರಂಭಿಸಿದ 'ಸಾರಿಗೆ ಬಸ್'ಗಳು ಎಷ್ಟು ಗೊತ್ತಾ.?

12 Apr 2021.09:08 AM

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಇಂದು ಮುಂದುವರೆದಿದೆ. ಇದರಿಂದಾಗಿ ಯುಗಾದಿ ಹಬ್ಬಕ್ಕೆ ಹೋಗೋರಿಗೆ ಸಾರಿಗೆ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಇಂದು 8 ಗಂಟೆಯವರೆಗೆ ರಾಜ್ಯಾಧ್ಯಂತ ಸಾರಿಗೆ ಮುಷ್ಕರದ ನುಡುವೆ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದ್ದು, 1282 ಬಸ್ ಗಳು ಸಂಚಾರ ಆರಂಭಿಸಿವೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು 8 ಗಂಟೆಯವೇಳೆಗೆ ರಾಜ್ಯಾಧ್ಯಂತ KSRTC 601 ಬಸ್ ಗಳು, BMTC 184 ಬಸ್ ಗಳು, NEKRTC 327 ಬಸ್ ಗಳು, NWKRTC 170 ಬಸ್ ಗಳು ಸೇರಿದಂತೆ ಒಟ್ಟು 1282 ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ.

ಅಂದಹಾಗೇ, ನಿನ್ನೆ ರಾಜ್ಯದಲ್ಲಿ 24 ಗಂಟೆಯಲ್ಲಿ ಹೊಸದಾಗಿ 10,250 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು.

ಬೆಂಗಳೂರು ನಗರದ 7,584 ಜನರು ಸೇರಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 10,65,290ಕ್ಕೆ ಏರಿಕೆಯಾಗಿದೆ. ನಿನ್ನೆ 2,638 ಜನರು ಸೇರಿದಂತೆ ಇದುವರೆಗೆ 9,83,157 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 69,225 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆಯು ಕೊರೋನಾ ಹೆಲ್ತ್ ಬುಲೆಟಿನ್ ಮೂಲಕ ತಿಳಿಸಿತ್ತು.

ಅಲ್ಲದೇ ರಾಜ್ಯದಲ್ಲಿ ಮತ್ತೆ ಕಿಲ್ಲರ್ ಕೊರೋನಾ ಆರ್ಭಟಿಸಿತ್ತು. ನಿನ್ನೆ ಬೆಂಗಳೂರು ನಗರದಲ್ಲಿ 27 ಸೋಂಕಿತರು, ಬಾಗಲಕೋಟೆ, ಬೀದರ್, ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು, ಮೈಸೂರಿನಲ್ಲಿ ಮೂವರು, ಕಲಬುರ್ಗಿಯಲ್ಲಿ ಇಬ್ಬರು ಹಾಗೂ ಬೆಳಗಾವಿಯಲ್ಲಿ ಮೂವರು ಸೇರಿದಂತೆ ಒಟ್ಟು 40 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಇದರಿಂದಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 12,889ಕ್ಕೆ ಏರಿಕೆಯಾಗಿತ್ತು.

ಇದರಿಂದಾಗಿ ನಿನ್ನೆ ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ತುರ್ತು ಸಭೆ ನಡೆಯಿತು. ಇಂತಹ ಸಭೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವಂತ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ನಂತ್ರ, 10 ದಿನ ಲಾಕ್ ಡೌನ್ ಘೋಷಣೆ ಮಾಡುವಂತೆಯೂ ಸೂಚಿಸಲಾಗಿದೆ ಎನ್ನಲಾಗುತ್ತಿತ್ತು. ಆದ್ರೇ ಲಾಕ್ ಡೌನ್ ಬಿಟ್ಟು ಬೇರೆಯ ಸಲಹೆ ಕೂಡ ನೀಡುವಂತೆ ಸಚಿವರು ತಜ್ಞರಲ್ಲಿ ಮನವಿ ಮಾಡಿದ್ದರು ಎನ್ನಲಾಗಿತ್ತು.

ಇಂತಹ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ.ಡಾ.ಕೆ.ಸುಧಾಕರ್, ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸುವಂತೆ ಆರೋಗ್ಯ ಇಲಾಖೆಯ ತಾಂತ್ರಿಕ ತಜ್ಞರ ಸಲಹಾ ಸಮಿತಿ ತಿಳಿಸಿದೆ. ಕೊರೋನಾ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರದಂತ ನಿಯಮವನ್ನು ಪಾಲಿಸಬೇಕಿದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಈಗ ಯುಗಾದಿ ಹಬ್ಬ ಹತ್ತಿರ ಬಂದಿದೆ. ಹಬ್ಬಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಊರಿಗೆ ತೆರಳೋ ಜನರ ಸಂಖ್ಯೆ ಹೆಚ್ಚಾಗಿದೆ. ಇಂತಹ ಜನರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳಿದ್ದರೇ ಹೋಗದೇ ತಾವು ಇರುವಂತ ಸ್ಥಳದಲ್ಲೇ ಇರೋದು ಒಳಿತು ಎಂಬುದಾಗಿ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಸೋಂಕಿನ ಲಕ್ಷಣಗಳು 10 ದಿನಗಳ ನಂತ್ರವೇ ಗೊತ್ತಾಗೋದ್ರಿಂದ, ಕೊರೋನಾ ಸೋಂಕಿನ ಲಕ್ಷಣಗಳಿರೋರು ಊರಿಗೆ ಹೋಗಿ, ಹಳ್ಳಿಯಲ್ಲಿನ ಜನರಿಗೂ ಕೊರೋನಾ ಸೋಂಕನ್ನು ಹರಡೋ ಮೊದಲು ಊರಿಗೆ ಹೋಗದೇ ಇರೋದು ಒಳಿತು. ಈ ಬಗ್ಗೆ ರಾಜ್ಯದ ಜನರು ಗಮನವಹಿಸುವಂತೆ ಮನವಿ ಮಾಡಿದರು.

ಸೋ ನೀವು ಊರಿಗೆ ಯುಗಾದಿ ಹಬ್ಬಕ್ಕೆ ಹೋಗೋಕೆ ರೆಡಿಯಾಗಿ, ಕೊರೋನಾ ರೋಗದ ಲಕ್ಷಣಗಳಿದ್ದರೇ ಹೋಗದೇ ಇರೋದು ಒಳಿತು. ಯಾಕೆಂದ್ರೇ.. ನಿಮ್ಮಿಂದ ಊರಿನ ಇತರರಿಗೂ ಹರಡೋದು ಬೇಡ. ಇದು ನಮ್ಮ ಕನ್ನಡ ನ್ಯೂಸ್ ನೌ ನ ಕಳಕಳಿಯ ಮನವಿ ಕೂಡ ಆಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags