ವಿಜಯವಾಣಿ

505k Followers

ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆಯಪ್​​ ಕಥೆ ಏನು?

25 Feb 2021.5:16 PM

ನವದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಓಟಿಟಿಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗದರ್ಶಿ ಸಂಪೂರ್ಣವಾಗಿ ಜಾರಿಗೆ ಬಂದರೆ ವಾಟ್ಸ್​ಆಯಪ್​, ಟೆಲಿಗ್ರಾಂ ಸೇರಿ ಅನೇಕ ಆಯಪ್​ಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.

ಒಂದು ವೇಳೆ ಯಾವುದೇ ಸಂದೇಶ ಭಾರತದ ಮೂಲದ್ದಲ್ಲದೇ ಬೇರೆ ದೇಶದಿಂದ ಭಾರತೀಯರಿಗೆ ಬಂದ್ದಿದ್ದರೆ, ಆ ಸಂದೇಶ ಯಾವ ಭಾರತೀಯನಿಗೆ ಮೊದಲು ಬಂದಿದೆ ಎನ್ನುವ ಮಾಹಿತಿಯನ್ನು ಆಯಪ್​ಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಸಮಗ್ರತೆ, ರಕ್ಷಣೆಯ ದೃಷ್ಟಿಯಿಂದ ಇದು ಅವಶ್ಯಕ ಎಂದು ತಿಳಿಸಲಾಗಿದೆ. ಆದರೆ ವಾಟ್ಸ್​ಆಯಪ್​ ಸಂಸ್ಥೆಯು ಈ ಹಿಂದೆಯೇ ಇಂತಹ ಬೇಡಿಕೆಯನ್ನು ನಿರಾಕರಿಸಿತ್ತು.

ನಮ್ಮ ಗ್ರಾಹಜಕರಿಗೆ ನಾವು ಎಂಡ್​ ಟು ಎಂಡ್​ ಎನ್​​ಕ್ರಿಪ್ಟೆಡ್​ ಸರ್ವೀಸ್​ ಕೊಡುತ್ತಿದ್ದೇವೆ. ಹಾಗಿದ್ದ ಮೇಲೆ ಯಾರು ಸಂದೇಶ ಕಳುಹಿಸಿದ್ದಾರೆ ಅಥವಾ ಯಾರಿಗೆ ಸಂದೇಶ ಹೋಗಿದೆ ಎನ್ನುವ ಮಾಹಿತಿ ನೀಡಿದರೆ ನಮ್ಮ ಸಂಸ್ಥೆಯ ಪಾಲಿಸಿಗೆ ನಾವು ಮೋಸ ಮಾಡಿದಂತಾಗುತ್ತದೆ ಎಂದು ವಾಟ್ಸ್​ಆಯಪ್​ ಹೇಳಿತ್ತು.

ಹಾಗಿದ್ದರೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಾವು ಯಾವುದೇ ಆಯಪ್​ನ ಎಂಡ್​ ಟು ಎಂಡ್​ ಎನ್​ಕ್ರಿಪ್ಷನ್​ಗೆ ತೊಂದರೆಯನ್ನುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾವು ಸಂದೇಶ ಯಾವುದೆಂದು ಕೇಳುತ್ತಿಲ್ಲ ಬದಲಾಗಿ ಆ ರೀತಿಯ ಸಂದೇಶ ಯಾರಿಗೆ ಬಂದಿದೆ ಎನ್ನುವುದನ್ನು ಮಾತ್ರವೇ ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಇದೀಗ ಮಾಡಲಾಗಿರುವ ಮಾರ್ಗಸೂಚಿಗಳಿಗೆ ವಾಟ್ಸ್​ಆಯಪ್​ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸೋಶಿಯಲ್ ಮೀಡಿಯಾಗಳಿಗೆ ಹಾಗೂ OTTಗೆ ಹೊಸ ಮಾರ್ಗದರ್ಶಿ ಸೂತ್ರಗಳು: ಪಟ್ಟಿ ಇಲ್ಲಿದೆ ನೋಡಿ…

ಕೇರಳದಲ್ಲಿ ಎಸ್​ಡಿಪಿಐ ಗೂಂಡಾಗಿರಿಗೆ ಆರ್​ಎಸ್​ಎಸ್​ ಕಾರ್ಯಕರ್ತ ಬಲಿ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags