Kannada News Now

1.8M Followers

ರಿಸರ್ವೇಶನ್‌ ಅಭ್ಯರ್ಥಿಗಳಿಗೆ ಉತ್ತಮ ಅಂಕ ಬಂದ್ರೆ ಸಾಮಾನ್ಯ ವರ್ಗದಲ್ಲಿ ಕೂಡ ಆಯ್ಕೆ ಯಾಗಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

07 Mar 2021.7:21 PM

ನವದೆಹಲಿ: ಹಿಂದುಳಿದ ವರ್ಗದ ಅಭ್ಯರ್ಥಿಗಳು ಇಲ್ಲವೇ ರಿಸರ್ವೇಶನ್‌ ಅರ್ಹ ಇತರೆ ಅಭ್ಯರ್ಥಿಗಳಂತೆಯೇ ಸ್ಕೋರ್ ಮಾಡಿದರೆ, ಅವರ ಪ್ರವೇಶವು ಕೂಡ ಸಾಮಾನ್ಯ ವರ್ಗದ ಅಭ್ಯರ್ಥಿಗಳಂತೆಯೇ ಆಯ್ಕೆ ಮಾಡಬಹುದಾಗಿದೆ ಅಂತ ಸುಪ್ರಿಂಕೋರ್ಟ್‌ ಹೇಳಿದೆ. ಆದರೆ ಸಾಮಾನ್ಯ ವರ್ಗಕ್ಕೆ ಪ್ರವೇಶ ಪಡೆದುಕೊಳ್ಳಬೇಕಾದ್ರೆ, ಪ್ರವೇಶಕ್ಕೆ ಅಗತ್ಯವಾದ ಅಂಕಗಳು ಬೇಕಾಗುತ್ತವೆ ಅಂಥ ತಮಿಳುನಾಡು ರಾಜ್ಯದ ಶೋಭಾನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರಿಂಕೋರ್ಟ್‌ ಈ ತೀರ್ಪು ನೀಡಿದೆ.

ಪ್ರಧಾನಿ ಮೋದಿಗೆ ರ್ಯಾಲಿ ಮಾಡಲು ಸಮಯವಿದೆ, ರೈತರನ್ನು ಭೇಟಿ ಮಾಡಲು ಸಮಯವಿಲ್ಲ : ಶರದ್ ಪವಾರ್ ಕಿಡಿ

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದ್ದು, ತಮಿಳುನಾಡು ಸರ್ಕಾರಿ ಸೇವಕ (ಸೇವಾ ಷರತ್ತುಗಳು) ಕಾಯ್ದೆ 2016 ರ ಸೆಕ್ಷನ್ 27 (ಎಫ್) ಗೆ ಸಂಬಂಧಿಸಿದ ಮೇಲ್ಮನವಿಯ ಕುರಿತು ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಅರ್ಜಿದಾರರು ಗ್ರೇಡ್ -1 ರ ಸ್ನಾತಕೋತ್ತರ ಸಹಾಯಕ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ತಾತ್ಕಾಲಿಕ ಪಟ್ಟಿಯನ್ನು ಪರಿಶೀಲಿಸಿದ ನಂತರ, ಹೆಚ್ಚಿನ ಹಿಂದುಳಿದ ವರ್ಗ (ಎಂಬಿಸಿ) ಕೋಟಾ ಅಡಿಯಲ್ಲಿ ವರ್ಗೀಕರಿಸಲ್ಪಟ್ಟ ಕೆಲವು ಅಭ್ಯರ್ಥಿಗಳನ್ನು ಮೀಸಲಾತಿಯ ಹೊರತಾಗಿಯೂ ಆಯ್ಕೆ ಮಾಡಲಾಗುತ್ತಿತ್ತು ಎಂದು ಅವರು ಹೇಳಿದರು. ಈ ಅಭ್ಯರ್ಥಿಗಳನ್ನು ಸಾಮಾನ್ಯ ಖಾಲಿ ಹುದ್ದೆಯಲ್ಲಿ ಇರಿಸಲಾಗಿಲ್ಲ, ಆದರೆ ಎಂಬಿಸಿ ಕೋಟಾದಲ್ಲಿ ನೇಮಕಗೊಂಡಿದ್ದರು. ಸಾಮಾನ್ಯ ಕೋಟಾ ಬದಲಿಗೆ ಎಂಬಿಸಿ ಕೋಟಾದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು ಅಂಥ ಆಯ್ಕೆಗೆ ಸಂಬಂಪಟ್ಟಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕಂಕುಳಲ್ಲಿ ಮಗು ಎತ್ತಿಕೊಂಡು ಡ್ಯೂಟಿ ಮಾಡುತ್ತಿರುವ ಮಹಿಳಾ ಟ್ರಾಫಿಕ್ ಪೋಲಿಸ್ ವಿಡಿಯೋ ಆಯ್ತು ವೈರಲ್‌

ಇದೇ ವೇಳೆ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡುವ ಸೆಕ್ಷನ್ 27ಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಮಿಳುನಾಡು ಸರ್ಕಾರ ವಾದಮಂಡಿಸಿತ್ತು ಮತ್ತು ಇದು ಆ ಹಂತದ ಮೀಸಲಾತಿ ಯ ವಿಧಾನಕ್ಕೆ ಮಾತ್ರ ಅನ್ವಯಿಸುತ್ತದೆ ಅಂತ ಹೇಳಿತ್ತು, ಇದೇ ವೇಳೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಈ ಪಟ್ಟಿಯ ಬ್ಯಾಕ್ ಲಾಗ್ ಗೂ ಯಾವುದೇ ಸಂಬಂಧವಿಲ್ಲ. ಮೀಸಲಾತಿ ಯಡಿ ಅಗತ್ಯ ಸಂಖ್ಯೆಯ ಸಮುದಾಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಪ್ರಸಕ್ತ ಸಾಲಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸಬೇಕು ಎಂದು ಸೆಕ್ಷನ್ 27(ಎಫ್) ಕಲಂ 27(ಎಫ್) ಹೇಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಇಲ್ಲವೇ ರಿಸರ್ವೇಶನ್‌ ಅರ್ಹ ಇತರೆ ಅಭ್ಯರ್ಥಿಗಳಂತೆಯೇ ಸ್ಕೋರ್ ಮಾಡಿದರೆ, ಅವರ ಪ್ರವೇಶವು ಕೂಡ ಸಾಮಾನ್ಯ ವರ್ಗದ ಅಭ್ಯರ್ಥಿಗಳಂತೆಯೇ ಆಯ್ಕೆ ಮಾಡಬಹುದಾಗಿದೆ ಅಂತ ಸುಪ್ರಿಂಕೋರ್ಟ್‌ ಹೇಳಿದೆ.

ಪತ್ನಿ ಅಥವಾ ಮಕ್ಕಳು ಮಾತ್ರವಲ್ಲದೆ ವ್ಯಕ್ತಿಯ ವಯಸ್ಸಾದ ಪೋಷಕರಿಗೆ ಸಹ ಅವರ ಆದಾಯದಲ್ಲಿ ಹಕ್ಕುಗಳಿವೆ : ದೆಹಲಿ ಕೋರ್ಟ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags