Kannada News Now

1.8M Followers

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ʼಡಿಎಯ ಮೂರು ಕಂತುʼಗಳು ಜುಲೈನಿಂದ ಬಿಡುಗಡೆ

09 Mar 2021.3:21 PM

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು, ತುಟ್ಟಿಭತ್ಯೆಗಳ ಮೂರು ಕಂತುಗಳನ್ನ (ಡಿಎ) ಮರು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವಾಲಯ ಭರವಸೆ ನೀಡಿದೆ.

ಇನ್ನು ಸದರಿ ನೌಕರರಿಗೆ ತುಟ್ಟಿಭತ್ಯೆಯ ಬಾಕಿ ಇರುವ ಕಂತುಗಳನ್ನ '2021ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ದರಗಳಲ್ಲಿ ಇಳಿಕೆ ಮಾಡಲಾಗುವುದು' ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯಸಭೆಯಲ್ಲಿ ಇಂದು ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, 'ಕಳೆದ ವರ್ಷ ದೇಶದಲ್ಲಿ ಕೋವಿಡ್-19 ಸೋಂಕು ನಿಭಾಯಿಸಲು ಸಹಾಯ ಮಾಡಿದ ಡಿಎಯ ಮೂರು ಕಂತುಗಳನ್ನ ಫ್ರೀಜ್ ಮಾಡುವ ಮೂಲಕ ಸರ್ಕಾರ ₹37,430.08 ಕೋಟಿಯನ್ನ ಉಳಿಸಿದೆ' ಎಂದು ಹೇಳಿದ್ದಾರೆ.

73ರ ಇಳಿ ವಯಸ್ಸಿನಲ್ಲಿ ಆಂಟಿ ಮದ್ವೆಯಾಗಲು ಹೋಗಿ ಕೋಟಿ ಹಣ ಹಣ ಕಳೆದುಕೊಂಡ 'ನಾಟಿ ಆಂಕಲ್'‌

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 1.1.2020, 1.7.2020 ಮತ್ತು 1.1.2021 ರಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯ ಮೂರು ಕಂತುಗಳನ್ನು ಸ್ಥಗಿತ ಮಾಡಲಾಗಿದೆ ಎಂದು ಫಿನ್ ಮಿನ್ ತಿಳಿಸಿದ್ದಾರೆ.

ಪ್ರಸ್ತುತ ಕೇಂದ್ರ ನೌಕರರಿಗೆ ಶೇ.17ರಷ್ಟು ಡಿಎವಿದ್ದು, ಕಳೆದ ವರ್ಷ ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು.

ಇದು 2021ರ ಜನವರಿ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ರಮೇಶ್ ಜಾರಕಿಹೊಳಿ 'ರಾಸಲೀಲೆ ಸಿಡಿ' ರೆಡಿಯಾಗಿದ್ದು ಎಲ್ಲಿಗೊತ್ತಾ.?

ಆದರೆ, ಕೋವಿಡ್-19 ಬಿಕ್ಕಟ್ಟಿನಿಂದಾಗಿ 2021ರ ಜುಲೈವರೆಗೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನ ತಡೆಹಿಡಿಯಲು ಹಣಕಾಸು ಸಚಿವಾಲಯ 2020ರ ಏಪ್ರಿಲ್ʼನಲ್ಲಿ ನಿರ್ಧರಿಸಿತ್ತು.

'ಕೇಂದ್ರ ಸರ್ಕಾರಿ ನೌಕರರಿಗೆ 2020ರ ಜನವರಿ 1ರಿಂದ ಬಾಕಿ ಇರುವ ತುಟ್ಟಿ ಭತ್ಯೆ (ಡಿಎ) ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚುವರಿ ಕಂತು (ಡಿಎ) ಪಾವತಿಸದಿರಲು ನಿರ್ಧರಿಸಲಾಗಿದೆ. 1 ಜುಲೈ 2020 ಮತ್ತು 1 ಜನವರಿ 2021 ರಿಂದ ಡಿಎ ಮತ್ತು ಡಿಆರ್ ನ ಹೆಚ್ಚುವರಿ ಕಂತುಗಳನ್ನು ಸಹ ಪಾವತಿಸಲಾಗುವುದಿಲ್ಲ' ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಡಿಎ ಮತ್ತು ಡಿಆರ್ ಅನ್ನು ಪ್ರಸ್ತುತ ದರಗಳಲ್ಲಿ ಪಾವತಿ ಮಾಡುವುದನ್ನು ಮುಂದುವರಿಸಲಾಗುವುದು.

'ವಾಟ್ಸ್ ಆಪ್'ನಲ್ಲಿ 'ಡಿಲೀಟ್' ಆದ 'ಮೆಸೇಜ್' ನೋಡೋದು ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags