ವಿಜಯವಾಣಿ

505k Followers

ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಅಂತರ ನಿಗಮ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

10 Mar 2021.3:42 PM

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಹಲವು ದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಂತರ ನಿಗಮ ವರ್ಗಾವಣೆಗೆ ಸಾರಿಗೆ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿಗಳಲ್ಲಿ ಉತ್ತರ ಕರ್ನಾಟಕದ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ತಮ್ಮ ಜಿಲ್ಲೆಗಳ ನಿಗಮಗಳಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಥವಾ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಿಕೊಡುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೇಳು ವರ್ಷಗಳ ಹಿಂದೆ ಅಂತರ ನಿಗಮ ವರ್ಗಾವಣೆ ಆರಂಭಿಸಲಾಗಿತ್ತಾದರೂ, ನಂತರ ಅದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅಂತರ ನಿಗಮ ವರ್ಗಾವಣೆ ಆರಂಭಿಸಲು ನಿರ್ಧರಿಸಲಾಗಿದ್ದು, ಸಾರಿಗೆ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ.

ಅದರಂತೆ ಹಿರಿತನದ ಆಧಾರದಲ್ಲಿ, ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನೌಕರರನ್ನು ವರ್ಗಾವಣೆಗೆ ಪರಿಗಣಿಸಲಾಗುತ್ತದೆ. ಅಲ್ಲದೆ, ಪ್ರತಿ ವರ್ಷ ಏಪ್ರಿಲ್ 1ರಿಂದ 30ರವರೆಗೆ ಅರ್ಜಿಯನ್ನು ನೀಡಿ, ಮೇ ತಿಂಗಳಿನಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಕುರಿತಂತೆ ತಿಳಿಸಲಾಗಿದೆ.

20 ಸಾವಿರ ನೌಕರರಿದ್ದಾರೆ: ನಾಲ್ಕೂ ನಿಗಮಗಳಲ್ಲಿ 1.30 ಲಕ್ಷ ನೌಕರರಿದ್ದಾರೆ. ಅದರಲ್ಲಿ 20 ಸಾವಿರಕ್ಕೂ ಹೆಚ್ಚಿನ ನೌಕರರು ಅಂತರ ನಿಗಮ ವರ್ಗಾವಣೆಗಾಗಿ ಕಾದು ಕುಳಿತಿದ್ದಾರೆ. ಈ ಹಿಂದಿನ ಪ್ರಕ್ರಿಯೆಯಲ್ಲಿ 3,589 ನೌಕರರ ವರ್ಗಾವಣೆ ಮಾಡಲಾಗಿದೆ. ಉಳಿದಂತೆ 16ರಿಂದ 17 ಸಾವಿರ ನೌಕರರ ವರ್ಗಾವಣೆ ಬಾಕಿಯಿದೆ. ಅವರೆಲ್ಲರು ಅರ್ಜಿ ಸಲ್ಲಿಸಿದ್ದರೂ ಅದನ್ನು ಹಿಂದೆ ಪರಿಗಣಿಸಿರಲಿಲ್ಲ. ಇದೀಗ ಅವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಿ ವರ್ಗಾವಣೆ ಮಾಡಿಕೊಡಲಾಗುತ್ತದೆ.

ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags