Suvarna News

1.4M Followers

ಪರೀಕ್ಷೆ ಮೂಲಕ 822 ಹುದ್ದೆಗಳಿಗೆ ಯುಪಿಎಸ್‌ಸಿಯಿಂದ ನೇಮಕಾತಿ

11 Mar 2021.2:19 PM

ಕೇಂದ್ರ ಲೋಕ ಸೇವಾ ಆಯೋಗವು ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಲುತ್ತಿದ್ದು, ಆಸಕ್ತರು ಮತ್ತು ಅರ್ಹರ ಕೂಡಲೇ ಅರ್ಜಿ ಸಲ್ಲಿಸಬಹುದು. ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಎಸ್ (ಪಿ) ಇ -2021 (ಐಎಫ್‌ಒಎಸ್ (ಪಿ) ಇ -2021 ಸೇರಿದಂತೆ) ಪರೀಕ್ಷೆಯ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ upsc.gov.in ನಲ್ಲಿ ಮಾರ್ಚ್ 24ರೊಳಗೆ ನೋಂದಣಿ ಮಾಡಿಕೊಳ್ಳಬಹುದು.

ಆನ್‌ಲೈನ್ ಅರ್ಜಿ ಪ್ರಕ್ರಿಯೆ: ಮಾರ್ಚ್ 4, 2021 ನಾಗರಿಕ ಸೇವೆಗಳು (ಐಎಎಸ್) - 712 ಹುದ್ದೆಗಳು, ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ಮಾರ್ಚ್ 24, 2021, ಪ್ರಿಲಿಮಿನರಿ ಪರೀಕ್ಷಾ ದಿನಾಂಕ : ಜೂನ್ 27, 2021

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ

ನಾಗರಿಕ ಸೇವೆಗಳು (ಐಎಎಸ್) - 712 ಹುದ್ದೆಗಳು, ಭಾರತೀಯ ಅರಣ್ಯ ಸೇವೆಗಳು (ಐಎಫ್‌ಎಸ್) - 110 ಖಾಲಿ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಅರ್ಹತಾ ಮಾನದಂಡ: ಅಭ್ಯರ್ಥಿಯು ಭಾರತ ಅಥವಾ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ಅಥವಾ ರಾಜ್ಯ ವಿಧಾನಸಭೆಯ ಕಾಯ್ದೆಯಿಂದ ಸಂಯೋಜಿಸಲ್ಪಟ್ಟ ಯಾವುದೇ ವಿಶ್ವವಿದ್ಯಾಲಯಗಳಿಂದ ಪದವಿ ಹೊಂದಿರಬೇಕು.

ಅಭ್ಯರ್ಥಿಯು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಗಣಿತ, ಭೌತಶಾಸ್ತ್ರ, ಅಂಕಿಅಂಶ ಮತ್ತು ಪ್ರಾಣಿಶಾಸ್ತ್ರ ಅಥವಾ ಕೃಷಿ, ಅರಣ್ಯ- ಇದರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ವಯೋಮಿತ ಹೀಗಿದೆ; ಯುಪಿಎಸ್ಸಿ ಐಎಎಸ್ (ಸಿವಿಲ್ ಸರ್ವೀಸಸ್) 2021 ರ ವಯಸ್ಸಿನ ಮಿತಿ - ಅಭ್ಯರ್ಥಿಯು ಕನಿಷ್ಟ 21 ವರ್ಷ ಹಾಗೂ ಗರಿಷ್ಠ 32 ವರ್ಷ ವಯಸ್ಸಿನವರಾಗಿರಬೇಕು. ಯುಪಿಎಸ್ಸಿ ಐಎಫ್‌ಎಸ್ 2021 ರ ವಯಸ್ಸಿನ ಮಿತಿ - ಅಭ್ಯರ್ಥಿಯು 21 ವರ್ಷ ವಯಸ್ಸು ಆಗಿರಬೇಕು ಮತ್ತು 32 ವರ್ಷ ವಯಸ್ಸನ್ನು ಮೀರಿರಬಾರದು

ಮೆಗಾ ನೇಮಕಾತಿ: ಶೀಘ್ರವೇ 6,552 ಹುದ್ದೆಗಳಿಗೆ ಇಎಸ್‌ಐಸಿ ನೇಮ

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು upsc.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಐಎಫ್‌ಎಸ್ ಪ್ರಿಲಿಮ್ಸ್ 2021 ಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ. ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರನ್ನು ನಮೂದಿಸಿ. ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಿ. ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಸಬ್‌ಮಿಟ್ ಕ್ಲಿಕ್ ಮಾಡಿ. ಬಳಿಕ ಅಪ್ಲಿಕೇಷನ್ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿಯ ಶುಲ್ಕ; ಮಹಿಳೆ/ಎಸ್‌ಸಿ / ಎಸ್‌ಟಿ /ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅಪ್ಲಿಕೇಷನ್ ಶುಲ್ಕ ಇರುವುದಿಲ್ಲ. ಆದಾಗ್ಯೂ, ಉಳಿದ ಎಲ್ಲ ಅಭ್ಯರ್ಥಿಗಳಿಗೆ 100 ರೂ.ಗಳ ಅರ್ಜಿ ಶುಲ್ಕ ವಿಧಿಸಲಾಗುತ್ತದೆ.

ಪ್ರಿಲಿಮಿನರಿ ಪರೀಕ್ಷೆ: ಪ್ರಿಲಿಮಿನರಿ ಪರೀಕ್ಷೆಯು ಪೇಪರ್ -1 ಹಾಗೂ ಪೇಪರ್- II ಅನ್ನು ಒಳಗೊಂಡಿದೆ. ವಸ್ತುನಿಷ್ಠ ಪ್ರಕಾರದಲ್ಲಿ, ಒಟ್ಟು 400 ಅಂಕಗಳನ್ನು ಹೊಂದಿರುವ ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಮಾನ್ಯ ಅಧ್ಯಯನ ಪತ್ರಿಕೆ - II ರಲ್ಲಿ, ಅಭ್ಯರ್ಥಿಯು ಕನಿಷ್ಠ ಶೇಕಡಾ 33 ಅಂಕಗಳೊಂದಿಗೆ ಅರ್ಹತೆ ಪಡೆಯಬೇಕು. ಪ್ರಿಲಿಮಿನರಿ ಪರೀಕ್ಷೆ ಪಾಸ್ ಆದವರು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.

ಗನ್ ಅಷ್ಟೇ ಅಲ್ಲ ಪೆನ್ ಹಿಡಿದು ಕೋಚಿಂಗ್ ಕೊಡುತ್ತದೆ ನಮ್ಮ ಸೇನೆ!

ಮುಖ್ಯ ಪರೀಕ್ಷೆ: ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯು ಸಾಂಪ್ರದಾಯಿಕ ಪ್ರಬಂಧ ಪ್ರಕಾರದ 6 ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 300 ಅಂಕಗಳಿಗೆ ಅಂತಿಮ ಸಂದರ್ಶನ ನಡೆಯಲಿವೆ. ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳು (ಲಿಖಿತ ಭಾಗ ಮತ್ತು ಸಂದರ್ಶನ) ಅವರ ಅಂತಿಮ ರ್ಯಾಕಿಂಗ್ ಅನ್ನು ನಿರ್ಧರಿಸುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags