Kannada News Now

1.8M Followers

CBSE 10ನೇ ತರಗತಿ ಪರೀಕ್ಷೆಗಳು ರದ್ದು.. ಆದ್ರೆ, ಅಂಕಗಳ ಬಗ್ಗೆ ಆಕ್ಷೇಪಣೆಯಿದ್ರೆ ʼಪರೀಕ್ಷೆ ಬರೆಯ್ಬೋದುʼ: ಕೇಂದ್ರ ಸರ್ಕಾರ

14 Apr 2021.2:55 PM

ಡಿಜಿಟಲ್‌ ಡೆಸ್ಕ್: ದೇಶದಲ್ಲಿ ಕೊರೊನಾ ಸೋಂಕು ಉಲ್ಭಣವಾಗ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ ಇ 10ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪ್ರಧಾನಿ ಮೋದಿಯವ್ರೊಂದಿಗಿನ ಸಭೆಯ ಶಿಕ್ಷಣ ಸಚಿವ ರಮೇಶ್‌ ಅವ್ರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಅದ್ರಂತೆ, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, 10ನೇ ತರಗತಿ ಪರೀಕ್ಷೆಗಳನ್ನ ರದ್ದು ಪಡಿಸಲಾಗಿದೆ. ಅಂದ್ಹಾಗೆ, 10ನೇ ತರಗತಿ ಅಭ್ಯರ್ಥಿಗಳ ಫಲಿತಾಂಶಗಳನ್ನ ಮಂಡಳಿಯು ಅಭಿವೃದ್ಧಿಪಡಿಸಬೇಕಾದ ವಸ್ತುನಿಷ್ಠ ಮಾನದಂಡದ ಆಧಾರದ ಮೇಲೆ ತಯಾರಿಸಲಾಗುತ್ತದೆ ಎಂದು ಸರ್ಕಾರ ಇಂದು ಹೇಳಿದೆ.

ವಿದ್ಯಾರ್ಥಿಗಳ ಪ್ರತಿಭೆ, ಕಾರ್ಯ ಶೈಲಿಯ ಆಧಾರದಲ್ಲಿ ಅಂಕ ನೀಡಲು ನಿರ್ಧಾರಿಸಲಾಗಿದೆ.

ಆದ್ರೆ, ವಿದ್ಯಾರ್ಥಿಗಳಿಗೆ ಮಂಡಳಿ ನೀಡಿದ ಅಂಕಗಳ ಬಗ್ಗೆ ಆಕ್ಷೇಪಣೆ ಇದ್ದರೆ ಪರೀಕ್ಷೆ ಬರೆಯಬಹುದು ಎಂದಿದೆ. ಅಂದ್ರೆ, ವಿದ್ಯಾರ್ಥಿಗಳಿಗೆ ತಮಗೆ ನೀಡಿದ ಅಂಕಗಳ ಬಗ್ಗೆ ಆಕ್ಷೇಪಣೆ ಏನಾದ್ರು ಇದ್ರೆ ಅಂತಹವರಿಗೆ ಪರಿಸ್ಥಿತಿ ಸುಧಾರಿಸಿದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅದ್ರಂತೆ, 15 ದಿನಗಳ ಮುಂಚಿತವಾಗಿ ಪರೀಕ್ಷಾ ದಿನಾಂಕವನ್ನ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ಸರ್ಕಾರ ಸ್ಪಷ್ಟ ಪಡಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags