TV9 ಕನ್ನಡ

371k Followers

ಜುಲೈ 1ರಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ಪಾವತಿ

16 Apr 2021.12:49 PM

ದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈನಿಂದ ಸಂಪೂರ್ಣ ತುಟ್ಟಿ ಭತ್ಯೆ ಸೌಲಭ್ಯಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಜುಲೈ1ರಿಂದಲೇ ಪರಿಷ್ಕೃತ ತುಟ್ಟಿ ಭತ್ಯೆ ಸೌಲಭ್ಯಗಳ ಮೂರು ಕಂತುಗಳನ್ನು ಪಾವತಿಸಲಾಗುವುದು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ಮೇಲ್ಮನೆಗೆ ಅವರು ಪತ್ರ ಬರೆದಿದ್ದಾರೆ.

ಸದ್ಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ17ರಷ್ಟು ತುಟ್ಟಿ ಭತ್ಯೆ ಸೌಲಭ್ಯ ಪಡೆಯುತ್ತಿದ್ದಾರೆ. ಈ ದರ ಶೇ 28ಕ್ಕೆ ಹೆಚ್ಚಳವಾಗಲಿದೆ. ತುಟ್ಟಿ ಭತ್ಯೆ ಸೌಲಭ್ಯದಲ್ಲಿ 2020ರ ಜನವರಿ 1ರಿಂದ ಶೇ 3ರಷ್ಟು ಹೆಚ್ಚಳ, 2020ರ ಜುಲೈನಿಂದ ಶೇ4ರಷ್ಟು ಹೆಚ್ಚಳ, 2021ರ ಜನವರಿ 1ರಿಂದ ಶೇ4ರಷ್ಟು ಹೆಚ್ಚಳವಾಗಲಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ , ಈ ಹಿಂದಿನ ಮೂರು ದರಗಳನ್ನು ಮತ್ತೆ ನೀಡಲಾಗುವುದು ಎಂದಿದ್ದಾರೆ.

ಕೊವಿಡ್ ಸೋಂಕಿನ ಹೆಚ್ಚಳದಿಂದ ಡಿಎ ಸೌಲಭ್ಯಗಳನ್ನು ಜನವರಿ 1, 2020ರಿಂದಲೇ ಕೇಂದ್ರ ಸರ್ಕಾರ ತಡೆ ಹಿಡಿದಿತ್ತು. ತದನಂತರ ಜುಲೈ 2020ರ ಕಂತು ಮತ್ತು ಜನವರಿ 2021ರ ಕಂತುಗಳನ್ನು ಸಹ ಕೇಂದ್ರ ಸರ್ಕಾರ ಪಾವತಿಸಿರಲಿಲ್ಲ. ಆದರೆ ಇದೀಗ ಘೋಷಿಸಿರುವ ಪ್ರಕಾರ ಮುಂದಿನ ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಸೌಲಭ್ಯ ಮತ್ತೆ ದೊರೆಯಲಿದೆ. ತಡೆ ಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿ ಭತ್ಯೆ ಸೌಲಭ್ಯಗಳಿಗೂ ಅಂದಿನ ಮಾನದಂಡಗಳಿಗೆ ಅನುಗುಣವಾಗಿಯೇ ದೊರೆಯಲಿವೆ. ಮುಂದಿನ ಜುಲೈನಲ್ಲಿ ಪರಿಷ್ಕೃತ ಡಿಎ ಸೌಲಭ್ಯವನ್ನು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದ 65 ಲಕ್ಷ ನಿವೃತ್ತ ಉದ್ಯೋಗಿಗಳು ಮತ್ತು 52 ಲಕ್ಷ ಉದ್ಯೋಗಿಗಳು ಈ ಸೌಲಭ್ಯಕ್ಕೆ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರಿಗೂ ಕೇಂದ್ರ ಸರ್ಕಾರದ ಸೌಲಭ್ಯವನ್ನು ಮತ್ತೆ ಮೊದಲಿನಂತೆಯೇ ಪಡೆದುಕೊಳ್ಳಲಿದ್ದಾರೆ. 1-7-2021ರಿಂದ ಕ್ಯುಮುಲೇಟಿವ್ ಪರಿಷ್ಕೃತ ದರದಲ್ಲಿ ಆರಂಭಿಸಲಾಗುವುದು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂದಿದ್ದಾರೆ. ಇದರರ್ಥ ಏನೆಂದರೆ, ಪರಿಷ್ಕೃತ ತುಟ್ಟಿ ಭತ್ಯೆ ದರವು ಕಳೆದ ವರ್ಷ ಸ್ಥಗಿತವಾಗಿದ್ದ ದರಕ್ಕಿಂತ ಹೆಚ್ಚಿನದಾಗಿರುತ್ತದೆ.

ಇದನ್ನೂ ಓದಿ: ಕೇರಳ ಸರ್ಕಾರಿ ಆಸ್ಪತ್ರೆಗಳಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆಯಿಂದ ದಿನಕ್ಕೆ 1.5 ಟನ್ ಮೆಡಿಕಲ್​​ ಆಕ್ಸಿಜನ್​ ಪೂರೈಕೆ

45 ವರ್ಷ ಮೇಲ್ಪಟ್ಟ, ಕೇಂದ್ರ ಸರ್ಕಾರಿ ನೌಕರರು ಕೊವಿಡ್​-19 ಲಸಿಕೆ ಸ್ವೀಕರಿಸಲು ಸರ್ಕಾರದ ಸೂಚನೆ

(how DA restoration will impact take home pay of central govt employees from July 1 2021)

The post ಜುಲೈ 1ರಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ಪಾವತಿ appeared first on TV9 Kannada.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags