Kannada News Now

1.8M Followers

BIG BREAKING NEWS : ICSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

16 Apr 2021.6:41 PM

ನವದೆಹಲಿ : ಮೇ.4ರಿಂದ ಆರಂಭವಾಗಬೇಕಿದ್ದಂತ ಐಸಿಎಸ್‌ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ, ಸಿಐಎಸ್ಸಿಇ ಆದೇಶಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸೆರ್ಟಿಫಿಕೇಟ್ ಎಗ್ಸಾಮಿನೇಷನ್ ದೇಶಾದ್ಯಂತ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮೇ.4ರಿಂದ ಆರಂಭಿಸಲು ನಿಗದಿಪಡಿಸಲಾಗಿದ್ದಂತ ಐಸಿಎಸ್‌ಇಯ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂಬುದಾಗಿ ತಿಳಿಸಿದೆ.

ಇನ್ನೂ ಕೊರೋನಾ ಸೋಂಕಿನ ಕಾರಣದಿಂದಾಗಿ ಮುಂದೂಡಲ್ಪಡುತ್ತಿರುವಂತ ಐಸಿಎಸ್‌ಇಯ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಯಾವಾಗ ನಡೆಸಲಾಗುತ್ತದೆ ಎಂಬುದನ್ನು ಜೂನ್ ಮೊದಲ ವಾರದಲ್ಲಿ ತಿಳಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ..

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags