Suvarna News

1.4M Followers

ಕೊರೋನಾ, ಸಾರಿಗೆ ಮುಷ್ಕರ: ವಿವಿಧ ಪರೀಕ್ಷೆಗಳು ಮುಂದೂಡಿಕೆ

17 Apr 2021.6:36 PM

ಬೆಂಗಳೂರು, (ಏ.17): ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳು ತೊಂದರೆಯಾಗಿದೆ.

ಇದರಿಂದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಶ್ರೀಕೃಷ್ಣದೇವರಾಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳು ಅಧಿಕೃತವಾಗಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿವೆ.

CBSE ಎಕ್ಸಾಮ್ ರದ್ದು ಬೆನ್ನಲ್ಲೇ SSLC, PUC ಪರೀಕ್ಷೆ ಕುರಿತು ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನೆ

ಧಾರವಾಡ ವಿವಿ
ಏ.19 ಮತ್ತು 20ರಂದು ಪರೀಕ್ಷೆಗಳು ನಡೆಯಬೇಕಿದ್ದವು. ಬಸ್ ಓಡಾಟ ಇಲ್ಲದ ಹಿನ್ನೆಲೆ ಪರೀಕ್ಷೆಗಳು ಮುಂದೂಡಲು ಕರ್ನಾಟಕ ವಿವಿ ಆಡಳಿತ ಮಂಡಳಿ ನಿರ್ಧರಿಸಿದೆ.

ಈಗಾಗಲೇ ಧಾರವಾಡ ವಿವಿ ಪರೀಕ್ಷೆಗಳನ್ನ ಮುಂದೂಡಿ ಎರಡೆರಡು ಬಾರಿ ಶೆಡ್ಯೂಲ್​ಗಳನ್ನ ಹೊರಡಿಸಿ ಕ್ಯಾನ್ಸಲ್ ಮಾಡಿತ್ತು. ಇದೀಗ ಮೂರನೇ ಶೆಡ್ಯೂಲ್‌ನ ಪರೀಕ್ಷೆಗಳೂ ಮುಂದೂಡಿಕೆಯಾಗಿವೆ.

ವಿಜಯನಗರ ವಿವಿ
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪರೀಕ್ಷೆಗಳು ಅಧಿಕೃತವಾಗಿ ಮುಂದೂಡಿಕೆಯಾಗಿವೆ. ಪದವಿ 1, 3, 5ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ ಅಂತಾ ವಿವಿ ಆಡಳಿತ ಮಂಡಳಿ ತಿಳಿಸಿದೆ. ಪರೀಕ್ಷೆಯನ್ನು ಮಂದೂಡಿದ್ದು ಶೀಘ್ರದಲ್ಲೇ ದಿನಾಂಕ ತಿಳಿಸುವುದಾಗಿ ವಿವಿ ತಿಳಿಸಿದೆ. ಕೊರೊನಾ ಹರಡುತ್ತಿರುವ ಹಿನ್ನೆಲೆ ಹಾಗೂ ಸಾರಿಗೆ ಸಮಸ್ಯೆ ಇರೋದ್ರಿಂದ ಪರೀಕ್ಷೆಗಳು ನಡೆಯುತ್ವಾ ಇಲ್ವಾ ಅನ್ನೋ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದರು. ಏಪ್ರಿಲ್ 19 ರಿಂದ ಪರೀಕ್ಷೆಗಳು ನಡೆಯಬೇಕಿದ್ದವು.

ಇನ್ನು ಬೆಳಗ್ಗೆ ಫೇಕ್ ಆದೇಶ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ಕುರಿತು ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ವಿವಿ, ಯಾವುದೇ ಆದೇಶ ಪ್ರತಿ ಹೊರಡಿಸಿಲ್ಲ ಎಂದಿತ್ತು. ಇದೀಗ ವಿವಿಯ ಮೌಲ್ಯಮಾಪನ ವಿಭಾಗದ ಕುಲ ಸಚಿವರು ಪರೀಕ್ಷೆಗಳನ್ನ ಮುಂದೂಡಿ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ವಿವಿ
ಇನ್ನು ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಭೇಟಿ ನಿರ್ಬಂಧ ವಿಧಿಸಲಾಗಿದೆ. ಏಪ್ರಿಲ್ 20 ರಿಂದ ಅನಿರ್ದಿಷ್ಟಾವಧಿ ವರೆಗೆ ನಿರ್ಬಂಧ ಹೇರಿ ವಿವಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags