ಕನ್ನಡದುನಿಯಾ

1.6M Followers

BIG NEWS: ಶಾಲೆಗಳಲ್ಲಿ ಆನ್​​ಲೈನ್​ ಕ್ಲಾಸ್ -​ ಶುಲ್ಕ ಕಡಿತಕ್ಕೆ ʼಸುಪ್ರೀಂʼ ಸೂಚನೆ

04 May 2021.3:26 PM

ಆನ್​ಲೈನ್​ ತರಗತಿಗಳನ್ನ ಹೊರತುಪಡಿಸಿ ಕ್ಯಾಂಪಸ್​ನ ಇನ್ಯಾವ ಸೇವೆಗಳೂ ಬಳಕೆಯಾಗದ ಕಾರಣ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನ ಕಡಿಮೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎ. ಎಂ. ಖಾನ್​ವಿಲ್ಕರ್​​ ಹಾಗೂ ದಿನೇಶ್​​ ಮಹೇಶ್ವರಿ ಕೊರೊನಾ ಕಾರಣದಿಂದಾಗಿ ದೇಶದ ಜನತೆ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟವನ್ನೂ ಶಾಲಾ ಆಡಳಿತ ಮಂಡಳಿ ಗಮನದಲ್ಲಿಡಬೇಕೆಂದು ಹೇಳಿದೆ.

ಶಾಲೆಯಲ್ಲಿ ನಡೆಸಲಾಗುವ ಚಟುವಟಿಕೆ ಹಾಗೂ ಶಾಲೆಗಳಲ್ಲಿ ಇರುವ ಸೌಲಭ್ಯಕ್ಕೆ ಸಂಬಂಧಿಸಿ ಶುಲ್ಕವನ್ನ ವಸೂಲಿ ಮಾಡಬೇಕು ಎಂಬ ಕಾನೂನಿಲ್ಲ. ಕೊರೊನಾದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಯಾವ ಸೌಲಭ್ಯಗಳನ್ನೂ ನೀಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಲಾಭದ ಹಿಂದೆ ಹೋಗುವುದು ಸರಿಯಲ್ಲ ಎಂದು ಹೇಳಿದೆ.

2020-21ನೇ ಸಾಲಿನಲ್ಲಿ ಲಾಕ್​ಡೌನ್​​ ಹಾಗೂ ಕೊರೊನಾ ವೈರಸ್​ ಕಾರಣದಿಂದಾಗಿ ಶಾಲೆಗಳು ಸಂಪೂರ್ಣವಾಗಿ ಬಂದ್​ ಆಗಿದ್ದವು.

ಇದರಿಂದಾಗಿ ಶಾಲೆಗಳಲ್ಲಿ ಪೆಟ್ರೋಲ್​ / ಡಿಸೇಲ್​ ವೆಚ್ಚ, ಕರೆಂಟ್​ ಬಿಲ್​, ಮೆಂಟೇನೆನ್ಸ್​ ವೆಚ್ಚ, ನೀರಿನ ವೆಚ್ಚ ಇವೆಲ್ಲದರಲ್ಲೂ ಶಿಕ್ಷಣ ಸಂಸ್ಥೆಗಳು ಉಳಿತಾಯ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿದ್ಯಾರ್ಥಿಗಳಿಗೆ ಶಾಲೆಗಳಿಂದ ನೀಡಲಾಗದ ಸೌಲಭ್ಯಗಳಿಗೂ ಶುಲ್ಕ ಕೇಳಿದರೆ ಅದು ಲಾಭದಾಯಕ ಎನಿಸಿಕೊಳ್ಳುತ್ತೆ ಎಂದು ಕೋರ್ಟ್ ಹೇಳಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags