Kannada News Now

1.8M Followers

BIGG NEWS : 'ಕೊರೊನಾ ಸ್ಪೋಟ' : ರಾಜ್ಯದಲ್ಲಿ ಮತ್ತೆ 'ಲಾಕ್ ಡೌನ್' ಮಾಡುವ ಕುರಿತು 'ಸಿಎಂ ಯಡಿಯೂರಪ್ಪ' ಹೇಳಿದ್ದೇನು..?

19 Apr 2021.8:34 PM

ಬೆಂಗಳೂರು : ರಾಜ್ಯದಲ್ಲಿ ಲಾಕ್​ ಡೌನ್​ ಮಾಡುವುದಿಲ್ಲ. ಆದರೆ, ರಾತ್ರಿ ಕರ್ಫ್ಯೂವನ್ನು ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರವನ್ನು ನಿಯಂತ್ರಣಕ್ಕೆ ತರೋದು ಹಾಗೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವಂತ ಕೊರೋನಾ ಬ್ರೇಕ್ ಗಾಗಿ ಕಠಿಣ ನಿಯಮ ಜಾರಿಗೆಗೊಳೋಸೋ ಸಂಬಂಧ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯನ್ನು ಇಂದು ನಡೆಸಲಾಯಿತು. ಈ ವೇಳೆ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಸಿಎಂ, ರಾಜ್ಯದಲ್ಲಿ ಮತ್ತೊಂದು ಲಾಕ್​ ಡೌನ್​ ಘೋಷಣೆ ಮಾಡುವುದಿಲ್ಲ, ಕರ್ಫ್ಯೂ ವಿಸ್ತರಣೆ ಸೇರಿದಂತೆ ಬಿಗಿ ನಿಯಂತ್ರಣದ ಕುರಿತು ನಾಳೆ ತೀರ್ಮಾನಿಸುತ್ತೇವೆ. ರಾಜ್ಯಪಾಲರ ಅಭಿಪ್ರಾಯ ಪಡೆದ ಬಳಿಕ ಅಂತಿಮವಾಗಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು.

ಲಾಕ್​ಡೌನ್ ಮಾಡುವಂಥ ಪರಿಸ್ಥಿತಿಯಿಲ್ಲ. ನಾಳೆ ಸಭೆ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಎಂಟು ವಲಯಕ್ಕೆ ಎಂಟು ಸಚಿವರಿದ್ದಾರೆ. ಯಾವುದೇ ಭಯ ಬೇಡ. ನಾಳೆ ಸರ್ವಪಕ್ಷ ಸಭೆ ಬಳಿಕ ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಒಟ್ಟಿನಲ್ಲಿ ರಾಜ್ಯ ಸರ್ಕಾರ ನಾಳೆ ಯಾವೆಲ್ಲಾ ಕಠಿಣ ನಿಯಮ ಜಾರಿಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇನ್ನೂ, ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 9618 ಜನರು ಸೇರಿದಂತೆ ರಾಜ್ಯಾಧ್ಯಂತ 15785 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.. ಇಂದು 7098 ಸೋಂಕಿತರು ಸೇರಿದಂತೆ ಇದುವರೆಗೆ 10,21,250 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 1,42,084 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.





Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags