ವಿಜಯವಾಣಿ

505k Followers

ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಎಂದು.? ಇಲ್ಲಿದೆ ನೋಡಿ ಸಂಪೂರ್ಣ ಡಿಟೇಲ್ಸ್‌

20 Apr 2021.2:03 PM

ಬೆಂಗಳೂರು: ಕಳೆದ ವರ್ಷದ ಶೈಕ್ಷಣಿಕ ವರ್ಷವನ್ನು ಭಾಗಶಃ ಕಸಿದುಕೊಂಡಿದ್ದ ಕರೊನಾ, ಈ ವರ್ಷದ ಶೈಕ್ಷಣಿಕ ವರ್ಷವನ್ನು ಬಹುತೇಕ ತಿಂದುಹಾಕಿದೆ. ಶಾಲೆಯೂ ಇಲ್ಲ, ಪರೀಕ್ಷೆಯೂ ಇಲ್ಲ… ಮಕ್ಕಳು ಸಕತ್‌ ಖುಷಿಯಾಗಿದ್ದರೆ, ಬಹುತೇಕ ಪಾಲಕರಿಗೆ, ಶಿಕ್ಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ.

ಈ ನಡುವೆಯೇ ಶಾಲೆಗೆ ಬೇಸಿಗೆ ರಜೆ ಕುರಿತು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಗ್ಗೆ, ಜತೆಗೆ ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ಎಲ್ಲರಲ್ಲಿಯೂ ನೂರೆಂಟು ಪ್ರಶ್ನೆಗಳು ತಲೆಯನ್ನು ಕೊರೆಯುತ್ತಿವೆ.

ಸದ್ಯ ಈ ಬಗ್ಗೆ ತಾತ್ಕಾಲಿಕವಾಗಿ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಈ ರೀತಿ ವೇಳಾ ಪಟ್ಟಿಯನ್ನು ನೀಡಿದೆ. ಅದೇನೆಂದು ಇಲ್ಲಿದೆ ನೋಡಿ…

ಪ್ರಾಥಮಿಕ ಶಾಲೆಗಳಿಗೆ:
* 1 ರಿಂದ 7ನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ಮೇ 1ರಿಂದ ಜೂನ್‌ 14ರವರೆಗೆ ಬೇಸಿಗೆ ರಜೆ
* ಜೂನ್‌ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ.

ಪ್ರೌಢಶಾಲೆಗಳಿಗೆ
* ಪ್ರೌಢ ಶಾಳೆಗಳಲ್ಲಿನ 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ
*ಪ್ರೌಢ ಶಾಲೆಗಳಲ್ಲಿನ ಶಿಕ್ಷಕರಿಗೆ ಜೂನ್‌ 15ರಿಂದ ಜುಲೈ 14ರವರೆಗೆ ಬೇಸಿಗೆ ರಜೆ
ಜುಲೈ 15ರಿಂದ 2021-2ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ

ಎಸ್‌ಎಸ್‌ಎಲ್‌ಸಿ ಪರೀಕ್ಷೆ:
* ಜೂನ್‌ 21ರಿಂದ ಜುಲೈ 5ರವರೆಗೆ ಎಸ್‌ಎಸ್‌ಎಸ್‌ಸಿ ಪರೀಕ್ಷೆಗಳು ನಡೆಯುತ್ತವೆ.

ಕೇಂದ್ರ ಸರ್ಕಾರದ ಪಿಎಫ್​ಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಒಂದೂವರೆ ಲಕ್ಷ ರೂ. ಸಂಬಳ ಪರೀಕ್ಷೆ ಈಗಲೇ ಬೇಡ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳು- ಸ್ಪಂದಿಸಿದ ವಿವಿ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!
Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani