Kannada News Now

1.8M Followers

ALEART: ರಾಜ್ಯದಲ್ಲಿ ಇಂದಿನಿಂದ ಮೇ.4ರವರೆಗೆ 14 ದಿನ 'ವೀಕೆಂಡ್ ಕರ್ಪ್ಯೂ', 'ನೈಟ್ ಕರ್ಪ್ಯೂ' ಜಾರಿ: ಏನುಂಟು, ಏನಿರಲ್ಲ..? ಇಲ್ಲಿದೆ ಮಾಹಿತಿ

21 Apr 2021.05:38 AM

*ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ 'ವೀಕೆಂಡ್ ಕರ್ಪ್ಯೂ', ನೈಟ್ ಕರ್ಪ್ಯೂ' ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ತರದ ಆದೇಶ ಹೊರಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊಸ ಮಾರ್ಗಸೂಚಿಯಲ್ಲಿ 14 ದಿನಗಳ ವರೆಗೆ ರಾಜ್ಯಾಧ್ಯಂತ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಇಂದು ಇಂದಿನಿಂದ ಜಾರಿಗೆ ಬರಲಿದೆ. ಇಂದಿನಿಂದ ಸೆ 144 ಸಿ ಕಾಯಿದೆಯನ್ನು ಜಾರಿಗೆ ಮಾಡಲಾಗಿದೆ. ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿದ್ದು, ಅನಗತ್ಯವಾಗಿ ಯಾರೂ ಹೊರಗೆ ಬರುವಂತಿಲ್ಲ.

ಇದಲ್ಲದೇ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.

.ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಏನಿರಲ್ಲ : ಚಿತ್ರಮಂದಿರ​, ಶಾಪಿಂಗ್ ಮಾಲ್​, ಜಿಮ್​, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮನೋರಂಜನಾ ಸ್ಥಳ, ಸ್ವಿಮ್ಮಿಂಗ್ ಪೂಲ್​, ಬಾರ್ & ಆಡಿಟೋರಿಯಂ, ಮಸೀದಿ, ಮಂದಿರ, ಚರ್ಚ್​ಗಳನ್ನು ಬಂದ್ ಮಾಡಲಾಗಿದೆ, ಮಸೀದಿ, ಮಂದಿರ, ಚರ್ಚ್​ಗಳಲ್ಲಿ ಪೂಜೆ ಮಾಡುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಬೇರೆಯವರಿಗೆ ಅವಕಾಶ ಇರೋದಿಲ್ಲ. ಕಟಿಂಗ್ ಶಾಪ್​, ಬ್ಯೂಟಿ ಪಾರ್ಲರ್​ಗಳು ಕೂಡ ಓಪನ್‌ ಇರಲಿದ್ದು, ಈ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಇದಲ್ಲದೇ ಬಸ್​​ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದ್ದು, ಊರಿನಿಂದ ಊರಿಗೆ ರಾತ್ರಿ ಸಮಯದಲ್ಲಿ ತೆರಳುವವರು ತಪ್ಪದೇ ತಮ್ಮ ಬಳಿ ಪ್ರಯಾಣದ ಟಿಕೇಟ್‌ ಅನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದ್ದು, ತಪಾಸಣೆ ವೇಳೆಯಲ್ಲಿ ತೋರಿಸಬೇಕಾಗಿದೆ. ಸದ್ಯದದ ಮಟ್ಟಿಗೆ ಶಾಲಾ ಕಾಲೇಜುಗಳನ್ನು ಏಳು ದಿನಗಳ ಮಟ್ಟಿಗೆ ಬಂದ್ ಮಾಡಲಾಗಿದ್ದು, ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಹೋಟೆಲ್‌, ಬಾರ್‌, ಫುಡ್‌ ಸ್ಟ್ರೀಟ್‌, ದರ್ಶಿನಿ, ರೆಸ್ಟೋರೆಂಟ್‌ ಗಳಲ್ಲಿ ಊಟ ಮಾಡಲು ಅವಕಾಶ ಇರೋದಿಲ್ಲ, ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶ. ರಾಜಕೀಯ ಚಟುವಟಿಕೆಗಳಿಗೆ ನಿರ್ಬಂದ, ಶಾಪಿಂಗ್ ಮಾಲ್​​ ಬಂದ್‌.

ಏನುಂಟು : ಆಸ್ಪತ್ರೆ, ಕ್ಲಿನಿಕ್‌, ತುರ್ತು ವಾಹನಗಳ ಸಂಚಾರ, ಮಾರುಕಟ್ಟೆ, ಮೆಡಿಸನ್‌ ಶಾಪ್‌ಗಳು, ಎಟಿಎಂ, ಬ್ಯಾಂಕ್‌ಗಳು, ಅಗತ್ಯವಾಗಿರುವ ಸಂಚಾರ ವಾಹನಕ್ಕೆ ಅವಕಾಶ, ಅಂತರ್ ಜಿಲ್ಲಾ ಓಡಾಡಕ್ಕೆ ಅವಕಾಶ, ಸರ್ಕಾರಿ ಕಚೇರಿಗಳು, ಬಸ್‌ ಸಂಚಾರ ಇರುತ್ತವೆ. ಇ ಕಾಮರ್ಸ್, ಕೋಲ್ಡ್ ಸ್ಟೋರೇಜ್, ವೇರ್ ಹೌಸಿಂಗ್ ಕಟ್ಟಡ ಕಾಮಗಾರಿಗಳಿಗೆ ಅನುಮತಿ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇಲ್ಲ ವಿಮೆ ಸಂಸ್ಥೆಗಳು, ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳಿಗೆ ಅವಕಾಶ ತರಕಾರಿ, ಹಣ್ಣು, ದಿನಸಿ, ಹಾಲಿನ ಕೇಂದ್ರಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಮಾತ್ರ ತೆರೆಯಲು ಅವಕಾಶ.

ಈ ನಡುವೆ ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿದ್ದು , ಮಂಗಳವಾರಕ್ಕೆ ಅನ್ವಯವಾಗುವಂತೆ ಕಳೆದ 24 ಗಂಟೆಯಲ್ಲಿ 21,794 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags