Kannada News Now

1.8M Followers

BIG BREAKING NEWS : ರಾಜ್ಯ ಸರ್ಕಾರದಿಂದ 'ಪರಿಷ್ಕೃತ ಮಾರ್ಗಸೂಚಿ' ರಿಲೀಸ್ : ರಾಜ್ಯದ್ಯಂತ 'ಅಗತ್ಯಸೇವೆ' ಹೊರತುಪಡಿಸಿ ಎಲ್ಲವೂ ಬಂದ್

22 Apr 2021.3:04 PM

ವರದಿ : ವಸಂತ ಬಿ ಈಶ್ವರಗೆರೆ ಜೊತೆಗೆ, ಅವಿನಾಶ್ ಆರ್ ಭೀಮಸಂದ್ರ

ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಲಾಗಿತ್ತು. ಈ ವೇಳೆಯಲ್ಲಿ ಅಗತ್ಯಸೇವೆ ಒದಗಿಸುವಂತ ಇಲಾಖೆ ಜೊತೆಗೆ, ಇತರೆ ಸೇವೆ ಒದಗಿಸುವಂತ ಇಲಾಖೆಗಳಿಗೂ ಅವಕಾಶ ನೀಡಲಾಗಿತ್ತು. ಆದ್ರೇ.. ಇದೀಗ ಕೊರೋನಾ ನೈಟ್ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಇಂತಹ ಮಾರ್ಗಸೂಚಿಯಲ್ಲಿ ಅಗತ್ಯ ಸೇವೆ ಹೊರತಾಗಿ, ಎಲ್ಲಾ ಶಾಪ್ ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿ ಕ್ರಮದಂತೆ ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಇದಲ್ಲದೇ ಅಗತ್ಯ ಸೇವೆ ಒದಗಿಸುವಂತ ಸೇವೆಯ ಶಾಪ್ ಗಳು ಹೊರತಾಗಿ, ರಾಜ್ಯಾಧ್ಯಂತ ಇತರೆ ಶಾಪ್ ಗಳನ್ನು ಬಂದ್ ಮಾಡುವಂತೆ ಇದೀಗ ನೂತನ ಮಾರ್ಗಸೂಚಿ ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ನಿನ್ನೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಮಾರ್ಗಸೂಚಿ ಆದೇಶದಲ್ಲಿ ಅಗತ್ಯಸೇವೆ ಹೊರತಾಗಿ ಉಳಿದ ಎಲ್ಲಾ ಶಾಪ್ ಬಂದ್ ಗೆ ಸೂಚಿಸಲಾಗಿದೆ. ಹೀಗಾಗಿ ಪೊಲೀಸರು ಫೀಲ್ಡಿಗೆ ಇಳಿದಿದ್ದು, ಅಗತ್ಯ ಸೇವೆ ಒದಗಿಸುವಂತೆ ಮೆಡಿಕಲ್, ಹಾಲು, ಇ-ಕಾಮರ್ಸ್ ಸೇರಿದಂತೆ ಇತರೆ ಶಾಪ್ ಹೊರತಾಗಿ, ಇತರೆ ಅಂಗಡಿ ಮುಂಗಟ್ಟುಗಳನ್ನು ಕ್ಲೋಸ್ ಮಾಡುತ್ತಿದ್ದಾರೆ.

ಯಾವುದಕ್ಕೆ ಅನುಮತಿ

  • ಕೋವಿಡ್ ಸುರಕ್ಷಾ ನಿಯಮಗಳೊಂದಿಗೆ ಎಲ್ಲಾ ಬಗೆಯ ನಿರ್ಮಾಣ, ದುರಸ್ತಿ ಚಟುವಟಿಕೆಗಳಿಗೆ ಅನುಮತಿ
  • ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೂ ಯಾವುದೇ ನಿರ್ಬಂಧವಿಲ್ಲ
  • ಎಲ್ಲಾ ಬಗೆಯ ಕೈಗಾರಿಕೆಗಳು, ಸಂಸ್ಥೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದು
  • ಸಿಬ್ಬಂದಿ ಓಡಾಟಕ್ಕೆ ಸಂಸ್ಥೆಗಳಿಂದ ಪಡೆದುಕೊಂಡ ಐಡಿ ಕಾರ್ಡ್ ತೋರಿಸುವುದು ಕಡ್ಡಾಯ
  • ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು ತರಕಾರಿ, ಹಾಲಿನ ಬೂತ್, ಮೀನು-ಮಾಂಸ, ಪಶು ಆಹಾರ ಅಂಗಡಿಗಳ ಸೇವೆ ಅಭಾಧಿತ
  • ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂಪಿನ ವ್ಯಾಪಾರ ನಡೆಸಲು ಅನುಮತಿ. ಕಟ್ಟಡದಲ್ಲಿ ನಡೆಸುವಂತಿಲ್ಲ
  • ಬ್ಯಾಂಕ್, ವಿಮಾ ಕಚೇರಿ, ಎಟಿಎಂ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ಷೇರು ವಿನಿಮಯ ಸೇವಾ ಕೇಂದ್ರಗಳಿಗೆ ಅವಕಾಶ
  • ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಕೆ ಅವಕಾಶ
  • ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಅವಕಾಶ
  • ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆ ಮುಕ್ತ ಅವಕಾಶ. ಯಾವುದೇ ಪೂರ್ವಾನುಮತಿ ಬೇಕಿಲ್ಲ
  • ಮೆಟ್ರೋ, ಬಸ್, ಕ್ಯಾಬ್, ಆಟೋ ಸಂಚಾರಕ್ಕೆ ಅವಕಾಶ. ಒಟ್ಟು ಆಸನ ಸಾಮರ್ಥ್ಯ ಶೇ.50 ಮಾತ್ರ
  • ಶನಿವಾರ ಮತ್ತು ಭಾನುವಾರ ದಿನಸಿ, ತರಕಾರಿ, ಹಾಲು, ಅಂಗಡಿಗಳು ಬೆಳ್ಳಗೆ 6 ರಿಂದ 10ರವರೆಗೆ ಮಾತ್ರ ತೆರದಿಯಲು ಅವಕಾಶ

ಯಾವುದಕ್ಕೆ ನಿರ್ಬಂಧ

  • ಶಾಲೆ ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ ಬಂದ್
  • ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ, ಕ್ರೀಡಾ ಸಂಕೀರ್ಣ, ಅಮ್ಯಾಸ್ ಮೆಂಟ್ ಪಾರ್ಕ್, ಸಭಾಂಗಣ, ಅಸೆಂಬ್ಲಿ ಹಾಲ್ ಬಂದ್
  • ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ. ಆದ್ರೇ ದೈನಂದಿನ ಪೂಜಾ ಕೈಂಕರ್ಯಕ್ಕೆ ತಡೆ ಇಲ್ಲ
  • ಹೋಟೆಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ
  • ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ನಿಷೇಧ
  • ಲಾಡ್ಜ್ ಗಳಲ್ಲಿ ಈಗಾಗಲೇ ತಂಗಿರುವ ಅತಿಥಿಗಳಿಗೆ ಮಾತ್ರ ಸೇವೆ ಒದಗಿಸಲು ಅವಕಾಶ
  • ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದ್ದು.

ಹೀಗಿದೆ ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿರುವಂತ ಪರಿಷ್ಕೃತ ಮಾರ್ಗಸೂಚಿ ಕ್ರಮಗಳು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags