ವಿಜಯವಾಣಿ

505k Followers

ವೀಕೆಂಡ್ ಕರ್ಫ್ಯೂನಂತೆ ನಾಳೆಯಿಂದ​ 14 ದಿನ ಬಿಗಿ ಕ್ರಮ: ಸಿಎಂ ಯಡಿಯೂರಪ್ಪ ಆದೇಶ, ಉಚಿತ ಲಸಿಕೆ ವಿತರಣೆಗೆ ನಿರ್ಧಾರ

26 Apr 2021.3:17 PM

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೋವಿಡ್19 ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವುದರಿಂದ ಏಪ್ರಿಲ್ 27 ರಿಂದ 14 ದಿನ ಕರ್ನಾಟಕವನ್ನು ವೀಕೆಂಡ್ ಕರ್ಫ್ಯೂನಂತೆ ಲಾಕ್​ಡೌನ್ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.

ಮಂಗಳವಾರ ಸಂಜೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಆ ನಂತರ ಕಟ್ಟುನಿಟ್ಟಿನ ಲಾಕ್​ಡೌನ್ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ ರಾಜ್ಯದ್ಯಂತ ಉಚಿತ ಲಸಿಕೆ ವಿತರಣೆಗೆ ನಿರ್ಧಾರ ಮಾಡಲಾಗಿದೆ. ಸಚಿವ ಸಂಪುಟದ ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಯಡಿಯೂರಪ್ಪನವರು ಮಾತನಾಡಿದರು.

ಪ್ರಮುಖವಾಗಿ ಮದ್ಯ ಖರೀದಿಗೂ ಅವಕಾಶವನ್ನು ಬೆಳಿಗ್ಗೆ 6 ರಿಂದ 10 ಗಂಟೆಯವರಗೆ ಅವಕಾಶ ನೀಡಲಾಗಿದೆ. ಸಾರಿಗೆ ಪ್ರಯಾಣ ಇರುವುದಿಲ್ಲ. ಸರಕು ಸಾಗಾಣೆ ವಾಹನಗಳಿಗೆ ಅವಕಾಶ ಇರುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯಲಿದ್ದ ಎಲ್ಲ ಬಗೆಯ ಚುನಾವಣೆಗಳನ್ನೂ ಮುಂದೂಡಲಾಗಿದೆ. ಆರು ತಿಂಗಳವರೆಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳೂ ನಡೆಯುವುದಿಲ್ಲ.

ಗಾರ್ಮೆಂಟ್ ವಲಯವನ್ನು ಬಿಟ್ಟು ಎಲ್ಲ ಉತ್ಪಾದನಾ ವಲಯ, ಕನ್ಸಟ್ರಕ್ಸನ್ ವಲಯಕ್ಕೆ ಅವಕಾಶ ನೀಡಲಾಗಿದೆ. ಕರೊನಾ ಪೀಡಿತರಿಗೆ ಆಮ್ಲಕನಕದ ಕೊರತೆ ಇಲ್ಲ. ಯಾರೂ ಚಿಂತಿಸುವುದು ಬೇಡ. ಅಂಗಡಿ ಮುಂಗಟ್ಟುಕಾರರು ಈ ನಿಯಮಗಳನ್ನು ಪಾಲಿಸಿ, ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆಎ. ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯು ಸಚಿವ ಕೆ ಸುಧಾಕರ್ ಅವರು ಲಾಕ್​ಡೌನ್ ಮಾಡಲೇಬೇಕು. ಇಲ್ಲದಿದ್ದರೇ ಕಷ್ಟವಾಗುತ್ತದೆ ಎಂದು ಪಟ್ಟು ಹಿಡಿದಿದ್ದರಿಂದ ಯಡಿಯೂರಪ್ಪ ಅವರು ಅನಿವಾರ್ಯವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಕೋವಿಡ್ ಅಟ್ಟಹಾಸ: ಗೂಗಲ್, ಮೈಕ್ರೋಸಾಫ್ಟ್ ಸಿಇಓಗಳ ಕಂಬನಿ, ಹೃದಯ ವಿದ್ರಾವಕ ಎಂದ ಸತ್ಯಾ ನಾದೆಲ್ಲ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags