Kannada News Now

1.8M Followers

BIG BREAKING NEWS : ರಾಜ್ಯ 'ಸರ್ಕಾರಿ ನೌಕರ'ರಿಗೆ ಬಿಗ್ ಶಾಕ್ : 'ಕೋವಿಡ್ ನಿರ್ವಹಣೆ'ಗಾಗಿ '1 ತಿಂಗಳ ವೇತನ' ಕಡಿತ

26 Apr 2021.5:04 PM

ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರ ರಾಜ್ಯದಲ್ಲಿ ಅಬ್ಬರಿಸಿದೆ. ಈ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ನಾಳೆಯಿಂದ 14 ದಿನ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅಲ್ಲದೇ ಆರೋಗ್ಯ ತುರ್ತು ಕ್ರಮಗಳಿಗೆ ಬಳಸಿಕೊಳ್ಳೋದಕ್ಕಾಗಿ ರಾಜ್ಯದ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಡಿತಗೊಳಿಸುವಂತ ನಿರ್ಧಾರವನ್ನು ಕೂಡ ಕೈಗೊಂಡಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ.

ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿನ ಕೊರೋನಾ ಸೋಂಕಿನ ನಿಯಂತ್ರಣ ಕ್ರಮ ಕುರಿತಂತೆ ತುರ್ತು ಸಚಿವ ಸಂಪುಟ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಮಹತ್ವದ ಕ್ರಮಗಳ ಚರ್ಚೆ ನಡೆಸಿದ ನಂತ್ರ, ರಾಜ್ಯಾಧ್ಯಂತ ಕೊರೋನಾ ನಿಯಂತ್ರಣಕ್ಕಾಗಿ 14 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.

ಇದಷ್ಟೇ ಅಲ್ಲದೇ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕೂಡಾ ಆರೋಗ್ಯ ತುರ್ತು ಕಾರ್ಯಕ್ರಮಗಳಿಗೆ ಬಳಸಿಕೊಳ್ಳೋದಕ್ಕಾಗಿ ನಿರ್ಧರಿಸಲಾಗಿದೆ. ಆದ್ರೇ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಹೊರತು ಪಡಿಸಿ, ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ಮುಂದಾಗಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ. ಆದ್ರೇ ರಾಜ್ಯ ಸರ್ಕಾರಕ್ಕೆ ಸುಮಾರು 5000 ಸಾವಿರ ಕೋಟಿ ಆರೋಗ್ಯ ತುರ್ತು ಪರಿಸ್ಥಿತಿಗಾಗಿ ಉಳಿತಾಯವಾಗಲಿದೆ.

ಇನ್ನೂ ಕೇವಲ ಸರ್ಕಾರಿ ನೌಕರರ ವೇತನವಷ್ಟೇ ಅಲ್ಲದೇ, ಸಚಿವರು, ಶಾಸಕರು, ಪರಿಷತ್ ಸದಸ್ಯರ ವೇತ ಕೂಡ ಕಡಿತಗೊಳಿಸುವ ಮೂಲಕ, ಆರೋಗ್ಯ ತುರ್ತು ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags