ಕನ್ನಡದುನಿಯಾ

1.6M Followers

ಗಮನಿಸಿ.! ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಡೀಟೇಲ್ಸ್

27 Apr 2021.06:34 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ 14 ದಿನ ಕಠಿಣ ನಿಯಮ ಜಾರಿಗೊಳಿಸಲಾಗ್ತಿದೆ. ಇಂದು ರಾತ್ರಿ 9 ಗಂಟೆಯಿಂದ ನಿಯಮ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತು, ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲಾಗುವುದು.

ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ, ಆಹಾರ, ಹಣ್ಣು, ತರಕಾರಿ, ಮಾಂಸ, ಮೀನು, ಜಾನುವಾರು ಮೇವು, ವ್ಯಾಪಾರ, ಪಡಿತರ ವಿತರಣೆ ಇರಲಿವೆ. ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಪಡೆಯಬಹುದು. ಅನಗತ್ಯ ಓಡಾಟ ತಪ್ಪಿಸಲು ಮನೆ ಬಾಗಿಲಿಗೆ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು.

ಬಸ್, ಮೆಟ್ರೋ, ಆಟೋ, ಕ್ಯಾಬ್ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಅದೇ ರೀತಿ ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರಗಳು ಮುಚ್ಚಲಿದ್ದು, ಆನ್ಲೈನ್ ಕ್ಲಾಸ್ ಗೆ ಅವಕಾಶ ಇರುತ್ತದೆ.

ಜಿಮ್, ಕ್ರೀಡಾ ಸಂಕೀರ್ಣ, ಚಿತ್ರಮಂದಿರ, ಶಾಪಿಂಗ್ ಮಾಲ್, ಕ್ರೀಡಾಂಗಣಗಳಿರಲ್ಲ. ಈಜುಕೊಳ, ಮನರಂಜನಾ ಕೇಂದ್ರ, ರಂಗಮಂದಿರ, ಸಭಾಂಗಣ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕಾರ್ಮಿಕ ಸಮಾವೇಶ ಇರಲ್ಲ.

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್, ಮನೆ ವಿಲೇವಾರಿಗೆ ಅವಕಾಶವಿದೆ. ಕ್ರೀಡಾ ಪ್ರಾಧಿಕಾರದಿಂದ ಅನುಮತಿಸಿದ ತರಬೇತಿ, ಕ್ರೀಡಾಭ್ಯಾಸವನ್ನು ಪ್ರೇಕ್ಷಕರಿಲ್ಲದೆ ನಡೆಸಬಹುದು. ಸಿಮ್ಮಿಂಗ್ ಫೆಡರೇಶನ್ ನಿಂದ ಅನುಮತಿ ಪಡೆದ ಈಜುಕೊಳದಲ್ಲಿ ತರಬೇತಿ ಪಡೆಯಬಹುದು.

ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅರ್ಚಕರು ಪೂಜೆ ನೆರವೇರಿಸಬಹುದು. ಸರಕು ಸಾಗಣೆ ವಾಹನಗಳ ಓಡಾಟ ಮತ್ತು ಅಗತ್ಯ ಸೇವೆಯಲ್ಲಿರುವ ಉದ್ಯಮ ಇಲಾಖೆಗಳ ಕಾರ್ಯ ನಿರ್ವಹಣೆ ಇರಲಿದೆ. ಕೃಷಿ ಚಟುವಟಿಕೆ, ಕೃಷಿ ಉತ್ಪನ್ನ, ಉಪಕರಣ ಮಳಿಗೆ, ನರೇಗಾ ಕಾಮಗಾರಿ, ಬ್ಯಾಂಕ್ ವಿಮೆ, ಪ್ರಿಂಟ್, ಎಲೆಕ್ಟ್ರಾನಿಕ್ ಮೀಡಿಯಾ, ಅಂಚೆ ಕಚೇರಿ ಮೊದಲಾದವುಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags