ವಿಜಯವಾಣಿ

505k Followers

ನಾಳೆಯಿಂದ ನೌಕರರಿಗಾಗಿ ಬಸ್‌ ಇರುತ್ತಾ? ಕೆಲಸಕ್ಕೆ ಹೋಗಲು ಪಾಸ್‌ ಬೇಕಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ ನೋಡಿ.

27 Apr 2021.1:37 PM

ಬೆಂಗಳೂರು: ಕಾರ್ಮಿಕರು ಕೆಲಸಕ್ಕೆ ತೆರಳಲು ಪಾಸ್ ಬೇಕಾಗಿಲ್ಲ. ವಿವಿಧ ಇಲಾಖೆಗಳ ನೌಕರರು, ನಿರ್ಮಾಣ ಕಾಮಗಾರಿಗಳ ಕಾರ್ಮಿಕರು ಸೇರಿದಂತೆ ಅಗತ್ಯ ಸೇವೆಗೆ ತೆರಳುವವರಿಗೆ ನಿಯಮಿತವಾಗಿ ಬಸ್‌ಗಳ ವ್ಯವಸ್ಥೆಯಿರುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.

ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿಯಿಂದ ಜಾರಿಗೆ ಬರಲಿರುವ ಬಿಗಿಕ್ರಮಗಳ (ಸೆಮ್‌ ಲಾಕ್‌ಡೌನ್) ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ‌.
ಡಿಜಿಪಿ, ಎಡಿಜಿಪಿ ಒಳಗೊಂಡು ಉನ್ನತಾಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆ ನೀಡಲಾಗಿದೆ. ಜನರು ಅನವಶ್ಯಕವಾಗಿ ಓಡಾಡುವಂತಿಲ್ಲ. ಮೊದಲು ಕಂಡರೆ ಎಚ್ಚರಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಪುನರಾವರ್ತಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಾರಾಷ್ಟ್ರ ಮಾದರಿ
ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಉಲ್ಬಣಿಸಿತ್ತು. ಕಠಿಣ ಕ್ರಮ ಜಾರಿಗೊಳಿಸಿದ ನಂತರ ನಿಯಂತ್ರಣಕ್ಕೆ ಬಂದಿದೆ. ಇದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಿದ್ದು, ಜನರು ಸ್ವಯಂ ನಿಯಂತ್ರಣ ಹೇರಿಕೊಂಡರೆ ಕರೊನಾ ವಿರುದ್ಧದ ಹೋರಾಟ ಯಶಸ್ವಿಯಾಗಿತ್ತದೆ. ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವಿಕೆಯು ಇತರರ ಆರೋಗ್ಯ ರಕ್ಷಣೆಗೂ ನೆರವಾಗಲಿದೆ ಎಂದು ಬೊಮ್ಮಾಯಿ‌ ಹಿತ ನುಡಿದರು.

ಇದು 'ಪಾಸಿಟಿವ್‌' ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

ಐಪಿಎಲ್‌ ಆಟಗಾರರ ಮೇಲೆ ಕರೊನಾ ಕರಿನೆರಳು- ಯಾರೇ ಹೋದರೂ ಡೋಂಟ್‌ ಕೇರ್‌ ಎಂದ ಬಿಸಿಸಿಐ

ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್‌ಗೆ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani