ವಿಜಯವಾಣಿ

505k Followers

ಮಹಿಳೆ ಮರುಮದುವೆಯಾಗಿ ಹುಟ್ಟುವ ಮಗುವಿಗೆ ಮೊದಲ ಪತಿಯ ಆಸ್ತಿಯೂ ಸಿಗುತ್ತಾ?

20 May 2021.1:11 PM

 ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಹತ್ತು ವರ್ಷ ಆಯಿತು. ನಮ್ಮ ತಾಯಿ ಮತ್ತೊಂದು ಮದುವೆ ಆದರು. ಅವರಿಗೆ ಈಗ ಒಂದು ಗಂಡು ಮಗುವೂ ಇದೆ. ನಮ್ಮ ತಂದೆ ಆಸ್ತಿಗಳನ್ನು ಬಿಟ್ಟು ತೀರಿಕೊಂಡಿದ್ದರು. ನಮ್ಮ ತಾಯಿ ಎಲ್ಲ ಆಸ್ತಿಗಳ ಖಾತೆಯನ್ನೂ ತನ್ನ ಹೆಸರಿಗೇ ಮಾಡಿಸಿಕೊಂಡಿದ್ದಾರೆ.

ಈಗ ನನಗೆ ನಮ್ಮ ತಂದೆಯ ಆಸ್ತಿಗಳನ್ನುಬಿಟ್ಟು ಕೊಡು ಎಂದರೆ ಅರ್ಧ ಭಾಗ ನಿನಗೆ ಅರ್ಧ ಭಾಗ ನಮ್ಮ ತಾಯಿಯ ಮಗನಿಗೆ ಕೊಡುತ್ತೇನೆ ಎನ್ನುತ್ತಿದ್ದಾರೆ.

ನಮ್ಮ ತಂದೆಯ ಆಸ್ತಿಯಲ್ಲಿ, ನಮ್ಮ ತಾಯಿಗೆ ಮತ್ತೊಬ್ಬರಿಂದ ಹುಟ್ಟಿದ ಮಗುವಿಗೆ ಆಸ್ತಿ ಏಕೆ ಹೋಗಬೇಕು? ನಮ್ಮ ತಾಯಿಯ ಮತ್ತೊಬ್ಬ ಗಂಡ ಅಷ್ಟೊಂದು ಸ್ಥಿತಿವಂತರಲ್ಲ. ಅವರಿಗೂ ಒಂದು ಆಸ್ತಿ ಇದೆ. ಅದರಲ್ಲಿ ನನಗೆ ಪಾಲು ಇಲ್ಲವಂತೆ. ಇದು ಯಾವ ನ್ಯಾಯ? ನನಗೆ ನ್ಯಾಯ ಸಿಗಲು ಏನು ಮಾಡಬೇಕು ತಿಳಿಸಿ.

ಉತ್ತರ: ನಿಮ್ಮ ಮೃತ ತಂದೆಯ ಆಸ್ತಿಯಲ್ಲಿ ನಿಮಗೂ ನಿಮ್ಮ ತಾಯಿಗೂ ಸಮಪಾಲು ಇದೆ. ನಿಮ್ಮ ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ. ನಿಮ್ಮ ಅರ್ಧ ಭಾಗಕ್ಕೆ ದಾವೆ ಹಾಕಿ ನೀವು ಅದನ್ನು ಪಡೆಯಬಹುದು. ನಿಮ್ಮ ತಾಯಿಯ ಅರ್ಧ ಭಾಗ ಅವರು ಯಾರಿಗೆ ಬೇಕಾದರೂ ಕೊಡಬಹುದು. ಅವರ ಭಾಗವನ್ನು ಅವರು ತಮಗೆ ಮತ್ತೊಬ್ಬ ಪತಿಯಿಂದ ಹುಟ್ಟಿದ ಮಗುವಿಗೆ ಕೊಡುವುದನ್ನು ನೀವು ತಪ್ಪಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇನ್ನು, ನಿಮ್ಮ ತಾಯಿಯ ಮತ್ತೊಬ್ಬ ಪತಿಯ ಆಸ್ತಿಯಲ್ಲಿ , ನಿಮಗೆ ಯಾವ ಭಾಗವೂ ಬರುವುದಿಲ್ಲ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

ಇಬ್ಬರು ಪತ್ನಿಯರನ್ನು ಹೊಂದಿದ್ದ ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

ಮುಸ್ಲಿಂ ಧರ್ಮದ ನಿರುದ್ಯೋಗಿ, ನಡತೆ ಬಿಟ್ಟು ದೂರವಾದ ಉದ್ಯೋಗಸ್ಥ ಪತ್ನಿಯಿಂದ ಜೀವನಾಂಶ ಕೇಳಬಹುದೆ?

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags