Kannada News Now

1.8M Followers

`Whats App' ಬಳಕೆದಾರರಿಗೆ ಬಿಗ್ ಶಾಕ್ : ಬಳಕೆದಾರರಿಗೆ ಇನ್ಮುಂದೆ ಈ ಸೌಲಭ್ಯ ಸಿಗಲ್ಲ!

11 May 2021.05:57 AM

ನವದೆಹಲಿ : ವಾಟ್ಸಪ್ ತನ್ನ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಹೊಸ ಖಾಸಗಿತನ ನೀತಿ ಅಪ್ ಡೇಟ್ ಮಾಡಿಕೊಳ್ಳದಿದ್ದರೂ ವಾಟ್ಸಪ್ ಖಾತೆ ಡಿಲೀಟ್ ಆಗುವುದಿಲ್ಲ. ಆದರೆ ಚಾಟ್ ಲಿಸ್ಟ್, ಇನ್ ಕಮಿಂಗ್ ಪೋನ್ ಕರೆ ಅಥವಾ ವಿಡಿಯೋ ಕರೆಗಳನ್ನು ವಾಟ್ಸಪ್ ಮೂಲಕ ಸ್ವೀಕರಿಸುವುದು ಕಷ್ಟವಾಗಲಿದೆ ಎಂದು ಕಂಪನಿ ಹೇಳಿದೆ.

ಮೇ. 15 ರವರೆಗೆ ಹೊಸ ನೀತಿಗೆ ಅಪ್ ಡೇಟ್ ಆಗಲು ಗಡುವು ನೀಡಿರುವ ಕಂಪನಿ, ಬಳಕೆದಾರರಿಗೆ ಪದೇ ಪದೆ ನೆನಪಿನ ಸಂದೇಶವನ್ನು ಕಳುಹಿಸುತ್ತಿದೆ. ವಾಟ್ಸಪ್ ಪ್ರೈವೆಸಿ ಅಪ್ ಡೇಟ್ ವಿಚಾರವಾಗಿ ಫೆಬ್ರವರಿ ತಿಂಗಳಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಖಾಸಗಿ ಮಾಹಿತಿಯನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.

ಹೀಗಾಗಿ ಹೊಸ ಖಾಸಗಿತನ ನೀತಿ ಅಪ್ ಡೇಟ್ ಮಾಡಿಕೊಳ್ಳದಿದ್ದರೂ ವಾಟ್ಸಪ್ ಖಾತೆ ಡಿಲೀಟ್ ಆಗುವುದಿಲ್ಲ. ಆದರೆ ಚಾಟ್ ಲಿಸ್ಟ್, ಇನ್ ಕಮಿಂಗ್ ಫೋನ್ ಕರೆ ಅಥವಾ ವಿಡಿಯೋ ಕರೆಗಳನ್ನು ವಾಟ್ಸಪ್ ಮೂಲಕ ಸ್ವೀಕರಿಸುವುದು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags