Kannada News Now

1.8M Followers

ʼWhatsApp ಬಳಕೆದಾರʼರಿಗೆ ಗುಡ್‌ ನ್ಯೂಸ್:‌ ಶೀಫ್ರವೇ ʼಇಂಟರ್ನೆಟ್ ಸಂಪರ್ಕವಿಲ್ಲದೆ ಸಂದೇಶ ಕಳುಹಿಸುವʼ ವೈಶಿಷ್ಟ್ಯ ಬಿಡುಗಡೆ

11 May 2021.6:45 PM

ಡಿಜಿಟಲ್‌ ಡೆಸ್ಕ್: ಜನಪ್ರಿಯ ಮೆಸೆಂಜಿಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಗುಡ್‌ ನ್ಯೂಸ್‌ ನೀಡಿದ್ದು, ಶೀಘ್ರದಲ್ಲೇ ಆಫ್ ಲೈನ್ ಮೋಡ್ʼನಲ್ಲಿ ಲಭ್ಯವಿರಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹೌದು, ಇದು ನಿಜ.. ಆಗ ಬಳಕೆದಾರರು ಇಂಟರ್ನೆಟ್ ಅನ್ನು ಬಳಸದೆ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗುತ್ತೆ. ಆದ್ರೆ, ವಾಸ್ತವವಾಗಿ ಇಲ್ಲಿಯವರೆಗೆ ನಿಮ್ಮ ಸ್ಮಾರ್ಟ್ ಫೋನ್ ಮತ್ತು ಡೆಸ್ಕ್ ಟಾಪ್ ಎರಡರಲ್ಲೂ ಲಭ್ಯವಿದೆ ಮತ್ತು ಮೆಸೇಜಿಂಗ್ ಪ್ಲಾಟ್ ಫಾರ್ಮ್ ಅನ್ನು ನಿರ್ವಹಿಸಲು, ಎರಡೂ ಸಾಧನಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನ ಹೊಂದಿರಬೇಕು. ಆದಾಗ್ಯೂ ಈಗ ಬಂದಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್‌ನ ಮುಂಬರುವ ವೈಶಿಷ್ಟ್ಯವು ತನ್ನ ಬಳಕೆದಾರರಿಗೆ ನಿಮ್ಮ ಫೋನ್ʼನಲ್ಲಿ ಇಂಟರ್ನೆಟ್ ಇಲ್ಲದೆಯೇ ವಾಟ್ಸಪ್ ವೆಬ್ ಆಗಿರುವ ವಾಟ್ಸಾಪ್‌ನ ಡೆಸ್ಕ್ ಟಾಪ್ ಆವೃತ್ತಿಯನ್ನ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಹೌದು, ಹ್ಯಾಕ್ ರೀಡ್‌ʼನ ವರದಿಯ ಪ್ರಕಾರ, ಈಗ ಒಬ್ಬರು ತಮ್ಮ ಕಂಪ್ಯೂಟರ್ ಪರದೆಗಳಲ್ಲಿ ವಾಟ್ಸಪ್ ಬಳಸಲು ಪ್ರತಿ ಬಾರಿ ತಮ್ಮ ಮೊಬೈಲ್ʼನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ಅಪ್ಲಿಕೇಶನ್ ತಯಾರಕರು ವಾಟ್ಸಪ್ ವೆಬ್‌ಗಾಗಿ ಸಕ್ರಿಯ ಮೊಬೈಲ್ ಸಂಪರ್ಕದ ಅಗತ್ಯವನ್ನ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಆದ್ರೆ, ನಿಮ್ಮ ಕಂಪ್ಯೂಟರ್ʼನಲ್ಲಿ ಇಂಟರ್ನೆಟ್ ಇಲ್ಲದಿದ್ರು, ನೀವು ವಾಟ್ಸಾಪ್‌ ಬಳಸ್ಬೋದು.

ಪ್ರಸ್ತುತ, ವೈಶಿಷ್ಟ್ಯವು ಇನ್ನೂ ಪರೀಕ್ಷಾ ಪ್ರಕ್ರಿಯೆಯ ಅಡಿಯಲ್ಲಿದೆ. ಆದ್ರೆ, ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಕೆಲವು ಬಳಕೆದಾರರು ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ, ಅಲ್ಲಿ ಅವರು ತಮ್ಮ ವಾಟ್ಸಪ್ ವೆಬ್‌ನಲ್ಲಿ ಸಂದೇಶವನ್ನ ನೋಡುತ್ತಿದ್ದಾರೆ. ಅದು ಅಪ್ಲಿಕೇಶನ್ʼನ ಡೆಸ್ಕ್ ಟಾಪ್ ಆವೃತ್ತಿಯನ್ನ ಬಳಸಲು ತಮ್ಮ ಫೋನ್ʼಗಳನ್ನ ಇಂಟರ್ನೆಟ್ʼಗೆ ಸಂಪರ್ಕಿಸುವ ಅಗತ್ಯವಿಲ್ಲ ಎಂದು ಹೇಳುತ್ತದೆ.

ಇದು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಇದನ್ನು ಮಲ್ಟಿ-ಡಿವೈಸ್ ವೈಶಿಷ್ಟ್ಯ ಎಂದು ಕರೆಯಲಾಗುತ್ತದೆ. ಹೌದು, ಒಂದೇ ಖಾತೆಯ ಮೂಲಕ 4 ವಿಭಿನ್ನ ಸಾಧನಗಳಲ್ಲಿ, ಎಲ್ಲವೂ ಒಂದೇ ಸಮಯದಲ್ಲಿ ವಾಟ್ಸಪ್ ಅನ್ನು ಪ್ರವೇಶಿಸಬಹುದು ಎಂದು ನಂಬಲಾಗಿದೆ. ಮತ್ತು ಅವುಗಳಿಂದ ಹೊರಬರುವ ಮುಖ್ಯ ಸಾಧನಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ ಎನ್ನಲಾಗ್ತಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags