Kannada News Now

1.8M Followers

ಸಾರ್ವಜನಿಕರೇ ಎಚ್ಚರ : ʼCo Winʼನಂತೆಯೇ ಕಾಣುವ ʼ5 ನಕಲಿ ಅಪ್ಲಿಕೇಶನ್‌ʼಗಳಿವೆ.. ಲಿಂಕ್‌ ಒತ್ತಿ ಆಪ್ ಡೌನ್ಲೋಡ್‌ ಮಾಡ್ಕೊಬೇಡಿ : ಕೇಂದ್ರ ಸರ್ಕಾರ

14 May 2021.6:18 PM

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಎರಡನೇ ತರಂಗದ ಭೀಕರ ಪರಿಣಾಮಗಳನ್ನ ಗಮನದಲ್ಲಿಟ್ಟುಕೊಂಡು, ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನ ವೇಗಗೊಳಿಸಲು ಸರ್ಕಾರವು ಸಾರ್ವಜನಿಕರಿಗೆ ಡಿಜಿಟಲೀಕರಣ ನೋಂದಣಿ ಮಾಡುವಂತೆ ಹೇಳಿದೆ. ಅದ್ರಂತೆ, ಪ್ರತಿಯೊಬ್ಬರೂ ತಮ್ಮ ಸ್ಲಾಟ್‌ಗಾಗಿ ನಿರಂತರವಾಗಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದ್ರೆ, ಪ್ರತಿಯೊಬ್ಬರೂ ನೋಂದಣಿಯಲ್ಲಿ ಸ್ಲಾಟ್ ಪಡೆಯಲು ಸಾಧ್ಯವಾಗ್ತಿಲ್ಲ. ಈ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತ ಹ್ಯಾಕರ್‌ʼಗಳು ಅಂತರ್ಜಾಲದಲ್ಲಿ ಜನರಿಗೆ ನೋಂದಣಿಯನ್ನ ಸುಲಭಗೊಳಿಸುವ ಹೆಸರಿನಲ್ಲಿ ನಕಲಿ ಮತ್ತು ಅಪಾಯಕಾರಿ ಎಪಿಕೆ ಫೈಲ್‌ಗಳನ್ನ ಸ್ಥಾಪಿಸಲು ಕೇಳುತ್ತಿದ್ದಾರೆ. ಹಾಗಾಗಿ ನಕಲಿ ಕೋವಿನ್ ಲಸಿಕೆ ನೋಂದಣಿ ಅಪ್ಲಿಕೇಶನ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಹೊಸ ಸಲಹೆಯನ್ನ ನೀಡಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಹಾಗಾದ್ರೆ, ಆ ಸಲಹೆಯೇನು?

ವಾಸ್ತವವಾಗಿ, ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಜನರಿಗೆ ನಕಲಿ ಕೋವಿನ್ ಲಸಿಕೆ ನೋಂದಣಿ ಅಪ್ಲಿಕೇಶನ್‌ನ ಬಗ್ಗೆ ಎಚ್ಚರಿಕೆ ನೀಡಲು ಸಲಹೆಯನ್ನ ನೀಡಿದೆ. ಸೈಬರ್ ಕ್ರಿಮಿನಲ್ಸ್ ನಕಲಿ ಲೋಗೋವನ್ನ ಬಳಸಿ ಎಸ್‌ಎಂಎಸ್‌ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದೆ. ಅವ್ರು 5 ಲಿಂಕ್‌ಗಳಲ್ಲಿ ಯಾವುದಾದ್ರು ಒಂದು ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಲು ಕೇಳುತ್ತಿದ್ದಾರೆ. ಇದ್ರಿಂದ ಜನರಿಗೆ ಲಸಿಕೆ ಸುಲಭವಾಗಿ ಸಿಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಆದ್ರೆ, ವಾಸ್ತವದಲ್ಲಿ ಈ ಎಪಿಕೆ ಫೈಲ್‌ಗಳಿಂದ ನಿಮ್ಮ ಗೌಪ್ಯತೆಗೆ ಬೆದರಿಕೆಯಿದೆ. ಹ್ಯಾಕರ್‌ಗಳು ಕಳುಹಿಸುವ ಈ ಎಸ್‌ಎಂಎಸ್ ಪದಗಳು ಕಾಲಕಾಲಕ್ಕೆ ಬದಲಾಗಬಹುದು. ಎಸ್‌ಎಂಎಸ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನ್‌ʼಗಳಲ್ಲಿ ಯಾವುದೇ ಐದು ಎಪಿಕೆ ಫೈಲ್‌ಗಳನ್ನ ಡೌನ್‌ಲೋಡ್ ಮಾಡಲು ಮತ್ತು ಎಪಿಕೆ ಸ್ಥಾಪಿಸಲು ಸೂಚಿಸುತ್ತಾರೆ. ಈ ಎಪಿಕೆ ಫೈಲ್ ತುಂಬಾ ಅಪಾಯಕಾರಿಯಾಗಿದ್ದು, ಒಮ್ಮೆ ಸ್ಥಾಪಿಸಿದ ನಂತರ, ಈ ಎಪಿಕೆ ಸ್ವಯಂಚಾಲಿತವಾಗಿ ಲಭ್ಯವಿರುತ್ತದೆ. ಇನ್ನು ಈ ಅಪ್ಲಿಕೇಶನ್‌ಗಳು ಅಗತ್ಯವಿಲ್ಲದ ಅನುಮತಿಗಳನ್ನ ಪಡೆಯುತ್ತವೆ, ಇದರಿಂದ ಅದು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನ ಸುಲಭವಾಗಿ ಕದಿಯಬೋದು. ಆದ್ದರಿಂದ ಕೆಳಗೆ ನೀಡಲಾಗಿರುವ ಈ ಅಪ್ಲಿಕೇಶನ್‌ಗಳನ್ನು ನೀವು ಎಂದಿಗೂ ಡೌನ್‌ಲೋಡ್ ಮಾಡಿಕೊಳ್ಳಬೇಡಿ.

>> Covid-19.apk
>> Vaci__Regis.apk
>> MyVaccin_v2.apk
>> Cov-Regis.apk
>> Vccin-Apply.apk

ಭಾರತದಲ್ಲಿ, ವ್ಯಾಕ್ಸಿನೇಷನ್‌ನ ಸಂಪೂರ್ಣ ಪ್ರಕ್ರಿಯೆಯನ್ನ ಡಿಜಿಟಲ್ ರೀತಿಯಲ್ಲಿ ನಿರ್ವಹಿಸಲಾಗುತ್ತದೆ ಮತ್ತು ಎಲ್ಲಾ ನಾಗರಿಕರಿಗೆ ಕೋವಿನ್ ವೆಬ್‌ಸೈಟ್ (ಕೋವಿನ್.ಗೊವ್.ಇನ್) ಅಥವಾ ಆರೋಗ್ಯ ಸೆತು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಸಲಹೆ ನೀಡಲಾಗ್ತಿದೆ. ಇತರ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿ, ನೀವು ಲಸಿಕೆ ಲಭ್ಯತೆಯನ್ನ ಮಾತ್ರ ಟ್ರ್ಯಾಕ್ ಮಾಡಬಹುದಷ್ಟೇ ಲಸಿಕೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags