ವಿಜಯವಾಣಿ

503k Followers

ಓಕೆ ಅನ್ನದಿದ್ರೆ ಇರಲ್ಲ ವಾಟ್ಸ್‌ಆಯಪ್‌! ಮುಗಿದಿದೆ ಡೆಡ್‌ಲೈನ್‌, ಎಲ್ಲಾ ಆಪ್ಷನ್ಸ್‌ ಆಗಲಿವೆ ಮಾಯ

16 May 2021.10:07 AM

ನವದೆಹಲಿ: ಇನ್ನುಮುಂದೆ ವಾಟ್ಸ್‌ಆಯಪ್‌ ಬಳಕೆ ಮಾಡುವುದಿದ್ದರೆ ಕಡ್ಡಾಯವಾಗಿ ನೀವು ಎಲ್ಲದಕ್ಕೂ ಓಕೆ ಓಕೆ ಅನ್ನಲೇಬೇಕು. ಇಲ್ಲದಿದ್ದರೆ ಹಂತಹಂತವಾಗಿ ನೀವು ವಾಟ್ಸ್‌ಆಯಪ್‌ ಕಳೆದುಕೊಳ್ಳಲಿದ್ದೀರಿ, ಅದರ ಮೂಲಕ ನೀವು ಮೆಸೇಜ್‌, ವಿಡಿಯೋ ಯಾವುದೂ ಮಾಡಲು ಸಾಧ್ಯವಾಗುವುದಿಲ್ಲ.

ಕೆಲ ತಿಂಗಳ ಹಿಂದಷ್ಟೇ ವಾಟ್ಸ್‌ಆಯಪ್‌ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಇದನ್ನು ಅಕ್ಸೆಪ್ಟ್‌ ಮಾಡಿದರಷ್ಟೇ ಬಳಕೆ ಮಾಡಲು ಸಾಧ್ಯ ಎಂದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಷರತ್ತು ವಿಧಿಸುವ ಪ್ರಕ್ರಿಯೆಯನ್ನು ಮುಂದೂಡಿತ್ತು. ಇದೀಗ ಮತ್ತೆ ಷರತ್ತುಗಳನ್ನು ಅನ್ವಯ ಮಾಡುವಂತೆ ಹೇಳಿದೆ. ವಾಟ್ಸ್‌ಆಯಪ್‌ ಬೇಕೆಂದರೆ ನೂತನ ನೀತಿಯನ್ನು ಒಪ್ಪಿಕೊಳ್ಳಲೇಬೇಕಿದೆ.

ನಿಮಗೆ ಬರುವ ಸಂದೇಶವನ್ನು ಕಡೆಗಣಿಸಿ ವಾಟ್ಸ್‌ಆಯಪ್‌ ಉಪಯೋಗಿಸಲು ಸಾಧ್ಯವಿದೆ.

ಆದರೆ ಹಾಗೆ ಮಾಡುತ್ತಾ ಹೋದರೆ ನಿಮ್ಮ ಅರಿವಿಗೆ ಬಾರದೇ ಒಂದೊಂದೇ ಸೌಲಭ್ಯಗಳು ಕುಂಠಿತವಾಗುತ್ತಾ ಹೋಗಲಿದೆ. ವಾಟ್ಸ್‌ಆಯಪ್‌ ನೀಡಿರುವ ಡೆಡ್‌ಲೈನ್‌ ಶನಿವಾರ (ಮೇ 15) ಮುಗಿದಿದೆ. ಆದರೂ ವಾರದ ಮಟ್ಟಿಗೆ ಎಚ್ಚರಿಕೆ ಸಂದೇಶ ನಿಮಗೆ ಬರಲಿದೆ.

ಒಪ್ಪದಿದ್ದರೆ ಏನಾಗುತ್ತದೆ? ಒಂದು ವೇಳೆ ನೀವು ಒಪ್ಪದೇ ಅದರ ಬಳಕೆ ಮುಂದುವರಿಸಿದರೆ ಒಮ್ಮೆಲೇ ಖಾತೆ ಡಿಲೀಟ್‌ ಆಗುವುದಿಲ್ಲ. ಆದರೆ ಆರಂಭದಲ್ಲಿ ಧ್ವನಿ ಸಂದೇಶ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಲು ಅವಕಾಶ ಮುಂದುವರೆಯುತ್ತದೆ. ಆದರೆ ಮೆಸೇಜ್‌ ನೋಡಲು ಸಾಧ್ಯವಾಗುವುದಿಲ್ಲ. ಬದಲಾಗಿ ನೋಟಿಫಿಕೇಶನ್‌ಗಳ ಮೂಲಕ ಮಾತ್ರ ಸಂದೇಶಗಳು ಕಾಣಿಸಲಿವೆ. ನೋಟಿಫಿಕೇಶನ್‌ನಲ್ಲಿರುವ ಮಿಸ್‌ ಕಾಲ್‌ ಅಥವಾ ವಿಡಿಯೋ ಕಾಲ್‌ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಆದರೆ, ನೇರವಾಗಿ ಚಾಟ್‌ ಲೀಸ್ಟ್‌ ಬಳಸಲು ಸಾಧ್ಯವಾಗುವುದಿಲ್ಲ. ನಂತರ ಸಂದೇಶ ಕಳುಹಿಸುವ ಸೇವೆಯೂ ರದ್ದಾಗುತ್ತದೆ. ನಂತರ ಕಾಲ್‌ ಕೂಡ ಸಾಧ್ಯವಾಗುವುದಿಲ್ಲ.

ಒಂದು ವೇಳೆ ಈಗಾಗಲೇ ನೂತನ ನೀತಿಯನ್ನು ಒಪ್ಪಿದ್ದರೆ, ಗ್ರಾಹಕರಿಗೆ ನೂತನ ನೀತಿಯಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಒಂದು ವೇಳೆ ನಿಮಗೆ ಹೊಸ ನೀತಿ ಅಕ್ಸೆಪ್ಟ್‌ ಮಾಡಿ ಎಂದು ಪಾಪ್‌ ಅಪ್‌ ಮೆಸೇಜ್‌ ಬರಲಿಲ್ಲ ಎಂದಾದರೆ ನೀವು ಅದನ್ನು ಈಗಲೇ ಒಪ್ಪಿಕೊಂಡಿರುವಿರಿ ಎಂದು ಅರ್ಥ ಎಂದಿದೆ ವಾಟ್ಸ್‌ಆಯಪ್‌.

ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

ಯಾರೂ ಇಲ್ಲ ಬನ್ನಿ ಎಂದು ಕರೀತಿದ್ದ ಸೆಕ್ಯುರಿಟಿ ಗಾರ್ಡ್‌: ಬೆಂಗಳೂರಿನ ಆಭರಣಗಳು ನೇಪಾಳದಲ್ಲಿ ಪತ್ತೆ!

ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags