Kannada News Now

1.8M Followers

ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್!

16 May 2021.12:26 PM

ನವದೆಹಲಿ : ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಎದುರಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಡಿಎ ಹೆಚ್ಚಳ ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷಿತ ಡಿಎ ಹೆಚ್ಚಳವು ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ. ಜೆಸಿಎಂ ಸ್ಟಾಫ್ ಸೈಡ್ ನ ರಾಷ್ಟ್ರೀಯ ಮಂಡಳಿ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಜೂನ್ 2021 ರಲ್ಲಿ ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ಹೇಳಿತ್ತು. ಮುಂಬರುವ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದ ಶೇಕಡಾ 4 ರವರೆಗೆ ಇರಲಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಈ ವರ್ಷದ ಮಾರ್ಚ್ ನಲ್ಲಿ ಸಂಸತ್ತಿಗೆ ಜುಲೈ 1 ರಿಂದ ತುಟ್ಟಿಭತ್ಯೆಯ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವುದಾಗಿ ತಿಳಿಸಿದ್ದರು, ಬಾಕಿ ಇರುವ ಎಲ್ಲಾ ಮೂರು ಕಂತುಗಳನ್ನು ನೀಡಲಾಗುವುದು ಎಂದು ಹೇಳಿದ್ದರು.

ಆದರೆ ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಿಂದ ಬಾಕಿ ಇರುವ ಮೂರು ಡಿಎ ಕಂತುಗಳ ಬಗ್ಗೆ ಯಾವುದೇ ನವೀಕರಣವಿಲ್ಲ ಎಂದು ಹೇಳಲಾಗುತ್ತಿದ್ದು, ಕೇಂದ್ರ ಸರ್ಕಾರವು ಡಿಎ ಭತ್ಯೆಗಳನ್ನು ಹೆಚ್ಚಿಸದರೆ ಉದ್ಯೋಗಿಗಳು ತಮ್ಮ ವೇತನದಲ್ಲಿ ಭಾರಿ ಹೆಚ್ಚಳವನ್ನು ಪಡೆಯಲಿದ್ದಾರೆ. ಉದ್ಯೋಗಿಗಳ ಡಿಎ 17% ರಿಂದ 28% ಗೆ ಜಿಗಿಯುತ್ತದೆ, ಇದು ವೇತನದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags