Kannada News Now

1.8M Followers

ನಾಳೆಯಿಂದ ದೇಶಾದ್ಯಂತ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾ ಬ್ಲಾಕ್.?

25 May 2021.12:09 PM

ನವದೆಹಲಿ : ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೀಸಲಾದ ಹೊಸ ಕಾನೂನು ನಿಯಮಗಳನ್ನು ಅನುಸರಿಸುವ ಗಡುವು ಮೇ.25ರ ಇಂದು ಕೊನೆಗೊಳ್ಳುತ್ತಿದೆ. ಇದು ಭಾರತದಲ್ಲಿ ಟ್ವಿಟರ್, ಫೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮಗಳ ನಿಯಮಗಳನ್ನು ಒಪ್ಪಿಕೊಳ್ಳದೇ ಇದ್ದರೇ, ಕಾರ್ಯಾಚರಣೆ ನಿಲ್ಲಿಸುವಂತ ಸಾಧ್ಯತೆ ಕೂಡ ಇದೆ.

BIG NEWS : ಸಿಡಿಯಲ್ಲಿ ಇರೋದು ನಾನೇ : ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ 'ರಮೇಶ್ ಜಾರಕಿಹೊಳಿ' ಹೇಳಿಕೆ.!

ಉನ್ನತ ಅಧಿಕೃತ ಮೂಲಗಳ ಪ್ರಕಾರ, ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ ನಿಯಮಗಳು, 2021 ರ ಅಡಿಯಲ್ಲಿ ಫೆಬ್ರವರಿ 25 ರಂದು ಭಾರತದ ಗೆಜೆಟ್ ನಲ್ಲಿ ಸೂಚಿಸಲಾದ ನಿಯಮಗಳಿಗೆ ಬದ್ಧವಾಗಿರಬೇಕಾಗಿದ್ದ ಟ್ವಿಟರ್, ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಲ್ಲಿಯವರೆಗೆ ಆ ನಿಯಮಗಳನ್ನು ಅನುಸರಿಸಲು ವಿಫಲವಾಗಿವೆ.

BREAKING : ದೇಶದಲ್ಲಿ ಇಳಿಕೆ ಕಂಡ ಕೊರೋನಾ ವೈರಸ್ : ಒಂದೇ ದಿನದಲ್ಲಿ 1. 96 ಲಕ್ಷ ಪ್ರಕರಣ ದಾಖಲು

ಹೀಗಿದ್ದೂ ಸರ್ಕಾರದ ನಿಯಮಗಳು ಮೇ 26ರ ನಾಳೆಯಿಂದ ಜಾರಿಗೆ ಬರಲಿವೆ. ಈ ನಿಯಮವನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಪಾಲಿಸದಿದ್ದರೆ, ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಇತರೆ ಪ್ರಸಿದ್ಧ ಸೋಷಿಯಲ್ ಮೀಡಿಯಾಗಳನ್ನು ಕೇಂದ್ರ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಬ್ಲಾಕ್ ಮಾಡಲಿದೆ ಎಂದು ಉನ್ನತ ಅಧಿಕೃತ ಮೂಲಗಳು ತಿಳಿಸಿವೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸತ್ಯ ಒಪ್ಪಿಕೊಂಡ ಹಿಂದಿನ ರಹಸ್ಯವೇನು ಗೊತ್ತಾ.?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags