Kannada News Now

1.8M Followers

ಕನ್ನಡ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಕನ್ನಡ ಸೇರಿ 8 ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್

27 May 2021.12:08 PM

ನವದೆಹಲಿ : ಇದುವರೆಗೆ ಇಂಜಿನಿಯರಿಂಗ್ ಅಂದ್ರೆ ಸಾಕು, ಇಂಗ್ಲೀಷ್ ಸೇರಿದಂತೆ ಇತರ ಕೆಲ ಭಾಷೆಗಳಲ್ಲಿ ಮಾತ್ರವೇ ಕಲಿಕೆಗೆ ಅವಕಾಶ ಎನ್ನುವಂತೆ ಆಗಿತ್ತು. ಆದ್ರೇ ಇದೀಗ ಕನ್ನಡದಲ್ಲಿಯೂ ನೀವು ಇಂಜಿನಿಯರಿಂಗ್ ಕೋರ್ಸ್, ಪರೀಕ್ಷೆ ಬರೆಯಬಹುದಾಗಿದೆ. ಈ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ.

ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದೇನು?

ಹೌದು.. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) 2020-21ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿಯೂ ಇಂಜಿನಿಯರಿಂಗ್ ಪದವಿ ವ್ಯಾಸಂಗಕ್ಕೆ ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಕನ್ನಡ ಭಾಷೆಯಲ್ಲಿಯೂ ಕಲಿಯೋದಕ್ಕೆ ಅವಕಾಶ ಸಿಕ್ಕಂತೆ ಆಗಿದೆ.

ಮಾನವೀಯತೆ ತೋರದ ಬಿಜೆಪಿ ಶಾಸಕ : ರಸ್ತೆಯಲ್ಲೇ ನರಳಿ ಪ್ರಾಣಬಿಟ್ಟ ಆರೋಗ್ಯಾಧಿಕಾರಿ.!

ಇನ್ನೂ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡೋದಕ್ಕೆ ಅಷ್ಟೇ ಅಲ್ಲದೇ, ಹಿಂದಿ, ತಮಿಳು, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿದಂತೆ 8 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ವ್ಯಾಸಂಗ ಮಾಡಲು ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡೋದಕ್ಕೆ ಬಯಸುವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.

'ನಿಮ್ಮ ಊರಿ'ನಲ್ಲಿ ಎಷ್ಟು 'ಕೊರೋನಾ ಸೋಂಕಿತ'ರಿದ್ದಾರೆ ಎಂದು ತಿಳಿಯಬೇಕೆ.? ಹಾಗಿದ್ದರೇ ಈ ಸುದ್ದಿ ಓದಿ.!



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags