Suvarna News

1.4M Followers

3322 ಅಪ್ರೆಂಟಿಸ್ ಹುದ್ದೆಗಳಿಗೆ ದಕ್ಷಿಣ ಮಧ್ಯೆ ರೈಲ್ವೆ ಅರ್ಜಿ ಆಹ್ವಾನ

07 Jun 2021.1:12 PM

ದಕ್ಷಿಣ ರೇಲ್ವೆಯ ರೇಲ್ವೆ ನೇಮಕಾತಿ ಸೆಲ್‌, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು iroams.com ನಲ್ಲಿ ಅಪ್ರೆಂಟಿಸ್ ಹುದ್ದೆಯ ಅರ್ಹತೆಯನ್ನು ಪರಿಶೀಲಿಸಬಹುದು. ಒಟ್ಟು 3,322 ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನ ಆಹ್ವಾನಿಸಲಾಗಿದೆ.

ಕ್ಯಾರೇಜ್ ವರ್ಕ್ಸ್, ಪೆರಂಬೂರ್, ಸೆಂಟ್ರಲ್ ವರ್ಕ್‌ಶಾಪ್, ಗೋಲ್ಡನ್ ರಾಕ್ ಮತ್ತು ಸಿಗ್ನಲ್ ಹಾಗೂ ದೂರಸಂಪರ್ಕ ಕಾರ್ಯಾಗಾರ, ಪೆಡನೂರ್‌ಗಾಗಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಸ್ವೀಕರಿಸುವುದಾಗಿ ದಕ್ಷಿಣ ರೇಲ್ವೆ ತಿಳಿಸಿದೆ. ದಕ್ಷಿಣ ರೇಲ್ವೆಯ ಅಧಿಕೃತ ವೆಬ್‌ಸೈಟ್ https://sr.indianrailways.gov.in ನಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಜೂನ್‌ ೩೦ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆ(10+2 ಸಿಸ್ಟಮ್‌ನಡಿ)ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಒಟ್ಟು 50 ಶೇಕಡಾ ಅಂಕಗಳೊಂದಿಗೆ ತತ್ಸಮಾನ ಅರ್ಹತೆಯನ್ನ ಪಡೆದಿರಬೇಕು. ಅಲ್ಲದೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಐಟಿಐ ಕೋರ್ಸ್‌ ಪೂರೈಸಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಅನುಮೋದಿಸಿದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಹಿವಾಟಿನಲ್ಲಿ ಐಟಿಐ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಉನ್ನತ ಶಿಕ್ಷಣ ಅರ್ಹತೆ ಹೊಂದಿರುವ ಅಭ್ಯರ್ಥಿಯು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಪ್ರತಿಷ್ಠಿತ ಟೆಸ್ಲಾ ಕಂಪನಿಯಲ್ಲಿ ಕೆಲಸಬೇಕಾ? ಭಾರತದಲ್ಲಿ ನೇಮಕಾತಿ ಆರಂಭ!

ಅಭ್ಯರ್ಥಿಗಳು ಕನಿಷ್ಟ 15 ರಿಂದ ಗರಿಷ್ಟ 24 ವರ್ಷ ವಯಸ್ಸಿನ ಮಿತಿಯಲ್ಲಿರಬೇಕು. ಆದಾಗ್ಯೂ, ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ಸರ್ಕಾರದ ಮಾನದಂಡಗಳ ಪ್ರಕಾರ ವಯಸ್ಸಿನ ವಿನಾಯ್ತಿ ಪಡೆಯಲಿದ್ದಾರೆ.

ದಕ್ಷಿಣ ರೈಲ್ವೆಯ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ / ಪ್ರದೇಶಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಮಿಳುನಾಡು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ, ಕೇರಳ, ಅಂಡಮಾನ ನಿಕೋಬಾರ್‌ ಹಾಗೂ ಲಕ್ಷದ್ವೀಪ ಪ್ರದೇಶಗಳು, ಆಂಧ್ರಪ್ರದೇಶದ ನೆಲ್ಲೋರ್‌ ಹಾಗೂ ಚಿತ್ತೂರ್‌ ಜಿಲ್ಲೆಗಳು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಈ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ತಿರುವನಂತಪುರ, ಪಾಲ್ಘಾಟ್, ಸೇಲಂ, ಪೆರಂಬೂರ್ ಮತ್ತು ಚೆನ್ನೈ ವಿಭಾಗಗಳಲ್ಲಿನ ರೈಲ್ವೆ ಆಸ್ಪತ್ರೆ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜಿಒಸಿ ಕಾರ್ಯಾಗಾರದ ತಿರುಚ್ಚಿ ಮತ್ತು ಮಧುರೈ ವಿಭಾಗಗಳಲ್ಲಿಯೂ ಅಭ್ಯರ್ಥಿಗಳನ್ನು ನೇಮಿಸಲಾಗುವುದು. ಕ್ಯಾರೇಜ್ ವರ್ಕ್ಸ್, ಪೆರಂಬೂರ್- 936 ಹುದ್ದೆಗಳು, ಗೋಲ್ಡನ್‌ರಾಕ್ ಕಾರ್ಯಾಗಾರ - 756 ಹುದ್ದೆಗಳು, ಸಿಗ್ನಲ್ ಮತ್ತು ಟೆಲಿಕಾಂ ಕಾರ್ಯಾಗಾರ, ಪೊಡನೂರ್ - 1686 ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುವುದು.

ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಭಾರತದ ನಿರುದ್ಯೋಗ ಸಮಸ್ಯೆ; 1 ಕೋಟಿ ಮಂದಿಯ ಉದ್ಯೋಗ ನಷ್ಟ!

ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದಿರುವ ಸರಾಸರಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಆಗಿರಲಿದೆ. ಇನ್ನು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಸಿಮೆಂಟ್ ಕಾರ್ಪೊರೇಷನ್‌ನಿಂದಲೂ ಅರ್ಜಿ ಆಹ್ವಾನ
ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐ ಲಿಮಿಟೆಡ್) ನಿಶ್ಚಿತ ಅವಧಿಯ ಗುತ್ತಿಗೆ ಆಧಾರದ ಮೇಲೆ ಎಂಜಿನಿಯರ್ ಮತ್ತು ಅಧಿಕಾರಿ ಹುದ್ದೆಗೆ ಅರ್ಹ ಮತ್ತು ಅನುಭವಿ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಸಿಸಿಐ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಸದ್ಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಜೂನ್ ೩೦ ಕೊನೆಯ ದಿನಾಂಕವಾಗಿದೆ. 29 ಹುದ್ದೆಗಳು ಎಂಜಿನಿಯರ್ ಮತ್ತು 17 ಅಧಿಕಾರಿ ಹುದ್ದೆಗಳು ಸೇರಿ ಒಟ್ಟು46 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಗೆ ಚಾಲನೆ ನೀಡಲಾಗಿದೆ.

ಈ ದೇಶದಲ್ಲಿ 'ಮಾನಸಿಕ ಆರೋಗ್ಯ ರಜೆ' ಸಿಗಲಿದೆ ಗೊತ್ತಾ?

ಒಪ್ಪಂದದ ಆರಂಭಿಕ ಅಧಿಕಾರಾವಧಿಯು ಒಂದು ವರ್ಷವಾಗಿದ್ದು, ಅಧಿಕಾರಸ್ಥರ ಕಾರ್ಯವೈಖರಿ ಆಧಾರದ ಮೇಲೆ ಮತ್ತೆ ಅದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಟ ವಯೋಮಿತಿ, ಜೂನ್ ೩೦ ರೊಳಗೆ ೩೫ ವರ್ಷದವರಾಗಿರಬೇಕು. ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಬಳಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags