Kannada News Now

1.8M Followers

'ಆರೋಗ್ಯ ಇಲಾಖೆ'ಯ 'ವೈದ್ಯರು, ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 6 ತಿಂಗಳ 'ಕೋವಿಡ್ ರಿಸ್ಕ್ ಭತ್ಯೆ' ಘೋಷಣೆ

28 May 2021.05:53 AM

ಬೆಂಗಳೂರು : ಈಗಾಗಲೇ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಮರ್ಪಕ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವ ಸಿಬ್ಬಂದಿಗಳಿಗೆ ಕೋವಿಡ್ ರಿಸ್ಕ್ ಭತ್ಯೆ ನೀಡಿತ್ತು. ಆದ್ರೇ.. ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ನಿಲ್ಲಿಸಿತ್ತು. ಇದೀಗ ಇಂತಹ ಕೋವಿಡ್ ರಿಸ್ಕ್ ಭತ್ಯೆಯನ್ನು ರಾಜ್ಯ ಸರ್ಕಾರ ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವವರಿಗೆ ಘೋಷಣೆ ಮಾಡಿದೆ. ಈ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ.

'ನಿಮ್ಮ ಊರಿ'ನಲ್ಲಿ ಎಷ್ಟು 'ಕೊರೋನಾ ಸೋಂಕಿತ'ರಿದ್ದಾರೆ ಎಂದು ತಿಳಿಯಬೇಕೆ.? ಹಾಗಿದ್ದರೇ ಈ ಸುದ್ದಿ ಓದಿ.!

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಯ.ಶಿವಶಂಕರ್ ನಡವಳಿ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್ ರಿಸ್ಕ್ ಅಲೋಯೆನ್ಸ್ ನೀಡಲು ಈಗಾಗಲೇ ಅನುಮತಿಸಲಾದ ಹುದ್ದೆಗಳಿಗೆ ಮಾತ್ರ ಅನ್ವಯವಾಗುವಂತೆ 6 ತಿಂಗಳ ಅವಧಿಗೆ ( ದಿನಾಂಕ 01-04-2021 ರಿಂದ ದಿನಾಂಕ 30-09-2021ರವರೆಗೆ) ಈ ಹಿಂದೆ ನಿಗದಿಪಡಿಸಲಾಗಿದ್ದ ಕೋವಿಡ್ ರಿಸ್ಕ್ ಭತ್ಯೆ ನೀಡಲು ಹಾಗೂ ಸ್ಟಾಫ್ ನರ್ಸ್ ಗಳಿಗೆ ಸಂಬಂಧಿಸಿದಂತೆ ಈ ಆದೇಶ ಜಾರಿಯಾದ ದಿನಾಂಕದಿಂದ ದಿನಾಂಕ 30-09-2021ರವರೆಗೆ ರೂ.8,000ಗಳ ಕೋವಿಡ್ ರಿಸ್ಕ್ ಭತ್ಯೆ ನೀಡಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಮುಂದುವರೆದು ಹೊರಗುತ್ತಿಗೆ ನೌಕರರ ವೇತನ, ರಿಸ್ಕ್ ಅಲೋಯೆನ್ಸ್ ಗೆ ಸಂಬಂಧಿಸಿದಂತೆ ಮಾರ್ಚ್ 2021ರಿಂದ ಸೆಪ್ಟೆಂಬರ್ 2021ರವರೆಗಿನ ಅವಧಿಗೆ ಈಗಾಗಲೇ ರೂ.82.33 ಕೋಟಿ ಅನುದಾನ ಒದಗಿಸಿದ್ದು, ಹೊಸದಾಗಿ ನೇಮಕವಾದವರ ವೇತನಕ್ಕೆ ಸಂಬಂಧಿಸಿದಂತೆ ಮೊದಲಿಗೆ ಲಭ್ಯ ಅನುದಾನದಲ್ಲಿ ವೆಚ್ಚ ಭರಿಸಿ, ಸೂಕ್ತ ಲೆಕ್ಕಾಚಾರದೊಂದಿಗೆ ಪೂರಕ ಅಂದಾಜು-1ರ ಸಮಯದಲ್ಲಿ ಹೆಚ್ಚುವರಿ ಅನುದಾನಕ್ಕಾಗಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳು ಇವರ ಮೂಲಕ ಕ್ರೂಢೀಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.

'ನಟ ಉಪೇಂದ್ರ' ರೈತರ ಜಮೀನು ಕಿತ್ತುಕೊಂಡಿದ್ದಾರಾ.? ಇದಕ್ಕೆ 'ರಿಯಲ್ ಸ್ಟಾರ್' ಕೊಟ್ಟ ಖಡಕ್ ಉತ್ತರ ಏನ್ ಗೊತ್ತಾ.?

ಅದೇ ರೀತಿಯಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞರು, ವೈದ್ಯರು, ಸಿಬ್ಬಂದಿಗಳಿಗೆ ದಿನಾಂಕ 21-09-2021ರಲ್ಲಿ ಮಂಜೂರು ಮಾಡಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನು ದಿನಾಂಕ 01-04-2021ರಿಂದ ಮುಂದಿನ 6 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲು ಹಾಗೂ ಸ್ಟಾಫ್ ನರ್ಸ್ ಗಳಿಗೆ ಸಂಬಂಧಿಸಿದಂತೆ ಮಾತ್ರ ರೂ.8,000ಗಳ ರಿಸ್ಕ್ ಅಲೋಯೆನ್ಸ್ ಅನ್ನು ಈ ಆದೇಶ ಜಾರಿಯಾದ ದಿನಾಂಕದಿಂದ ನಿಡಲು ಅನುಮತಿ ನೀಡಿ ಆದೇಶಿಸಲಾಗಿದೆ.

BIG NEWS : ಸಚಿವ ವಿ.ಸೋಮಣ್ಣ ಬೆಂಬಲಿಗನಿಂದಲೇ 'ಕೊರೋನಾ ವಾರಿಯರ್ಸ್' ಮೇಲೆ ಹಲ್ಲೆ

ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ವೈದ್ಯರು, ತಜ್ಞರಿಗೆ ದಿನಾಂಕ 01-04-2021ರಿಂದ ದಿನಾಂಕ 31-09-2021ರವರೆಗೆ 6 ತಿಂಗಳವರೆಗೆ ರೂ.10,000, ಶುಶ್ರೂಷಕಿಯರಿಗೆ ರೂ.8,000, ಪ್ರಯೋಗ ಶಾಲಾ ತಂತ್ರಜ್ಞರಿಗೆ ರೂ.5,000 ಮತ್ತು ಪಿಪಿಇ ಕಿಟ್ ಧರಿಸದೇ ಕೋವಿಡ್ ಆಸ್ಪತ್ರೆಗಳ ಹೊರಗಡೆ ಕಾರ್ಯನಿರ್ವಹಿಸುವ ಗ್ರೂಪ್-ಡಿ ನೌಕರರಿಗೆ ರೂ.3,000 ಕೋವಿಡ್ ರಿಸ್ಕ್ ಪ್ರೋತ್ಸಾಹಧನ ಸಿಗಲಿದೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags