Kannada News Now

1.8M Followers

ನೀವು 'ಕೊರೋನಾ ಸೋಂಕಿ'ನಿಂದ ಗುಣಮುಖರಾಗಿದ್ದೀರಾ.? ಹಾಗಿದ್ದರೇ 'ಕೊರೋನಾ ಗೆದ್ದವರು' ಪಾಲಿಸಬೇಕಾದ ನಿಯಮಗಳೇನು ಗೊತ್ತಾ.?

29 May 2021.06:00 AM

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟದ ನಡುವೆಯೂ, ಕೊರೋನಾ ಸೋಂಕಿತರಾದಂತ ಅನೇಕರು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಹೀಗೆ ಗುಣಮುಖರಾದಂತವರು, ಕೊರೋನಾ ಗೆದ್ದು ಬಂದವರು, ಕೊರೋನಾ ಗೆದ್ದ ನಂತ್ರವೂ ಕೆಲ ನಿಯಮಗಳ ಪಾಲನೆ, ಕೆಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಕ್ರಮಗಳನ್ನು ಅನುಸರಿಸಬೇಕು ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಹಾಗಿದ್ದರೇ.. ಕೊರೋನಾ ಗೆದ್ದವರು ಪಾಲಿಸಬೇಕಾದ ನಿಯಮಗಳು ಏನ್ ಅಂತ ಮುಂದೆ ಓದಿ..

BREAKING : ಇಳಿಕೆ ಕಂಡ ಕೊರೋನಾ ಪ್ರಕರಣ : ಭಾರತದಲ್ಲಿ 1.86 ಲಕ್ಷ ಹೊಸ ಕೋವಿಡ್-19 ಪ್ರಕರಣ ದಾಖಲು

ಹೌದು.. ಕೊರೋನಾ ಗೆದ್ದವರು, ಸೋಂಕಿನಿಂದ ಆಚೆ ಬಂದವರು ಎಚ್ಚರಿಕೆ ತಪ್ಪುವ ಹಾಗಿಲ್ಲ.

ಚೇತರಿಸಿಕೊಂಡರೂ ಲಕ್ಷಣಗಳ ಬಗ್ಗೆ ಲಕ್ಷ್ಯ ವಹಿಸಲೇ ಬೇಕಾಗಿದೆ. ಸೋಂಕಿನಿಂದ ಗುಣವಾದ ನಂತರ ಎಚ್ಚರಿಕೆ ಯಾವ ರೀತಿ ಇರಬೇಕು.? ಲಕ್ಷಣಗಳು ಹಾಗೇ ಉಳಿದರೆ ಸೋಂಕು ಇನ್ನೂ ಇದೆ ಎಂದು ಅರ್ಥವೇ.? ಚೇತರಿಕೆಯಾದ ಮೇಲೆ ದೈಹಿಕ ಚಟುವಟಿಕೆಗಳಿಗೆ ಯಾವಾಗ ಮರಳಬೇಕು.? ಕೊರೋನಾ ಚೇತರಿಕೆಯ ಬಳಿಕವೂ ಪಾಲಿಸಬೇಕಾದ ಅಭ್ಯಾಸಗಳೇನು.? ಚೇತರಿಕೆಯ ನಂತ್ರ ದೈಹಿಕ, ಮಾನಸಿಕ ಸದೃಢತೆಗಾಗಿ ಸೂತ್ರಗಳೇನು.? ಎನ್ನುವುದು ಬಹುಮುಖ್ಯ ಪ್ರಶ್ನೆಗಳಾಗಿವೆ.

ಈ ಬಗ್ಗೆ ಉತ್ತರಿಸಿರುವಂತ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರು, ಕೊರೋನಾ ಸೋಂಕಿನಿಂದ ಗುಣಮುಖರಾದ ತಕ್ಷಣವೇ.. ದೇಹದಿಂದ ಖಾಯಿಲೆ ವಾಸಿಯಾಯಿತು. ಚೇತರಿಸಿಕೊಂಡೆ ಎಂದು ಭಾವಿಸಬಾರದು. ಕೊರೋನಾದಿಂದ ಗುಣಮುಖರಾದ ನಂತ್ರವೂ, ಸುಸ್ತು, ಆಯಾಸದಂತ ಬಳಲಿಕೆ ದೇಹದಲ್ಲಿ ಇರುತ್ತವೆ. ಇದಕ್ಕಾಗಿ ನಿರಂತರವಾಗಿ ಕೆಲ ದಿನಗಳವರೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಹ್ಯುಮ್ಯುನಿಟಿ ಬೂಸ್ಟ್ ಮಾಡಬೇಕು ಎಂದಿದ್ದಾರೆ.

ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಲು ಇದನ್ನು ಸೇವಿಸಿ

ಇನ್ನೂ ಮುಂದುವರೆದು ಕೊರೋನಾ ಸೋಂಕಿತರಾಗಿ ಗುಣಮುಖರಾದ ನಂತ್ರ, ಕೆಲವೊಬ್ಬರಿಗೆ ಜೀರ್ಣ ಕ್ರಿಯೆ ಕೂಡ ಸಮಸ್ಯೆ ಆಗಬಹುದು. ಅಲ್ಲದೇ ಶೀತದಂತ ಆಹಾರವನ್ನು ಕಡಿಮೆ ಮಾಡಬೇಕಾಗಿದೆ. ಅಂತಹ ಆಹಾರವನ್ನು ಸೇವಿಸಬಾರದು. ಹುರುಳಿಕಾಳು, ಕಡಲೇಬೇಳೆಯಂತ ಧಾನ್ಯಗಳನ್ನು ಆಹಾರ ಪದ್ದತಿಯಲ್ಲಿ ರೂಢಿಸಿಕೊಳ್ಳಬೇಕು. ಇದರ ಜೊತೆಗೆ ಅಮೃತ ಬಳ್ಳಿಯನ್ನು ಗ್ರೀನ್ ಟೀ ರೀತಿಯಲ್ಲಿ ಮಾಡಿಕೊಂಡು ಬಳಸಬೇಕು. ನೆಲ್ಲಿಕಾಯಿ, ಇಪ್ಪಲಿ ಬಳ್ಳಿಯಂತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ಮನೆಯ ಆಹಾರ ಪದ್ದತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಆಹಾರ ಪದ್ಧತಿಗಳನ್ನು ಬಳಸಬೇಕು. ಪೆಪ್ಪರ್, ಹರಿಶಿಣದಂತ ವಸ್ತುಗಳನ್ನು ಬಳಕೆ ಮಾಡೋದನ್ನು ರೂಢಿಸಿಕೊಳ್ಳಬೇಕು ಎಂದರು. ಇದಷ್ಟೇ ಅಲ್ಲದೇ ಮೂರು ದೊಡ್ಡ ರುದ್ರಾಕ್ಷಿಗಳನ್ನು ಬೆಳಿಗ್ಗೆ ನೀರಿನಲ್ಲಿ ನೆನೆಸಿಟ್ಟು, ರಾತ್ರಿ ಮಲಗುವಾಗ ರುದ್ರಾಕ್ಷಿ ನೆನೆಸಿದ ನೀರನ್ನು ಕುಡಿಯೋದ್ರಿಂದಲೂ ಮಾನಸಿಕ ಒತ್ತಯಡವನ್ನು ಕಡಿಮೆ ಮಾಡಬಹುದಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಕುಸ್ತಿಪಟು ಸುಶೀಲ್ ಕುಮಾರ್, ಸಹಚರರು ದೊಣ್ಣೆಯಿಂದ ಹೊಡೆಯುವ ದೃಶ್ಯ ವೈರಲ್!

ಕೊರೋನಾ ಸೋಂಕಿನ ನಂತ್ರ ಸಮಸ್ಯೆ ಉಂಟಾಗೋದು ಶ್ವಾಸಕೋಶದ ಮೇಲೆ. ಹಾಗಾದ್ರೇ.. ಶ್ವಾಸಕೋಶದ ಸಮಸ್ಯೆ ಬಗೆ ಹರಿಸಿಕೊಳ್ಳೋದು ಹೇಗೆ.? ಎನ್ನುವ ಬಗ್ಗೆ ಶ್ವಾಸಕೋಶ ತಜ್ಞ ಡಾ.ಚೇತನ್ ಕುಮಾರ್ ಅವರು, ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿನ ಲಕ್ಷಣಗಳಿಗೆ ಒಳಗಾದವರು, ಕೂಡಲೇ ಸೋಂಕಿನ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಹುತೇಕ ಸೋಂಕಿತರು ಇದರ ಬಗ್ಗೆ ಕಾಳಜಿ ವಹಿಸದೇ ಅಲಕ್ಷ್ಯ ವಹಿಸೋದ್ರಿಂದಾಗಿಯೇ ಶ್ವಾಸಕೋಶದ ಸಮಸ್ಯೆ ಉಂಟಾಗಿ, ಉಸಿರಾಟದ ಸಮಸ್ಯೆ ಎದುರಿಸಿ, ತಡವಾಗಿ ಆಸ್ಪತ್ರೆಗೆ ಸೇರಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದಾಗಲೇ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕಾರಣದಿಂದಾಗಿ ಕೊರೋನಾ ಸೋಂಕಿತರಾದವರು, ಕೂಡಲೇ ಯಾವುದೇ ಅಸಡ್ಡೆ, ನಿರ್ಲಕ್ಷ್ಯ ತೋರದೇ ಕೂಡಲೇ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಬೇಕು. ಸೋಂಕಿತರಾದಂತವರಿಗೆ ಕೂಡಲೇ ರಕ್ತ ಹೆಪ್ಪುಗಟ್ಟುವಂತ ನಿವಾರಿಸಲು ಚಿಕಿತ್ಸೆ ನೀಡಬೇಕು. ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರೋರಿಗೆ ಅದರ ಚಿಕಿತ್ಸೆಗಾಗಿ ಔಷಧಿ ಕೂಡಲೇ ಆರಂಭಿಸಬೇಕು. ಹೀಗಾಗಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು, ಶ್ವಾಸಕೋಶದ ಸಮಸ್ಯೆಗೆ ಮೊದಲು ಚಿಕಿತ್ಸೆ ಪಡೆಯಬೇಕು ಎಂದರು.

ಭರತ್ಪುರ ಕ್ಷೇತ್ರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ

ಈ ಎಲ್ಲಾ ಸಮಸ್ಯೆಗಳಿದ್ದಾಗ, ಕೊರೋನಾ ಸೋಂಕಿತರಾಗಿ ಗುಣಮುಖರಾದವರು, ಕೊರೋನಾದಿಂದ ಗುಣಮುಖರಾದ ನಂತ್ರವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಆಹಾರ ಪದ್ದತಿಗಳನ್ನು ರೂಢಿಸಿಕೊಳ್ಳಬೇಕು. ಇದಲ್ಲದೇ ಯೋಗದಿಂದಲೂ ಕೊರೋನಾ ಸೋಂಕನ್ನು ದೂರ ಮಾಡಬಹುದಾಗಿದೆ. ಔಷಧೋಪಚಾರ ಮುಂದುವರೆಸಬೇಕು ಎಂಬುದಾಗಿ ತಜ್ಞ ವೈದ್ಯರ ಮಾತಾಗಿದೆ. ಆ ಬಗ್ಗೆ ಗಮನ ಹರಿಸಿ, ಕೊರೋನಾ ಸೋಂಕಿಗೆ ಗುಡ್ ಬೈ ಹೇಳಿ.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags