Kannada News Now

1.8M Followers

BIG NEWS : DRDO 2-ಡಿಜಿ ಕೊರೋನಾ ಸಂಜೀವಿನಿಗೆ ರೇಟ್ ಫಿಕ್ಸ್ : ರೂ.990ಕ್ಕೆ ಕೋವಿಡ್ ಔಷಧಿ ಲಭ್ಯ

28 May 2021.4:03 PM

ಹೈದರಾಬಾದ್ : ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿನ ಲಸಿಕಾ ಅಭಿಯಾನ ನಡೆಯುತ್ತಿದೆ. ಸ್ವದೇಶಿಯ ಕೋವಿಶೀಲ್ಡ್, ಕೋವ್ಯಾಕ್ಸಿನ್ ನೀಡಲಾಗುತ್ತಿದೆ. ಇದರೊಂದಿಗೆ ರಷ್ಯಾದ ಸ್ಪುಟ್ನಿಕ್-ವಿ ಕೂಡ ಶುರುವಾಗಿದೆ. ಇದರ ಮಧ್ಯೆ ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿದಂತ 2-ಡಿಜಿ ಕೋವಿಡ್ ಔಷಧಿ ಕೂಡ ಈಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇಂತಹ ಕೊರೋನಾ ಲಸಿಕೆಗೆ ದರ ಕೂಡ ಫಿಕ್ಸ್ ಮಾಡಲಾಗಿದೆ.

'SSLC, ದ್ವಿತೀಯ ಪಿಯುಸಿ ವಿದ್ಯಾರ್ಥಿ'ಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಿ - ವಾಟಾಳ್ ನಾಗರಾಜ್ ಒತ್ತಾಯ

ಈ ಕುರಿತಂತೆ ಹೈದರಾಬಾದ್ ಮೂಲಕ ಡಾ.ರೆಡ್ಡಿಸ್ ಲ್ಯಾಬ್ ಡಿ ಆರ್ ಡಿ ಓ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವಂತ 2 ಡಿಜಿ ಆಂಟಿ ಕೋವಿಡ್ ಔಷಧಿಯನ್ನು ಕೇಂದ್ರ ರಕ್ಷಣಾ ಸಚಿವರು ಇತ್ತೀಚೆಗೆ ಬಿಡುಗಡೆ ಮಾಡಿದ್ದರು.

ಆದ್ರೇ ಇದಕ್ಕೆ ಬೆಲೆಯನ್ನು ನಿಗದಿ ಪಡಿಸಿರಲಿಲ್ಲ.

ನೀವು 'ಕೊರೋನಾ ಸೋಂಕಿ'ನಿಂದ ಗುಣಮುಖರಾಗಿದ್ದೀರಾ.? ಹಾಗಿದ್ದರೇ 'ಕೊರೋನಾ ಗೆದ್ದವರು' ಪಾಲಿಸಬೇಕಾದ ನಿಯಮಗಳೇನು ಗೊತ್ತಾ.?

ಇದೀಗ 2 ಡಿಜಿ ಆಂಟಿ ಕೋವಿಡ್ ಔಷಧಿಯ ಪ್ರತಿ ಪ್ಯಾಕೇಟ್ ಗೆ ಬೆಲೆಯನ್ನು ನಿಗದಿ ಪಡಿಸಲಾಗಿದೆ. ರೂ.990 ಪ್ರತಿ ಪ್ಯಾಕೇಟ್ ಗೆ ದರ ನಿಗದಿ ಪಡಿಸಿದೆ. ಇದಲ್ಲದೇ ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಿಯಾಯಿತಿ ದರದಲ್ಲಿ ಔಷಧಿಯನ್ನು ನೀಡುವುದಾಗಿಯೂ ಡಾ.ರೆಡ್ಡಿಸ್ ಲ್ಯಾಬ್ ತಿಳಿಸಿದೆ.

'ಖಾಸಗಿ ಆಸ್ಪತ್ರೆ'ಗಳು ಹೆಚ್ಚಿನ ದರಕ್ಕೆ 'ಕೊರೋನಾ ಲಸಿಕೆ' ಮಾರಾಟ ಮಾಡಿದ್ರೇ ಕಾನೂನು ಕ್ರಮ - ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ

ಅಂದಹಾಗೇ ಮೇ.26ರಂದು ಡಿ ಆರ್ ಡಿ ಓ ಅಧಿಕಾರಿಗಳು 2-ಡಿಜಿ ಔಷಧದ 10 ಸಾವಿರ ಸ್ಯಾಚೆಟ್ ಗಳ 2ನೇ ಬ್ಯಾಚ್ ಅನ್ನು ಮೇ.27ರ ಗುರುವಾರ ಡಾ.ರೆಡ್ಡಿ ಲ್ಯಾಬ್ ನಿಂದ ನೀಡಲಾಗುವುದು ಎಂದು ಹೇಳಿದ್ದರು. ಇಂತಹ ಔಷಧಿ ಈಗ ಕಮರ್ಷಿಯಲ್ ಆಗಿಯೂ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags