Kannada News Now

1.8M Followers

'ಸಾರಿಗೆ ಬಸ್ ಪ್ರಯಾಣಿಕ'ರೇ ಗಮನಿಸಿ : ಇನ್ಮುಂದೆ ಈ 'ಸಹಾಯವಾಣಿ'ಗೆ ಕರೆ ಮಾಡಿ, ಸಮಸ್ಯೆಗಳಿಗೆ ಪರಿಹಾರ ಪಡೆಯಿರಿ

31 May 2021.11:36 AM

ಬೆಂಗಳೂರು : ಕೋವಿಡ್ ಪಿಡುಗನ್ನು ತಡೆಯುವ ಪ್ರಯತ್ನದ ಅಂಗವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

BIG NEWS : ಜೂನ್.7ರ ನಂತ್ರವೂ ಒಂದುವಾರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ.?

ಹೌದು.. ಸಾರಿಗೆ ಇಲಾಖೆಯಿಂದ ಪ್ರತ್ಯೇಕವಾದಂತ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ. ಆ ಸಹಾಯವಾಣಿಯ 9449 86 3214 ಆಗಿದೆ.

ನೀವು ಈ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಸಮಸ್ಯೆ, ದೂರು, ಪರಿಹಾರವನ್ನು ಪಡೆಯಬಹುದಾಗಿದೆ. ಅಲ್ಲದೇ ಸಾರಿಗೆ ಆಯುಕ್ತರ ಕಛೇರಿ, 1ನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು- 27 ಇಲ್ಲಿಗೆ ಪತ್ರ ಬರೆದು ಕೂಡ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು, ಸಾರಿಗೆ ಸೇವೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಕುಂದುಕೊರತೆಗಳಿದ್ದಲ್ಲಿ ಸಾರ್ವಜನಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಿ ಉಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಕೊರೊನಾ ಎಫೆಕ್ಟ್:‌ ʼಜೂ.30ರʼವರೆಗೆ ಭಾರತದಿಂದ ಪ್ರಯಾಣಿಕರ ವಿಮಾನಗಳನ್ನ ನಿಷೇಧಿಸಿದ ʼUAEʼ

ಕೋವಿಡ್ ರೋಗದಿಂದ ತೊಂದರೆಗೆ ಒಳಗಾಗಿರುವ ಸೋಂಕಿತರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂಬುಲೆನ್ಸ್ ಸೇವೆಗೂ ಸರ್ಕಾರ ಸೂಕ್ತ ದರವನ್ನು ನಿಗದಿಪಡಿಸಿದ್ದು, ಆ ಪ್ರಕಾರವೇ ಅಂಬುಲೆನ್ಸ್ ಸೇವೆಗೆ ಅಂಬುಲೆನ್ಸ್ ವಾಹನಗಳ ಮಾಲೀಕರು ದರ ವಿಧಿ ಸಬೇಕಾಗಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಅಂಬುಲೆನ್ಸ್ ಸೇವೆಗೆ ಸಾರ್ವಜನಿಕರಿಂದ ಅಧಿಕ ಶುಲ್ಕ ಸಂಗ್ರಹಿಸುತ್ತಿರುವ ಆರೋಪಗಳು ವ್ಯಕ್ತವಾಗಿವೆ. ಇದು ಸರಿಯಲ್ಲ. ಒಂದು ವೇಳೆ ಸರ್ಕಾರದ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚು ಹಣವನ್ನು ಯಾರೇ ಸಂಗ್ರಹಿಸಿ ನಿಯಮ ಉಲ್ಲಂಘಿಸಿದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸವದಿ ಅವರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಐದು ದಿನಗಳಲ್ಲಿ ಕರ್ನಾಟಕ, ಕೇರಳ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags