AIN Live News

265k Followers

ಪಿಯು ವಿದ್ಯಾರ್ಥಿಗಳಿಗೆ ಸಿಗುತ್ತಾ ಎಕ್ಸಾಂ ರಿಲೀಫ್.?

31 May 2021.2:20 PM

ನವದೆಹಲಿ/ಬೆಂಗಳೂರು: ದೇಶದಲ್ಲಿ ಕೊವಿಡ್ ಸಮಸ್ಯೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಪಿಯು ಎಕ್ಸಾಂ ಬೇಕಾ ಬೇಡ್ವಾ ಎಂಬ ಬಗ್ಗೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಕೊವಿಡ್ ಸಂಕಷ್ಟದ ನಡುವೇ ದೇಶದಲ್ಲಿ ಈ ಶೈಕ್ಷಣಿಕ ವರ್ಷದ ಪರೀಕ್ಷೆ ನಡೆಸಬೇಕಾ ಬೇಡ್ವಾ ಎಂಬ ಗೊಂದಲಕ್ಕೆ ಸಿಲುಕಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಪರೀಕ್ಷೆ ಬಗ್ಗೆ ನಿಲುವು ಪ್ರಕಟಿಸುವುದಾಗಿ ಹೇಳಿರುವ ಕೇಂದ್ರ ಶಿಕ್ಷಣ ಇಲಾಖೆ, ಜೂನ್ 1ಕ್ಕೆ CBSC-12ನೇ ತರಗತಿ ಎಕ್ಸಾಂ ಭವಿಷ್ಯ ತಿಳಿಸಲಿದೆ. ಈಗಾಗಲೆ ಪಿಯು ಎಕ್ಸಾಂ ಬಗ್ಗೆ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಸಭೆ ನಡೆಸಿರುವ ಕೇಂದ್ರ ಶಿಕ್ಷಣ ಮಂತ್ರಿ ರಮೇಶ್ ಫೋಖ್ರಿಯಾಲ್ ನಿಶಾಂಕ್ ಅವರು, ಎಕ್ಸಾಂ ಗೊಂದಲಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ನೀಡಲಿದ್ದಾರೆ.

ಕಳೆದ ವಾರ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಜೊತೆಗೆ ಸಭೇ ಮಾಡಿರುವ ರಮೇಶ್ ಫೋಖ್ರಿಯಾಲ್, ಪಿಯು ಪರೀಕ್ಷೆಗಳ ಬಗ್ಗೆ ಎಲ್ಲಾ ರಾಜ್ಯಗಳಿಂದ ಸಲಹೆ ಪಡೆದಿದ್ದರು. ಕೇಂದ್ರದ ನಿರ್ಧಾರದ ಮೇಲೆ ರಾಜ್ಯ ಪಿಯು ಪಠ್ಯಕ್ರಮ ಪರೀಕ್ಷೆ ನಿರ್ಧಾರವಾಗುವ ಸಾಧ್ಯತೆ ಇದೆ. ಕೇಂದ್ರದ ನಿರ್ಧಾರ ವಿರೋಧಿಸಿ ರಾಜ್ಯದಲ್ಲಿ ಬೋರ್ಡ್ ಲೆವಲ್ ಪರೀಕ್ಷೆ ನಡೆಸೋದು ಕಷ್ಟಸಾಧ್ಯ ಅನ್ನೋದು ರಾಜ್ಯದ ಶಿಕ್ಷಣ ಚಿಂತಕರ ಅನಿಸಿಕೆ.

ಪರೀಕ್ಷೆ ರದ್ದುಪಡಿಸಲು ನ್ಯಾಯಾಧೀಶರಿಗೆ ಅರ್ಜಿ: ದೇಶದಲ್ಲಿ ಕೊವಿಡ್ ತೀವ್ರ ಸ್ವರೂಪ ಪಡೆದಿರುವ ಹಿನ್ನಲೆಯಲ್ಲಿ ಪಿಯು ಪರೀಕ್ಷೆ ರದ್ದು ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡವಂತೆ ಕೋರಿ, 300 ಸಿಬಿಎಸ್‌ಇ ವಿದ್ಯಾರ್ಥಿಗಳು ಸಹಿ ಹಾಕಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ಪರೀಕ್ಷೆಯನ್ನು ಭೌತಿಕವಾಗಿ ನಡೆಸುವ ಸಿಬಿಎಸ್‌ಇ ನಿರ್ಧಾರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು. ಮೇ. 31ಕ್ಕೆ ವಿಚಾರಣೆ ಮುಂದೂಡಿದ್ದ ಸುಪ್ರೀಂ ಕೋರ್ಟ್, ಇಂದು ಈ ಬಗ್ಗೆ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.

Share

Continue Reading

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags