Kannada News Now

1.8M Followers

BIG BREAKING NEWS : ರಾಜ್ಯದ ಪ್ರೌಢ ಶಾಲೆಗಳಿಗೆ 'ಶೈಕ್ಷಣಿಕ ಅವಧಿ' ಮರು ನಿಗಧೀಕರಣ : ಹೀಗಿದೆ 'ಪರಿಷ್ಕೃತ ವೇಳಾಪಟ್ಟಿ'

31 May 2021.4:14 PM

ಬೆಂಗಳೂರು : ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜೆ ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಕುರಿತು (ತಾತ್ಕಾಲಿಕ) ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಅಂತಹ 2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಕುರಿತ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ ಬಗ್ಗೆ ಮುಂದೆ ಓದಿ..

GOOD NEWS : ಇನ್ಮುಂದೆ ರಾಜ್ಯ 'ಹೈಕೋರ್ಟ್' ಕಲಾಪ 'ಯೂಟ್ಯೂಬ್'ನಲ್ಲಿ ನೇರಪ್ರಸಾರ : ಜನಸಾಮಾನ್ಯರು 'ಕಲಾಪ' ಮನೆಯಲ್ಲೇ ವೀಕ್ಷಿಸಬಹುದು

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜೆ ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು ( ತಾತ್ಕಾಲಿಕ) ವೇಳಾಪಟ್ಟಿಯನ್ನು ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರಕಟಿಸಲಾಗಿತ್ತು.

ಮುಂದಿನ ಐದು ದಿನಗಳಲ್ಲಿ ಕರ್ನಾಟಕ, ಕೇರಳ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಆದ್ರೇ ಕೋವಿಡ್-19ರ ಹಿನ್ನಲೆಯಲ್ಲಿ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದುವರೆದು ದಿನಾಂಕ 07-06-2021ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಿ, ಆದೇಶಿಸಲಾಗಿದೆ. ಈ ಅಂಶಗಳ ಹಿನ್ನಲೆಯಲ್ಲಿ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜಾ ಅವಧಿಯನ್ನು ಈ ಹಿಂದೆ ನಿಗದಿ ಪಡಿಸಿರುವುದನ್ನು ಮಾರ್ಪಡಿಸಿ, ಈ ಕೆಳಗಿನಂತೆ ಮರುನಿಗದಿ ಪಡಿಸಲಾಗಿದೆ.

2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ

  1. ಪ್ರಾಥಮಿಕ ಶಾಲೆಗಳಿಗೆ - ಯಾವುದೇ ಬದಲಾವಣೆ ಇರುವುದಿಲ್ಲ
  2. ಪ್ರೌಢ ಶಾಲೆಗಳಿಗೆ
  • ದಿನಾಂಕ 14-06-2021ರವರೆಗೆ ಬೇಸಿಗೆ ರಜೆಯನ್ನು ವಿಸ್ತರಿಸಿದೆ.
  • ರಜಾ ಅವಧಿಯಲ್ಲಿ 2020-21ನೇ ಸಾಲಿನ 10ನೇ ತರಗತಿ ( ಎಸ್ ಎಸ್ ಎಲ್ ಸಿ) ವಿದ್ಯಾರ್ಥಿಗಳೊಂದಿಗೆ ಸಂಬಂಧಿಸಿದ ಶಿಕ್ಷಕರು ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ಕ್ಷಿಷ್ಟಾಂಶಗಳನ್ನು ದೂರವಾಣಿ, ಆನ್ ಲೈನ್ ಮೂಲಕ ಪರಿಹರಿಸುವುದು ಹಾಗೂ ಮಾರ್ಗದರ್ಶನ ನೀಡುವುದು.
  • ದಿನಾಂಕ 15-06-2021 ರಿಂದ 2021-22ನೇ ಸಾಲಿನ ಪ್ರೌಢ ಶಾಲೆಗಳ 8, 9 ಮತ್ತು 10ನೇ ತರಗತಿಗಳ ಶೈಕ್ಷಣಿಕ ವರ್ಷ ಪ್ರಾರಂಭ.

ವಿಶೇಷ ಸೂಚನೆಗಳು

  • ಈ ಮೇಲ್ಕಂಡ ವೇಳಾಪಟ್ಟಿಯು ತಾತ್ಕಾಲಿಕವಾಗಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಪರೀಷ್ಕೃರಣೆಗೆ ಒಳಪಟ್ಟಿರುತ್ತದೆ.
  • ಕೋವಿಡ್-19ರ ಹಿನ್ನಲೆಯಲ್ಲಿ ಕಾಲಕಾಲಕ್ಕೆ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

ಈ ಮೇಲಿನಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಆದ್ರೇ.. ಕೋವಿಡ್ ಅಬ್ಬರ ನಡುವೆ ಈ ಶೈಕ್ಷಣಿಕ ವರ್ಷಾರಂಭದ ವೇಳಾಪಟ್ಟಿಯಂತೆ ಶಾಲಾ-ಕಾಲೇಜು ಆರಂಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags