Kannada News Now

1.8M Followers

BIG BREAKING NEWS : ಜೂನ್.7ರಿಂದ 'ಬಿಎಂಟಿಸಿ ನೌಕರ'ರೇ ಕರ್ತವ್ಯಕ್ಕೆ ಹಾಜರಾಗಿ - ಬಿಎಂಟಿಸಿ ಆದೇಶ

31 May 2021.8:11 PM

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಜೂನ್ 7ರ ನಂತ್ರವೂ ಮತ್ತೊಂದು ವಾರ ವಿಸ್ತರಣೆ ಆಗಲಿದೆ ಎನ್ನಲಾಗುತ್ತಿದೆ. ಆದ್ರೆ.. ಬಿಎಂಟಿಸಿ ಹೊರಡಿಸಿರುವಂತ ಆದೇಶವನ್ನು ನೋಡಿದ್ರೇ.. ಲಾಕ್ ಡೌನ್ ಜೂನ್ 7ರ ನಂತ್ರ ಸಡಿಲ ಆಗಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದ್ರೇ.. ಜೂನ್ 7ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ನೌಕರರಿಗೆ ಸೂಚನೆ ನೀಡಿದೆ.

ಉದ್ಯೋಗಿಗಳಿಗೆ ಗುಡ್‌ ನ್ಯೂಸ್ :‌ ನೀವೀಗ ʼPF ಖಾತೆʼಯಿಂದ ʼಕೋವಿಡ್ 2ನೇ ಮುಂಗಡʼವನ್ನೂ ತೆಗೆದುಕೊಳ್ಬೋದು

ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು, ಬಿಎಂಟಿಸಿಯು ಅತ್ಯವಶ್ಯಕ ಸೇವೆಯಡಿ ಸಾರ್ವಜನಿಕ ಪ್ರಯಾಣಿಕರಿಗೆ ಸುಗಮ ಮತ್ತು ಸಮರ್ಪಕ ಸಾರಿಗೆ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ದಿನಾಂಕ 07-06-2021ರಿಂದ ಹಂತ ಹಂತವಾಗಿ ಅನುಸೂಚಿಗಳ ಆಚರಣೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ.

'ಕೋವ್ಯಾಕ್ಸಿನ್ ಲಸಿಕೆ' ಪಡೆಯೋ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ : ರಾಜ್ಯದಲ್ಲಿ '2ನೇ ಡೋಸ್' ಬಾಕಿ ಇರೋರಿಗೆ ಮಾತ್ರ ಲಸಿಕೆ

ಕೋವಿಡ್-19 ಸೋಂಕು ಪತ್ತೆ ಹಚ್ಚಲು ಹಾಗೂ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಘಟಕದ ಎಲ್ಲಾ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳು ಸೂಚಿಸಿರುವಂತೆ ಎಲ್ಲಾ ಚಾಲನಾ, ತಾಂತ್ರಿಕ, ಆಡಳಿತ ಶಾಖೆಯ ಸಿಬ್ಬಂದಿಗಳು ದಿನಾಂಕ 07-06-2021 ರಿಂದ ದೈನಂದಿನ ಕರ್ತವ್ಯಕ್ಕೆ ಹಾಜರಾಗುವುದು.

Breaking News :‌ ಕೊರೊನಾ ಸಂಕಷ್ಟದ ನಡುವೆಯೂ ಭಾರತದ GDP ಬೆಳವಣಿಗೆ : 2020-21ರ ಆರ್ಥಿಕ ವರ್ಷದಲ್ಲಿ 7.3% ರಷ್ಟಿದೆ: ಕೇಂದ್ರ ಸರ್ಕಾರ

ಪ್ರಸ್ತುತ ಮೇ ಮಾಹೆಯ ಕೊನೆಯಲ್ಲಿದ್ದು, ವೇತನ ಪಾವತಿ ಸಂಬಂಧಿಸಿತ ನಿರ್ದೇಶನಗಳು ಜಾರಿಯಾಗಲಿದ್ದು, ತತ್ಸಂಬಧ ಪೂರಕ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿ ಶಾಖೆ, ಶಿಸ್ತು ಶಾಖೆ ಮತ್ತು ವೇತನ ಬಿಲ್ ಸಿದ್ದಪಡಿಸುವ ವಿಷಯ ನಿರ್ವಾಹಕರು ಹಾಗೂ ಚೀಟಿ, ನಗದು, ಇಂಧನ, ಉಗ್ರಾಣ ಶಾಖೆಯ ವಿಷಯ ನಿರ್ವಾಹಕರು ಕೂಡಲೇ ತಪ್ಪದೇ ದಿನಾಂಕ 07-06-2021ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದಾರೆ. ಒಂದು ವೇಳೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ಮೇಲೆ ಸಂಸ್ಥೆಯ ನಿಯಮಾವಳಿಯಂತೆ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಸಹ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags