ವಾರ್ತಾಭಾರತಿ

554k Followers

ಜೂ.15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭ: ಶಿಕ್ಷಣ ಇಲಾಖೆ

31 May 2021.8:56 PM

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 31: ಪ್ರಸ್ತುತ ಶೈಕ್ಷಣಿಕ ವಾರ್ಷಿಕ ಸಾಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಅವಧಿಯನ್ನು ಶಿಕ್ಷಣ ಇಲಾಖೆ ಮತ್ತೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.

ಜೂ.14ರವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಆದರೆ, ಜೂನ್ 15ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇನ್ನು, ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್, ಸರಕಾರಿ ಶಾಲೆಯ ಶೇ.70ರಷ್ಟು ಮಕ್ಕಳಿಗೆ ಆನ್‍ಲೈನ್ ಪಾಠಗಳನ್ನು ಕೇಳಲು ಸಾಧ್ಯವಾಗಿಲ್ಲ ಎಂಬ ಅರಿವು ನಮಗಿದೆ. ಹಾಗಾಗಿ, ಕೆಲ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ.

ಅದೇ ರೀತಿ, ಪ್ರತಿ ಮಗುವಿಗೂ ಗಮನ ನೀಡುವವರನ್ನು ಗುರುತಿಸಲು ಯೋಜನೆ ರೂಪಿಸುತ್ತೇವೆ. ಸಮಿತಿ ರೂಪುಗೊಂಡ ನಂತರ ನಮ್ಮ ಆಲೋಚನೆಗಳನ್ನು ಸಮಿತಿಯ ಸದಸ್ಯರೊಂದಿಗೆ ಹಂಚಿಕೊಳ್ಳುತ್ತೇವೆ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Varthabharathi

#Hashtags