Kannada News Now

1.8M Followers

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

12 Jun 2021.07:47 AM

ಡಿಜಿಟಲ್‌ ಡೆಸ್ಕ್:‌ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜುಲೈ 2021 ರ ಅಧಿವೇಶನಕ್ಕೆ ಸಿಟಿಇಟಿ 2021ರ ಮಾಹಿತಿ ಬುಲೆಟಿನ್ ಮತ್ತು ಅರ್ಜಿ ನಮೂನೆಯನ್ನು (ಸಿಟಿಇಟಿ 2021 ಪರೀಕ್ಷೆ) ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇನ್ನು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನ ಜುಲೈ ಮತ್ತು ನವೆಂಬರ್‌ನಲ್ಲಿ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತೆ. ಅದ್ರಂತೆ, CTET 2021 ರ ಅರ್ಜಿ ನಮೂನೆ ಮತ್ತು ಅಧಿಸೂಚನೆಯನ್ನು ctet.nic.in ನಲ್ಲಿ CTETಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತೆ.

BIG BREAKING NEWS : ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ವಜಾಗೊಳಿಸಿದ ಡೊಮಿನಿಕಾ ಕೋರ್ಟ್

ಸಿಟಿಇಟಿ 2021 ಪರೀಕ್ಷೆಯನ್ನ ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತದೆ.

ಹಿಂದಿನ ವರ್ಷದ ಪ್ರವೃತ್ತಿಗಳ ಪ್ರಕಾರ ಸುಮಾರು 23 ಲಕ್ಷ ಅಭ್ಯರ್ಥಿಗಳು ಸಿಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಸಿಟಿಇಟಿ ಅರ್ಜಿ ನಮೂನೆಯನ್ನ ಪ್ರತಿವರ್ಷ ಜೂನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಶೀಘ್ರದಲ್ಲೇ ತೆರೆಯುವ ನಿರೀಕ್ಷೆಯಿದೆ. ಆದಾಗ್ಯೂ, ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ. ಸಿಟಿಇಟಿಗೆ ಅರ್ಹತಾ ಮಾನದಂಡಗಳನ್ನ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿಗದಿಪಡಿಸಿದೆ. ವಿವರವಾದ ಅರ್ಹತಾ ಮಾನದಂಡಗಳನ್ನ ಮಾಹಿತಿ ಬುಲೆಟಿನ್ʼನಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಹಲವೆಡೆ ಭಾರಿ ಮಳೆ : ಕರ್ನಾಟಕ , ಕೇರಳದಲ್ಲಿ ಜೂನ್ 15 ರವರೆಗೆ ಮಳೆಯಾಗುವ ಮುನ್ಸೂಚನೆ ನೀಡಿದ ಐಎಂಡಿ

ಸಿಟಿಇಟಿಯಲ್ಲಿ ಎರಡು ಪತ್ರಿಕೆಗಳಿವೆ ಮತ್ತು ಎರಡೂ ಪತ್ರಿಕೆಗಳಿಗೆ ಅರ್ಹತೆ ಸ್ವಲ್ಪ ಭಿನ್ನವಾಗಿರುತ್ತದೆ. ಮಾನದಂಡಗಳ ಪ್ರಕಾರ, ಪೇಪರ್ 1 (ಪ್ರಾಥಮಿಕ ಹಂತ) ದಲ್ಲಿ ಕಾಣಿಸಿಕೊಳ್ಳಲು ಕನಿಷ್ಠ 50% ಅಂಕಗಳೊಂದಿಗೆ 12 ನೇ ಪಾಸ್ ಅಗತ್ಯವಿದೆ. ಅಲ್ಲದೆ, 2 ವರ್ಷದ ಡಿಪ್ಲೊಮಾ ಕೂಡ ಇರಬೇಕು. ಅರ್ಜಿ ಸಲ್ಲಿಸಲು ಹೆಚ್ಚಿನ ವಯಸ್ಸಿನ ಮಿತಿಯಿಲ್ಲ (ಸಿಟಿಇಟಿ 2021 ಪರೀಕ್ಷೆ). ಪೇಪರ್ 2 (ಪ್ರಾಥಮಿಕ ಹಂತ)ಗೆ ಅಗತ್ಯವಾದ ಕನಿಷ್ಠ ಶೈಕ್ಷಣಿಕ ಅರ್ಹತೆಯೆಂದ್ರೆ ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೊಮಾ ಹೊಂದಿರುವ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.

ದೇಶದಲ್ಲಿ ಮಾರಕ 'ಬ್ಲ್ಯಾಕ್ ಫಂಗಸ್' ಅಟ್ಟಹಾಸ : ಇದುವರೆಗೆ 31,000 ಜನರಿಗೆ ಸೋಂಕು ಧೃಡ : 2100 ಮಂದಿ ಬಲಿ

ಸಿಟಿಇಟಿ 2021ಗೆ ಅರ್ಹತೆ ಪಡೆದ ಅಭ್ಯರ್ಥಿಗಳು ನವೋದಯ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಸಿಬಿಎಸ್‌ಇಗೆ ಸಂಬಂಧಿಸಿದ ಖಾಸಗಿ ಶಾಲೆಗಳು ಇತ್ಯಾದಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪೇಪರ್ 1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು 1 ರಿಂದ 5 ನೇ ತರಗತಿಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪೇಪರ್ 2 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಇತ್ತೀಚೆಗೆ, ಟಿಇಟಿ ಅರ್ಹತಾ ಪ್ರಮಾಣಪತ್ರವನ್ನ ಜೀವನ ಪರ್ಯಂತ ಮಾನ್ಯವಾಗಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂದ್ಹಾಗೆ, ಈ ಹಿಂದೆ ಪ್ರಮಾಣಪತ್ರದ ಮಾನ್ಯತೆ 7 ವರ್ಷಗಳು ಆಗಿತ್ತು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags