Zee News ಕನ್ನಡ

352k Followers

ಫೋನಿನಲ್ಲಿ ನಂಬರ್ ಸೇವ್ ಮಾಡದೆ WhatsApp ಮೆಸೇಜ್ ಮಾಡುವ ಸುಲಭ ಉಪಾಯ ಇಲ್ಲಿದೆ

23 Jun 2021.4:59 PM

ನವದೆಹಲಿ : ವಾಟ್ಸಾಪ್ (Whatsapp) ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ನೀವು ವಾಟ್ಸಾಪ್ ನಲ್ಲಿ ಯಾರಿಗಾದರೂ ಸಂದೇಶವನ್ನು ಕಳುಹಿಸಲು ಬಯಸಿದರೆ, ನಂಬರ್ ಅನ್ನು ಸೇವ್ ಮಾಡುವುದು ಅವಶ್ಯಕ. ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ವಾಟ್ಸಾಪ್ ನಲ್ಲಿ ಸುಲಭವಾಗಿ ಮೆಸೇಜ್ ಮಾಡುವುದು ಸಾಧ್ಯವಾಗುತ್ತದೆ.

ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಲು ಹೀಗೆ ಮಾಡಿ :

1. ಇದಕ್ಕಾಗಿ, ಮೊದಲು ನೀವು ವೆಬ್ ಬ್ರೌಸರ್ ಅನ್ನು ಮೊಬೈಲ್ (Mobile) ಅಥವಾ desktop ನಲ್ಲಿ ತೆರೆಯಬೇಕು.
2. ನಂತರ https://api.whatsapp.com/send?phone=XXXXXXXXXXX ಅನ್ನು ಹಾಕಬೇಕು. ಈ ಲಿಂಕ್‌ನಲ್ಲಿ ಎಕ್ಸ್ ಇರುವ ಜಾಗದಲ್ಲಿ ಕಂಟ್ರಿ ಕೋಡ್ ಹಾಕಿ ಫೋನ್ ನಂಬರ್ ನಮೂದಿಸಬೇಕಾಗುತ್ತದೆ.

3. ಇಲ್ಲಿ ಯಾವ ನಂಬರ್ ಸೇವ್ ಮಾಡಲು ಇಷ್ಟಪಡುವುದಿಲ್ಲವೋ ಆ ನಂಬರ್ ಅನ್ನುಹಾಕಬೇಕಾಗುತ್ತದೆ.
4. ನೀವು ಸಂಖ್ಯೆಯನ್ನು ನಮೂದಿಸಿದಾಗ, ಕೆಳಗೆ ಒಂದು ಮೆಸೇಜ್ ಕಾಣಿಸುತ್ತದೆ. Message +911234567890 on WhatsApp ಎಂದು ಇಲ್ಲಿ ಬರೆದಿರುತ್ತದೆ. ಅದನ್ನು ಶೇರ್ ಮಾಡಲು ಟ್ಯಾಪ್ ಮಾಡಿ. ಈಗ ಒಂದು ಪಾಪ್-ಅಪ್ ಸಹ ಕಾಣಿಸುತ್ತದೆ. ಇದರಲ್ಲಿ ನೀವು Open WhatsApp Desktop ಅನ್ನು ಟ್ಯಾಪ್ ಮಾಡಬೇಕು.
5. Looks like you don't have WhatsApp installed! DOWNLOAD or use WhatsApp Web ಎನ್ನುವ ಮೆಸೇಜ್ ಕಾಣಿಸುತ್ತದೆ. ಈ ಸಂದರ್ಭದಲ್ಲಿ ನೀವು ವಾಟ್ಸಾಪ್ ಡೌನ್‌ಲೋಡ್ (Whatsapp download) ಮಾಡಿಕೊಳ್ಳಬೇಕಾಗುತ್ತದೆ. ಅಥವಾ ವಾಟ್ಸಾಪ್ ವೆಬ್‌ನಿಂದ ಆಕ್ಸೆಸ್ ಮಾಡಿಕೊಳ್ಳಬೇಕಾಗುತ್ತದೆ.
ಇಷ್ಟಾದ ನಂತರ ನಂಬರ್ ಸೇವ್ ಮಾಡದೆ, ಸಂದೇಶ ಕಳುಹಿಸುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : Flipkart Mobile Bonanza Sale: ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ iPhone 11 ಮತ್ತು iPhone 12

5 ಡಿವೈಸ್ ಗಳಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಲಿದೆ ವಾಟ್ಸಾಪ್ :
ವಾಟ್ಸಾಪ್ (Whatsapp) ತನ್ನ ಗ್ರಾಹಕರಿಗೆ ಶೀಘ್ರದಲ್ಲೇ ಉಡುಗೊರೆಗಳನ್ನು ನೀಡಲಿದೆ. ಕಂಪನಿಯು ಪ್ರಸ್ತುತ ಮಲ್ಟಿ-ಡಿವೈಸ್ ವೈಶಿಷ್ಟ್ಯದಲ್ಲಿ (WhatsApp Multi-Device) ಕಾರ್ಯನಿರ್ವಹಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ವೈಶಿಷ್ಟ್ಯವನ್ನು ಪ್ರಾರಂಭಿಸಿದ ತಕ್ಷಣ, ನೀವು ಏಕಕಾಲದಲ್ಲಿ 5 ಸಾಧನಗಳಲ್ಲಿ ಒಂದೇ ಸಂಖ್ಯೆಯಿಂದ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : PM Kisan Scheme Mobile App: ಪಿಎಂ ಕಿಸಾನ್ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags