Kannada News Now

1.8M Followers

Karnataka PUC Result 2021 : 'ದ್ವಿತೀಯ ಪಿಯು ಫಲಿತಾಂಶ' ಪ್ರಕಟಣೆಯಲ್ಲಿ ಬದಲಾವಣೆ : 'ಗ್ರೇಡ್ ಬದಲು ಅಂಕಗಳ ಮಾದರಿ'ಯಲ್ಲೇ ಪ್ರಕಟ

18 Jun 2021.3:26 PM

ಬೆಂಗಳೂರು : ರಾಜ್ಯ ಸರ್ಕಾರ ದ್ವಿತೀಯ ಪಿಯು ಪರೀಕ್ಷೆಯನ್ನು ಕೊರೋನಾ ಕಾರಣದಿಂದಾಗಿ ರದ್ದು ಪಡಿಸಿತ್ತು. ಈ ಬಾರಿ ಹಿಂದಿನ ಪ್ರಥಮ ಪಿಯುಸಿ, ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಗ್ರೇಡ್ ರೂಪದಲ್ಲಿ ಫಲಿತಾಂಶ ಪ್ರಕಟಿಸೋದಾಗಿ ಘೋಷಿಸಿತ್ತು. ಆದ್ರೇ.. ಇದೀಗ ದ್ವಿತೀಯ ಪಿಯು ಫಲಿತಾಂಶದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಗ್ರೇಡ್ ಬದಲಾಗಿ ಅಂಕಗಳ ಆಧಾರದ ಮೇಲೆಯೇ ಫಲಿತಾಂಶ ಪ್ರಕಟಗೊಳಿಸೋದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ.

WTC Final : ಮಳೆಯಿಂದಾಗಿ ಮೊದಲ ದಿನದ ಇಂಡಿಯಾ vs ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ರದ್ದು

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ದ್ವಿತೀಯ ಪಿಯು ಫಲಿತಾಂಶವನ್ನು ಗ್ರೇಡ್ ಮಾದರಿಯಲ್ಲಿ ಪ್ರಕಟಿಸೋದರಿಂದಾಗಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಲಿದೆ.

ಇದರಿಂದಾಗಿ ಈ ಕ್ರಮವನ್ನು ಬದಲಿಸಲಾಗುತ್ತಿದ್ದು, ಹಳೆಯ ಪದ್ದತಿಯಂತೆಯೇ ಅಂಕಗಳ ಮಾದರಿಯಲ್ಲಿ ಫಲಿತಾಂಶವನ್ನು ಪ್ರಕಟಿಸೋದಾಗಿ ಹೇಳಿದ್ದಾರೆ.

BIGG NEWS : ರಾಜ್ಯದ 'ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕ'ರಿಗೆ ಗುಡ್ ನ್ಯೂಸ್ : 148 ದೈಹಿಕ ಶಿಕ್ಷಕರಿಗೆ ಮುಂಬಡ್ತಿ, ಜೂನ್.21ರಂದು ಕೌನ್ಸಿಲಿಂಗ್

ಇನ್ನೂ ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಪ್ರಕಟಿಸೋ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಗ್ರೇಡ್ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸೋದ್ರಿಂದ ಪಿಯು ವಿದ್ಯಾರ್ಥಿಗಳಿಗೆ ಮುಂದಿನ ಉದ್ಯೋಗಾವಕಾಶದ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಈ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು, ದ್ವಿತೀಯ ಪಿಯು ಫಲಿತಾಂಶವನ್ನು ಹಳೆಯ ಮಾದರಿಯಲ್ಲಿಯೇ ಅಂಕಗಳ ರೀತಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ಬಾಬಾ ಕಾ ಡಾಬಾ ಕಾಂತ ಪ್ರಸಾದ್ ಆತ್ಮಹತ್ಯೆಗೆ ಯತ್ನ ; ಆಸ್ಪತ್ರೆಗೆ ದಾಖಲು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags