Kannada News Now

1.8M Followers

`ಸಂವೇದಾ' ವೀಡಿಯೋ ಪಾಠ : ರಾಜ್ಯದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

28 Jun 2021.10:33 AM

ಬೆಂಗಳೂರು : ಜುಲೈ 1 ರಿಂದ ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ.

ಇಂದಿನಿಂದ 'ವಿಶ್ವವಿಖ್ಯಾತ ಜೋಗದ ಜಲಪಾತ' ವೀಕ್ಷಕರಿಗೆ ಓಪನ್ : ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ

ಜುಲೈ 1 ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠಗಳು ನಡೆಯಲಿವೆ. ತರಗತಿವಾರು ವೇಳಾಪಟ್ಟಿ ಶಾಲಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು, ಜು. 1 ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಿ, ಫಲಿತಾಂಶ ಆಧರಿಸಿ ಎ,ಬಿ, ಸಿ, ಗ್ರೇಡ್ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ.

1,2, 3 ನೇ ತರಗತಿ ಮಕ್ಕಳಿಗೆ ಭಾನುವಾರ 1,30 ರಿಂದ 12, 1.30 ರಿಂದ 2 ರ ತನಕ ನಲಿಕಲಿ ತರಗತಿ ನಡೆಯಲಿವೆ. 4 ನೇ ತರಗತಿ ಮಕ್ಕಳಿಗೆ ಶನಿವಾರ 10 ರಿಂದ 10.30 ರವರೆಗೆ ಹಾಗೂ 10,30 ರಿಂದ 11 ರ ತನಕ, ಭಾನುವಾರ 10 ರಿಂದ 10.30, 10.30 ರಿಂದ 11 ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ.

ಬೆಂಗಳೂರಿನಲ್ಲಿ ಮತ್ತೊಂದು ಸಹಕಾರಿ ಬ್ಯಾಂಕ್ ವಂಚನೆ : `FIR' ದಾಖಲಾಗುತ್ತಿದ್ದಂತೆ ಮುಖ್ಯಸ್ಥರು ಪರಾರಿ!

5 ನೇ ತರಗತಿ ಮಕ್ಕಳಿಗೆ ಶನಿವಾರ 9 ರಿಂದ 9.30 ರವರೆಗೆ, 9.30 ರಿಂದ 10, ಭಾನುವಾರ 9 ರಿಂದ 9.30 ರಿಂದ 10 ರತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6 ನೇ ತರಗತಿ ಮಕ್ಕಳಿಗೆ ಗುರುವಾರ 10.30 ರಿಂದ 11, 11.30 ರಿಂದ 12, 1.30 ರಿಂದ 2 ರ ತನಕ ಇಂಗ್ಲಿಷ್, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ.

ಚಿನ್ನಾಭರಣ ಖರೀದಿ ಮಾಡುವವರ ಗಮನಕ್ಕೆ : ಇಂದು ದೇಶದಲ್ಲಿ ಎಲ್ಲೆಲ್ಲಿ, ಎಷ್ಟಿದೆ ನೋಡಿ

7 ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ 9ರಿಂದ 9.30, 9.30ರಿಂದ 10.00, 10ರಿಂದ 10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30, 9.30ರಿಂದ 10, 10ರಿಂದ 10.30ರ ತನಕ ಇಂಗ್ಲಿಷ್‌, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು ನಡೆಯಲಿವೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags