Kannada News Now

1.8M Followers

BIGG NEWS : ಖಾಸಗಿ ಆಸ್ಪತ್ರೆಗಳ ವಸೂಲಿಗೆ ಬ್ರೇಕ್ : ರಾಜ್ಯ ಸರ್ಕಾರದಿಂದ 'ಬ್ಲಾಕ್ ಫಂಗಸ್' ಸ್ಕ್ಯಾನಿಂಗ್ ರೇಟ್ ಫಿಕ್ಸ್

28 Jun 2021.7:26 PM

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಇಳಿಕೆಯಾಗುತ್ತಿರುವ ಹೊತ್ತಲ್ಲೇ ಬ್ಲ್ಯಾಕ್ ಫಂಗಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ರಾಜ್ಯಾದ್ಯಂತ ಸದ್ಯ 3,228 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ. ಇದೀಗ ರಾಜ್ಯ ಸರ್ಕಾರ ಕೊರೊನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್ ಪರೀಕ್ಷೆಗೆ ದರ ನಿಗದಿ ಮಾಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸಿ ಟಿ ಸ್ಕ್ಯಾನ್ ಹಾಗೂ ಎಮ್ ಆರ್ ಐ ಸ್ಕ್ಯಾನ್ ಗೆ ರೇಟ್ ಫಿಕ್ಸ್ ಮಾಡಲಾಗಿದ್ದು, ಎಲ್ಲಾ ಆಸ್ಪತ್ರೆಗಳು ಮತ್ತು ಲ್ಯಾಬ್ ಗಳು ಇದೇ ದರದಲ್ಲಿ ಟೆಸ್ಟ್ ಮಾಡಿಸಬೇಕೆಂದು ಹೇಳಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಎಷ್ಟು..?

ಬ್ರೈನ್ MRI ರೂ.3000

ಪ್ಯಾರನೇಸನ್ ಸೈನಸ್ MRI ರೂ 3000

ಕಣ್ಣಿನ MRI ರೂ 3000

ಮೂರು ಒಟ್ಟಿಗೆ ಸೇರಿ MRI 7,500

BIG BREAKING NEWS : ರಾಜ್ಯದಲ್ಲಿ ಇಳಿದ ಕೊರೋನಾ ಅಬ್ಬರ : 24 ಗಂಟೆಯಲ್ಲಿ 2,576 ಜನರಿಗೆ ಕೋವಿಡ್ ದೃಢ, 93 ಮಂದಿ ಸಾವು

ಎಪಿಎಲ್ ಕಾರ್ಡ್ ದಾರರಿಗೆ ಎಷ್ಟು..?

ಬ್ರೈನ್ MRI ರೂ 4000

ಪ್ಯಾರನೇಸಲ್ MRI 4000

ಕಣ್ಣಿನ MRI ರೂ 4000

ಮೂರು ಒಟ್ಟಿಗೆ ಸೇರಿ MRI ರೂ 10,000

ಈ ಮೂಲಕ ಬ್ಲಾಕ್ ಫಂಗಸ್ ಸ್ನ್ಯಾನಿಂಗ್ ಹೆಸರಿನಲ್ಲಿ ಸುಲಿಗೆಗಿಳಿದಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬ್ರೇಕ್ ಹಾಕಿದ್ದು., ಸರ್ಕಾರ ಸಿ ಟಿ ಸ್ಕ್ಯಾನ್ ಹಾಗೂ ಎಮ್ ಆರ್ ಐ ಸ್ಕ್ಯಾನ್ ಗೆ ರೇಟ್ ಫಿಕ್ಸ್ ಮಾಡಿದೆ.

ರಾಜ್ಯಾದ್ಯಂತ ಸದ್ಯ 3,228 ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು, ಸೋಂಕಿತ 2,967 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಬ್ಲ್ಯಾಕ್ ಫಂಗಸ್ ಸೋಂಕಿಗೆ 261 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 1,039 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು, 81 ಜನರು ಮೃತಪಟ್ಟಿದ್ದಾರೆ.

ಕಾಸರಗೋಡಿನ ಕನ್ನಡ ಹೆಸರಿನ ಗ್ರಾಮಗಳ ಮರುನಾಮಕರಣ: ಕೇರಳ ಸಿಎಂ ಜೊತೆ ಚರ್ಚೆಗೆ ಮುಂದಾದ ಸಿಎಂ ಬಿಎಸ್‌ವೈ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags