Kannada News Now

1.8M Followers

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಅನುದಾನಿತ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್

30 Jun 2021.06:14 AM

ಬೆಂಗಳೂರು : ರಾಜ್ಯದ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷರುಗಳನ್ನು 2021-22ನೇ ಸಾಲಿಗೆ ಅದೇ ಸಂಸ್ಥೆಯಿಂದ ನಡೆಯುತ್ತಿರುವ ಮತ್ತೊಂದು ಶಾಲೆಗೆ ಅಥವಾ ಒಂದು ಸಂಸ್ಥೆಯ ಶಿಕ್ಷಕರು ಮತ್ತೊಂದು ಅನುದಾನಿತ ಸಂಸ್ಥೆಯ ಖಾಲಿ ಹುದ್ದೆಗೆ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಮೂಲಕ ಅನುದಾನಿತ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಪರಿಹಾರ : ಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ರಾಜ್ಯದ ಎಲ್ಲಾ ಉಪ ನಿರ್ದೇಶಕರು, ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಕರ್ನಾಟಕ ಶಿಕ್ಷಣ ಕಾಯಿದೆ-1983ರಡಿಯಲ್ಲಿ ರಚಿಸಲಾಗಿರುವ ನಿಯಮ-1999ರ ನಿಯಮ-12ರನ್ವಯ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಅದೇ ಸಂಸ್ಥೆಯಿಂದ ನಡೆಯುತ್ತಿರುವ ಮತ್ತೊಂದು ಅನುದಾನಿತ ಶಾಲೆಗೆ ಅಥವಾ ಒಂದು ಸಂಸ್ಥೆಯ ಅನುದಾನಿತ ಶಿಕ್ಷಕರುಗಳನ್ನು ಮತ್ತೊಂದು ಅನುದಾನಿತ ಸಂಸ್ಥೆಯಿಂದ ನಡೆಯುತ್ತಿರುವ ಅನುದಾನಿತ ಶಾಲೆಯಲ್ಲಿನ ಖಾಲಿ, ಪರಸ್ಪರ ಹುದ್ದೆಗಳಿಗೆ ವರ್ಗಾಯಿಸಲು ಕೋರಿ ಸಂಸ್ಥೆಗಳು ಸಲ್ಲಿಸಿರುವ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ, ವರ್ಗಾವಣೆ ಬಯಸಿರುವ ಶಾಲೆಯಲ್ಲಿನ ಮಕ್ಕಳ ದಾಖಲಾತಿ, ಹಾಜರಾತಿಗೆ ಅನುಗುಣವಾಗಿ ಶಿಕ್ಷಕರ ಮಕ್ಕಳ ಅನುಪಾತ ( 1 : 40) ಅನುಗುಣವಾಗಿ ಶಿಕ್ಷಕರ ಅವಶ್ಯಕತೆಯ ಬಗ್ಗೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರುಗಳು ಪರಿಶೀಲಿಸಿ ಎಲ್ಲಾ ದೃಢೀಕೃತ ದಾಖಲೆಗಳ ಸಹಿತ ಸ್ಪಷ್ಟವಾದ ಶಿಪಾರಸ್ಸಿನೊಂದಿಗೆ ಸಲ್ಲಿಸಲು ಸೂಚಿಸಿದ್ದಾರೆ.

`SBI' ಗ್ರಾಹಕರಿಗೆ ಮಹತ್ವದ ಮಾಹಿತಿ : ನಾಳೆಯಿಂದ ಬದಲಾಗಲಿದೆ ʼವಿತ್‌ ಡ್ರಾʼ ನಿಯಮ, ಹೊಸ ಶುಲ್ಕ ಅನ್ವಯ!

ಇದಷ್ಟೇ ಅಲ್ಲದೇ ಶಿಫಾರಸ್ಸು ಇಲ್ಲದೇ ಸಲ್ಲಿಸುವಂತಹ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುವುದು ಎಂಬುದಾಗಿಯೂ ತಿಳಿಸಿದ್ದಾರೆ.

ಹೀಗಿವೆ ಪ್ರಮುಖ ದಿನಾಂಕಗಳು..

  • ಆಡಳಿತ ಮಂಡಳಿಗಳು ವರ್ಗಾವಣೆಗಾಗಿ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವ ಅಂತಿಮ ದಿನಾಂಕ ಜುಲೈ.1, 2021 ರಿಂದ ಶಾಲೆ ಪ್ರಾರಂಭವಾಗಿ ಒಂದು ತಿಂಗಳ ಒಳಗಾಗಿ ಸಲ್ಲಿಸುವುದು.
  • ವಿವಿಧ ಆಡಳಿತ ಮಂಡಳಿಗಳು ವರ್ಗಾವಣೆ ಕೋರಿ ಸಲ್ಲಿಸುವ ಪ್ರಸ್ತಾವನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪ ನಿರ್ದೇಶಕರಿಗೆ ಸಲ್ಲಿಸುವ ದಿನಾಂಕ - ಸ್ವೀಕೃತವಾದ ಪ್ರಸ್ತಾವನೆಯನ್ನು 5 ದಿನಗಳೊಳಗಾಗಿ ಸಲ್ಲಿಸುವುದು.
  • ಉಪ ನಿರ್ದೇಶಕರು ಸೂಕ್ತ ಶಿಫಾರಸ್ಸಿನೊಂದಿಗೆ ಆಯುಕ್ತರ, ಅಪರ ಆಯುಕ್ತರ ಕಚೇರಿಗೆ ಸಲ್ಲಿಸಬೇಕಾದ ದಿನಾಂಕ - ಸ್ವೀಕೃತವಾದ ಪ್ರಸ್ತಾವನೆಯನ್ನು 7 ದಿನಗಳೊಳಗಾಗಿ ಸಲ್ಲಿಸುವುದು

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದಂತ ದಾಖಲೆಗಳು

  • ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಎರಡು ಶಾಲೆಗಳಲ್ಲಿ ಅನುದಾನಸಹಿತವಾಗಿ ಮಂಜೂರಾದಹುದ್ದೆ, ಕರ್ತವ್ಯ, ಖಾಲಿ ಹುದ್ದೆ ವಿವರ
  • ಎರಡೂ ಶಾಲೆಗಳಲ್ಲಿನ ಎಸ್ ಎ ಟಿ ಎಸ್ ಪ್ರಕಾರ ಮಕ್ಕಳ ದಾಖಲಾತಿ - ಹಾಜರಾತಿ
  • ಇತ್ತೀಚಿನ ಹೆಚ್ ಆರ್ ಎಂ ಎಸ್ ಬಿಲ್ಲಿನ ಪ್ರತಿ
  • ಎರಡೂ ಆಡಳಿತಮಂಡಳಿಗಳ ಒಪ್ಪಿಗೆ ಪತ್ರ
  • ವರ್ಗಾವಣೆ ಬಯಸಿರುವ ಶಿಕ್ಷಕರ ಒಪ್ಪಿಗೆ ಪತ್ರ
  • ಶಿಕ್ಷಕರ ನೇಮಕಾತಿ ಅನುಮೋದನೆಯ ಪ್ರತಿ
  • ಖಾಲಿ ಹುದ್ದೆಗೆ ವರ್ಗಾವಣೆ ಬಯಸಿದ್ದಲ್ಲಿ ಯಾವ ಕಾರಣದಿಂದ ತೆರವಾಗಿದೆ ಎನ್ನುವ ಬಗ್ಗೆ ಅಗತ್ಯ ದಾಖಲೆ
  • ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ವರ್ಗಾವಣೆ ಬಯಸುವ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲಿನ ದಾಖಲೆಗಳನ್ನು ದೃಢೀಕರಿಸಿ, ಆ ಶಾಲೆಗೆ ಶಿಕ್ಷಕರು ಅಗತ್ಯತೆಯ ಬಗ್ಗೆ ಸ್ಪಷ್ಟಪಡಿಸಿ, ಶಿಕ್ಷಕರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರುಗಳಿಗೆ ಅಭಿಪ್ರಾಯದೊಂದಿಗೆ ದಾಖಲೆ ಸಲ್ಲಿಸುವುದು.
  • ಉಪ ನಿರ್ದೇಶಕರು ನಿರ್ದೇಶಕರಿಗೆ ಸಲ್ಲಿಸುವ ಮುಖಪುಟದಲ್ಲಿ ಸ್ಪಷ್ಟವಾಗಿ ಶಿಫಾರಸ್ಸು ಮಾಡತಕ್ಕದ್ದು.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags