ಕನ್ನಡದುನಿಯಾ

1.6M Followers

CBSE 10 ನೇ ತರಗತಿ ಫಲಿತಾಂಶದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

30 Jun 2021.1:50 PM

ಸಿಬಿಎಸ್​ಇ ಶಿಕ್ಷಣವನ್ನ ನೀಡುತ್ತಿರುವ ಶಾಲೆಗಳಿಗೆ 10ನೇ ತರಗತಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನ ಮಂಡಳಿಗೆ ಸಲ್ಲಿಸಲು ಇದು ಕೊನೆಯ ದಿನವಾಗಿದೆ. ಸಿಬಿಎಸ್​ಇ ಬೋರ್ಡ್​ ಮೇ 18ರಂದು ಈ ಗಡುವನ್ನ ಜೂನ್​​ 30ರವರೆಗೆ ವಿಸ್ತರಣೆ ಮಾಡಿತ್ತು.

ವಿದ್ಯಾರ್ಥಿಗಳ ಅಂಕಗಳನ್ನ ಜೂನ್​ 30ರೊಳಗಾಗಿ ಸಿಬಿಎಸ್​ಇ ಬೋರ್ಡ್​ಗೆ ಸಲ್ಲಿಕೆ ಮಾಡಬೇಕು. ಫಲಿತಾಂಶದ ಕಮಿಟಿಯು ಸಿಬಿಎಸ್​ಇ ನೀಡಿರುವ ಯೋಜನೆಗಳನ್ನ ಆಧರಿಸಿ ತಮ್ಮದೇ ಆದ ವೇಳಾಪಟ್ಟಿ ಮಾಡಬಹುದು ಎಂದು ಸಿಬಿಎಸ್​ಇ ಪರೀಕ್ಷಾ ನಿಯಂತ್ರಕ ಸದಸ್ಯ ಭಾರದ್ವಾಜ್​ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ನೀಡಬೇಕಾದ ಅಂಕಗಳನ್ನ ಅಂತಿಮ ಮಾಡಲು ಪ್ರಾಂಶುಪಾಲರು ಹಾಗೂ 7 ಶಿಕ್ಷಕರನ್ನೊಳಗೊಂಡ ಫಲಿತಾಂಶ ಸಮಿತಿಯನ್ನ ರಚನೆ ಮಾಡುವಂತೆ ಸಿಬಿಎಸ್​ಇ ಸಂಬಂಧಪಟ್ಟ ಶಾಲೆಗಳಿಗೆ ಸೂಚನೆಯನ್ನ ನೀಡಿತ್ತು. ಈ ಸಮಿತಿಯಲ್ಲಿ ಆಯಾ ಶಾಲೆಯ ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಇಬ್ಬರು ಭಾಷಾ ಶಿಕ್ಷಕರು ಇರಬೇಕು.

ಇದರ ಜೊತೆಯಲ್ಲಿ ಅನ್ಯ ಶಾಲೆಯ ಇಬ್ಬರು ಶಿಕ್ಷಕರನ್ನ ಈ ಸಮಿತಿಗೆ ಸೇರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags