Kannada News Now

1.8M Followers

8 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಈ ಬಾರಿಯೂ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಇಲ್ಲ!

08 Jul 2021.07:23 AM

ಬೆಂಗಳೂರು : ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಕೊರೊನಾ ಕಾರಣದಿಂದ ಸರ್ಕಾರಿ/ಅನುದಾನಿತ ಶಾಲೆಗಳ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸೈಕಲ್ ಸಿಗುವುದು ಅನುಮಾನ ಎನ್ನಲಾಗಿದೆ.

2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿಯರು ಹಾಗೂ 2,59,624 ಬಾಲಕರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು. ಕಳೆದ ವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಅಂದಾಜು ಇತ್ತು. ಆದರೆ ಕೊರೊನಾ ಲಾಕ್ ಡೌನ್, ಅನುದಾನದ ಕೊರತೆ ಕಾರಣಗಳಿಂದಾಗಿ ಸೈಕಲ್ ವಿತರಣೆ ಕೈಬಿಡಲಾಗಿತ್ತು.

ಈ ಬಾರಿಯೂ ಸೈಕಲ್ ವಿತರಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಸಂಪುಟ ಬದಲಾವಣೆಯಿಂದ ದೇಶದ ಸಮಸ್ಯೆಗಳು ಪರಿಹಾರವಾಗುತ್ತದೆಯೇ? : ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿ

ಪ್ರತೀ ವರ್ಷ ಆಗಸ್ಟ್ ವೇಳೆಗೆ ಸೈಕಲ್ ವಿತರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಭೌತಿಕ ತರಗತಿ ಆರಂಭವಾಗುವ ಸಾಧ್ಯತೆ ಇಲ್ಲ. ಹೀಗಾಗಿ ಈ ಬಾರಿಯೂ ಸೈಕಲ್ ವಿತರಣೆಗೆ ಬ್ರೇಕ್ ಬೀಳಲಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರದಿಂದ ಚಲನಚಿತ್ರ ಮಂದಿರ ಮಾಲೀಕರಿಗೆ ಸಿಹಿಸುದ್ದಿ : 'ಆಸ್ತಿ ತೆರಿಗೆ' ಪಾವತಿಗೆ ವಿನಾಯ್ತಿ ಘೋಷಣೆ

ದೊಡ್ಡಬಳ್ಳಾಪುರದಲ್ಲಿ ದೇಶದ ಮೊದಲ `ಮೇಕ್ ಶಿಫ್ಟ್' ಆಸ್ಪತ್ರೆಗೆ ಸಿಎಂ ಬಿಎಸ್ ವೈ ಚಾಲನೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags