Kannada News Now

1.8M Followers

'SSLC ವಿದ್ಯಾರ್ಥಿ'ಗಳೇ ಗಮನಿಸಿ : ನಾಳೆ ನಿಮ್ಮ ಪರೀಕ್ಷೆ ಗೊಂದಲ ಕುರಿತಂತೆ 'ಶಿಕ್ಷಣ ಸಚಿವ'ರಿಂದ ಸಂವಾದ ಕಾರ್ಯಕ್ರಮ

08 Jul 2021.3:03 PM

ಬೆಂಗಳೂರು : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಹೊಸ ಮಾದರಿಯ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡುವ ಕುರಿತು 'ಬನ್ನಿ ವಿದ್ಯಾರ್ಥಿಗಳೇ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ'- ಎಂಬ ಧ್ಯೇಯವಾಖ್ಯದೊಂದಿಗೆ ಮಕ್ಕಳೊಂದಿಗೆ ಸಂವಾದ ನಡೆಸುವಂತ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶೀಘ್ರದಲ್ಲೇ ಕೈಗಾರಿಕಾ ಆಸ್ತಿ ತೆರಿಗೆ ಆಕರಣೆಯ ಬಗ್ಗೆ ನಿರ್ಧಾರ - ಸಚಿವ ಜಗದೀಶ್‌ ಶೆಟ್ಟರ್‌

ಬೆಂಗಳೂರು ಬನಶಂಕರಿಯ ಡಿ ಎಸ್ ಇ ಆರ್ ಟಿ ಯಲ್ಲಿ ದಿನಾಂಕ 09-07-2021ರಂದು ಬೆ.11ರಿಂದ ಅಪರಾಹ್ನ 1.30 ರವರೆಗೆ ಈ ಕಾರ್ಯಕ್ರಮವನ್ನು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ನಡೆಸಿಕೊಡಲಿದ್ದಾರೆ.

Health Tips : ನಿಮ್ಮ 'ರೋಗನಿರೋಧಕ ಶಕ್ತಿ' ಹೆಚ್ಚಿಸಿಕೊಳ್ಳಲು, 'ಈ ಸಲಾಡ್' ಉಪಯೋಗಕಾರಿ.!

ರಾಜ್ಯದ ವಿವಿಧೆಡೆಯ 10ನೇ ತರಗತಿ ಪರೀಕ್ಷಾರ್ಥಿಗಳು ಆಯಾ ಜಿಲ್ಲೆಗಳ ಡಯಟ್ ಮತ್ತು ಡಿಡಿಪಿಐ ಕಚೇರಿಗಳಿಂದ ಮಾನ್ಯ ಸಚಿವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

'ವಿಧಾನ ಪರಿಷತ್'ನ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು : ತನಿಖೆಗೆ ಒತ್ತಾಯಿಸಿ ಸಭಾಪತಿ, ಸಿಎಂಗೆ ಪತ್ರ

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕುರಿತಂತೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಮಧ್ಯಾಹ್ನ 1.30ಕ್ಕೆ ಡಿಎಸ್ ಇಆರ್ ಟಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕುರಿತಂತೆ ಪತ್ರಿಕಾಗೋಷ್ಠಿಯನ್ನುದ್ದೇಸಿ ಮಾತನಾಡಲಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags