Kannada News Now

1.8M Followers

BIG BREAKING NEWS : 'NEET-2021 ಪರೀಕ್ಷೆ'ಗೆ ದಿನಾಂಕ ಪ್ರಕಟ : ಸೆ.12ಕ್ಕೆ ಪರೀಕ್ಷೆ, ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

12 Jul 2021.6:26 PM

ನವದೆಹಲಿ : ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದಂತ ನೀಟ್-2021ರ ಪರೀಕ್ಷೆಗೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 12ಕ್ಕೆ ಪರೀಕ್ಷೆಗೆ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

'ಅನುಕಂಪದ ಆಧಾರದ ನೇಮಕಾತಿ'ಯಲ್ಲಿ ಮಹತ್ವದ ಬದಲಾವಣೆ : ಹೀಗಿದೆ 'ಪ್ರಸ್ತುತ ತಿದ್ದುಪಡಿ ಆದೇಶದ ನಿಯಮ'ಗಳು

ಈ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, NEET(UG)-2021ರ ಪರೀಕ್ಷೆಯನ್ನು ಸೆಪ್ಟೆಂಬರ್ 12ರಂದು ನಡೆಸಲಾಗುತ್ತಿದೆ. ಕೊರೋನಾ ಸೋಂಕಿನ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುತ್ತಿದೆ.

ಇಂತಹ ಪರೀಕ್ಷೆಗೆ ನಾಳೆ ಸಂಜೆ 5 ಗಂಟೆಯಿಂದ ಅರ್ಜಿ ಸಲ್ಲಿಕೆ NTA ವೆಬ್ ಸೈಟ್ ಮೂಲಕ ಆರಂಭಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags