ಆಂದೋಲನ

31k Followers

ಕೆಎಸ್‌ಒಯು-ರಜತ ಮಹೋತ್ಸವ: ದಿನದ 24 ಗಂಟೆ ಗ್ರಂಥಾಲಯ ಓಪನ್‌, ವಿದ್ಯಾರ್ಥಿಗಳಿಗೆ ವೈಫೈ ಸೌಲಭ್ಯ ಸೇರಿ ಹಲವು ಕ್ರಮ

13 Jul 2021.2:56 PM

ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸಿದ್ದು, ರಜತ ಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ. ವಿಶ್ವವಿದ್ಯಾನಿಲಯ ಉನ್ನತಿಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್‌ ಮಾತನಾಡಿ, ಬೆಳ್ಳಿ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿರುವ ಕೆಎಸ್‌ಒಯು ಅನ್ನು ಮತ್ತಷ್ಟು ಉನ್ನತೀಕರಣಗೊಳಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕ್ರಿಯಾ ಯೋಜನೆ, ಉನ್ನತ ಮಟ್ಟದ ಸಮಿತಿ ರಚನೆ, ಹೊಸ ಕಾರ್ಯಕ್ರಮಗಳ ಪರಿಚಯ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಪೂರಕವಾದ ಎಲ್ಲಾ ಶೈಕ್ಷಣಿಕ ಸೌಲಭ್ಯವುಳ್ಳ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಗ್ರಂಥಾಲಯದ ವಸತಿ ಸೌಲಭ್ಯವಿರುವ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಹೊಂದಲಾಗಿದೆ ಎಂದು ತಿಳಿಸಿದರು.

ವಿವಿಯಲ್ಲಿ ಈಗಾಗಲೇ 9 ಪೀಠಗಳು ಕಾರ್ಯಾರಂಭ ಮಾಡುತ್ತಿದ್ದು, ಹೊಸದಾಗಿ 4 ಪೀಠಗಳ ಸ್ಥಾಪನೆ, ಪ್ರಸಕ್ತ ಸಾಲಿನಿಂದ ಯುಜಿ/ಪಿಜಿ ಕಾರ್ಯಕ್ರಮಗಳಿಗೆ ವಿವಿಯಲ್ಲಿ ಸಿಬಿಸಿಎಸ್‌ ಅಳವಡಿಕೆ, ವಿವಿ ಕ್ಯಾಂಪಸ್‌ನಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ವೈಫೈ ಮುಖಾಂತರ ನೀಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಯುಜಿಸಿಯಿಂದ 2022-2023 ರವರೆಗೆ ‌ಮಾನ್ಯತೆ ನೀಡಿದ್ದು, ಮುಂದಿನ ಅವಧಿಯ ಮಾನ್ಯತೆ ನವೀಕರಣಕ್ಕೆ ನ್ಯಾಕ್ ಮಾನ್ಯತೆ ಪಡೆಯಲು ಅಗತ್ಯ ಕ್ರನಕೈಗೊಳ್ಳಲಾಗಿದೆ‌ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Andolana