Kannada News Now

1.8M Followers

BIG BREAKING NEWS : ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗೆ 'ವಿಶೇಷ ಕೌನ್ಸಿಲಿಂಗ್' ವೇಳಾಪಟ್ಟಿ ಪ್ರಕಟ : ಹೀಗಿದೆ ವೇಳಾಪಟ್ಟಿ

30 Jun 2021.4:59 PM

ವರದಿ : ವಸಂತ ಬಿ ಈಶ್ವರಗೆರೆ

ಬೆಂಗಳೂರು : ಜುಲೈ.1ರ ನಾಳೆಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಈ ಬಳಿಕ, 2019-20ನೇ ಸಾಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ತಾಲೂಕಿನ ಹೊರಗೆ ಅಥವಾ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಆ ಸಂಬಂಧಪಟ್ಟ ತಾಲೂಕು, ಜಿಲ್ಲೆಯೊಳಗೆ ಸ್ಥಳ ನಿಯುಕ್ತಿ ಪ್ರಯೋನವನ್ನು ನೀಡುವುದಕ್ಕೆ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು, ಸ್ಥಳ ಆಯ್ಕೆ ಮಾಡಿಕೊಳ್ಳಲು ಒಂದು ಸಲದ ಕ್ರಮವಾಗಿ ವಿಶೇಷ ಕೌನ್ಸಿಲಿಂಗ್ ಹಮ್ಮಿಕೊಂಡು, ಜುಲೈ.12, 2021ರಿಂದ ಆರಂಭವಾಗುವಂತೆ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ರಾಜ್ಯದಲ್ಲಿ ಮುಂದಿನ 20 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ - ಸಚಿವ ಆರ್.ಅಶೋಕ್ ಭವಿಷ್ಯ

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಅನ್ಬುಕುಮಾರ್.ವಿ ಅವರು, 2019-20ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮಗಳು 2017ರ ಶಿಕ್ಷಕರ ವರ್ಗಾವಣೆ ಕಾಯ್ದೆಯ ಸೆಕ್ಷನ್ 3(ಎ) ಮತ್ತು ಸದರಿ ವರ್ಗಾವಣೆ ನಿಯಮಗಳ ನಿಯಮ 6(3) (i) (ii) (iv)ರ ಅಡಿಯಲ್ಲಿನ ವರ್ಗಾವಣೆ ಪ್ರಕರಣಗಳಲ್ಲಿ ಕೆಲವು ಪ್ರಾಥಮಿಕ ಶಾಲಾ ಶಿಕ್ಷಕರು ತಾಲೂಕಿನಿಂದ ಹೊರಗೆ ಹಾಗೂ ಕೆಲವು ಪ್ರೌಢ ಶಾಲಾ ಶಿಕ್ಷಕರು ಜಿಲ್ಲೆಯಿಂದ ಹೊರಗಡೆ ಸ್ಥಳ ನಿಯುಕ್ತಿಗೊಂಡಿದ್ದು, ಬಾಧಿತರಾಗಿರುತ್ತಾರೆ.

ರಾಜ್ಯ ಸರ್ಕಾರದಿಂದ 'ಆಡಳಿತ ಯಂತ್ರ'ಕ್ಕೆ ಮೇಜರ್ ಸರ್ಜರಿ : 7 `IAS' ಅಧಿಕಾರಿಗಳ ವರ್ಗಾವಣೆ

2019-20ನೇ ಸಾಲಿನಲ್ಲಿನ ವರ್ಗಾವಣೆಗಳಲ್ಲಿ ಮೇಲಿನಂತೆ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢ ಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಆ ಸಂಬಂಧಪಟ್ಟ ತಾಲ್ಲೂಕು ಅಥವಾ ಜಿಲ್ಲೆಯೊಳಗೆ ಸ್ಥಳನಿಯುಕ್ತಿ ಪ್ರಯೋಜನವನ್ನು ನೀಡುವುದಕ್ಕೆ, ಒಂದು ಸಲ ಕ್ರಮವಾಗಿ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ 2021 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮ 2021ರಲ್ಲಿನ ಅವಕಾಶಗಳನ್ವಯ ವಿಶೇಷ ಕೌನ್ಸಿಲಿಂಗ್ ಹಮ್ಮಿಕೊಂಡಿರುವ ಬಗ್ಗೆ ಈ ಕೆಳಕಂಡ ವೇಳಾಪಟ್ಟಿಯನ್ನು ಹಾಗೂ ಮಾರ್ಗಸೂಚಿ ಕ್ರಮಗಳನ್ನು ನಿಗದಿಪಡಿಸಿದೆ.

'30 ಬಾರಿ ಸಂಚಾರಿ ನಿಯಮ' ಉಲ್ಲಂಘಿಸಿ, ಸಿಕ್ಕಿಬಿದ್ದ ಈ 'ಬೈಕ್ ಸವಾರ' ಕಟ್ಟಿದ ದಂಡ ಎಷ್ಟು ಗೊತ್ತೇ.?

ಹೀಗಿದೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಶೇಷ ಕೌನ್ಸಿಲಿಂಗ್ ವರ್ಗಾವಣಾ ವೇಳಾಪಟ್ಟಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags