Kannada News Now

1.8M Followers

'ವಿದ್ಯಾರ್ಥಿವೇತನ' : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

30 Jun 2021.8:48 PM

ಡಿಜಿಟಲ್ ಡೆಸ್ಕ್ : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು , ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 1 ಕೊನೆಯ ದಿನಾಂಕವಾಗಿದೆ.

ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು , ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂ ಚಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.

ಈಗಾಗಲೇ ಅರ್ಜಿ ಸಲ್ಲಿಕೆಯ ಅವಧಿಯನ್ನು ಸಾಕಷ್ಟು ಬಾರಿ ವಿಸ್ತರಣೆ ಮಾಡಿತ್ತು, ಕೊನೆಯದಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 1 ಕೊನೆಯ ದಿನಾಂಕವಾಗಿದೆ.

ಜುಲೈ 5ರ ಬಳಿಕವೂ ಕೊಡಗು ಜಿಲ್ಲೆಯಲ್ಲಿ 'ಲಾಕ್ ಡೌನ್' ಮುಂದುವರಿಕೆ…?

(Post-matric, Pre matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ..

ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದವರನ್ನ ʼಪ್ರಯಾಣ ನಿಷೇಧದಿಂದ ವಿನಾಯಿತಿʼ ನೀಡುವಂತೆ ಇಯುಗೆ ಭಾರತ ಒತ್ತಾಯ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags