Kannada News Now

1.8M Followers

ಶಾಲಾ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಉಚಿತ 'ಸ್ಮಾರ್ಟ್ ಫೋನ್' ವಿತರಣೆ!

02 Jul 2021.05:59 AM

ಡಿಜಿಟಲ್ ಡೆಸ್ಕ್ : ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು , ಶಾಲಾ ಮಕ್ಕಳಿಗೆ ಉಚಿತ ' ಸ್ಮಾರ್ಟ್ ಫೋನ್ ' ವಿತರಣೆ ನೀಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

BIGG NEWS : ನೂತನ ವೈದ್ಯರಿಗೆ 'ಗ್ರಾಮೀಣ ಸೇವೆ' ಕಡ್ಡಾಯ ವಿಚಾರ : 'ಹೈಕೋರ್ಟ್' ಹೇಳಿದ್ದೇನು..?

ಈ ಹಿನ್ನೆಲೆ ಮಕ್ಕಳಿಗೆ ಸ್ಮಾರ್ಟ್‌ ಫೋನ್ ನೀಡಿ ಆ ಮೂಲಕ ಖಾಸಗಿ ಶಾಲೆಗಳಂತೆಯೇ ಆನ್‌ಲೈನ್ ಕ್ಲಾಸ್ ಮಾಡಲು ಚಿಂತಿಸಿದೆ. ಇದಕ್ಕಾಗಿ ಕೆಲವು ದಾನಿಗಳಿಂದ ಸ್ಮಾರ್ಟ್‌ ಫೋನ್‌ಗಳನ್ನು ದಾನವಾಗಿಯೂ ಪಡೆಯುತ್ತಿದೆ.

ಸರ್ಕಾರದ ಹಂತದಲ್ಲೂ ಫೋನ್ ಖರೀದಿಸಲು ಚಿಂತಿಸಿದೆ.

'PUC' ಪರೀಕ್ಷೆ ರದ್ದಾದ ಮೇಲೆ 'SSLC' ಪರೀಕ್ಷೆ ಯಾಕೆ..? : ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗರಂ

ರಾಜ್ಯ ಸರ್ಕಾರದಿಂದ ಸಮೀಕ್ಷೆ

ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ 93 ಲಕ್ಷ ವಿದ್ಯಾರ್ಥಿಗಳ ಪೈಕಿ 31 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾಟ್‌ ಫೋನ್ ಇಲ್ಲ.ಇನ್ನೂ 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ ಮತ್ತು ರೇಡಿಯೋ ಎರಡೂ ಇಲ್ಲ ಎಂಬ ವಿಚಾರ ರಾಜ್ಯ ಸರ್ಕಾರ ನಡೆದ ಸಮೀಕ್ಷೆಯಲ್ಲಿ ತಿಳಿದಿದೆ. ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ 93,01,805 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು,. ಈ ಪೈಕಿ 79,33,029 ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಇದೆ. 58,59,907 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ ಇದೆ. ಆದರೆ, 31,27,524 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇನ್ನೂ 51,34,386 ವಿದ್ಯಾರ್ಥಿಗಳ ಬಳಿ ಇಂಟರ್‌ನೆಟ್ ಇದ್ದರೂ, 37,79,965 ವಿದ್ಯಾರ್ಥಿಗಳ ಬಳಿ ಇಂಟರ್‌ನೆಟ್ ಇಲ್ಲ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಕೊರೊನಾ ಹಿನ್ನೆಲೆ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಸಾಧ್ಯವಾಗಲಿಲ್ಲ, ಕೇವಲ ಆನ್ಲೈನ್ ಕ್ಲಾಸ್ ಗಳು ನಡೆದಿವೆ. ಇನ್ನೂ, ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ ಎನ್ನುವುದನ್ನು ಈಗಲೇ ಹೇಳಲಾಗುವುದಿಲ್ಲ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಉಚಿತವಾಗಿ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. ಆನ್ಲೈನ್ ಕ್ಲಾಸ್ ನಿಂದ ಯಾವ ಮಕ್ಕಳು ಕೂಡ ವಂಚಿತರಾಗಬಾರದು. , ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದ್ದು, ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳ ನೆರವಿಗೆ ಸರ್ಕಾರ ಧಾವಿಸಲಿದೆ.

ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ವಿದ್ಯಾರ್ಥಿಗಳ ಬಳಿ ಸ್ಮಾಟ್‌ ಫೋನ್ ಇದ್ದೇ ಇರುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಬಳಿ ಫೋನ್ ಇರುವುದೇ ಕಷ್ಟ. ಆದ್ದರಿಂದ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಿಂದ ಈ ಸಮೀಕ್ಷೆ ಮಾಡಿಸಿದೆ ಎನ್ನಲಾಗಿದೆ.





Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags